ಕೋಲಾರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ (ನೋಂದಣಿ), ಅರಳೇರಿ ಮುಖ್ಯರಸ್ತೆ, ಅದರ್ಶನಗರ, ಮಾಲೂರು-563 130, ಕೋಲಾರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಪಟ್ಟಣದ ಅರಳೇರಿ ಮುಖ್ಯರಸ್ತೆಯಲ್ಲಿರುವ ಆದರ್ಶನಗರದಲ್ಲಿರುತ್ತದೆ. ದೇವಾಲಯವು ಮಾಲೂರು ತಾಲ್ಲೂಕು ಕಚೇರಿಯ ಪಕ್ಕದಲ್ಲಿದ್ದು ಮಾಲೂರು ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಗಳ ಅಂತರದಲ್ಲೂ ಹಾಗೂ ಮಾಲೂರು ರೈಲು ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ಗಳ ಅಂತರದಲ್ಲೂ ಇರುತ್ತದೆ.
ಈ ದೇವಾಲಯದ ಭೂಮಿ ಪೂಜೆಯನ್ನು ಫೆಬ್ರವರಿ 2008 ರಲ್ಲಿ ಮಾಡಲಾಯಿತು.
ದೇವಾಲಯವಿರುವ ಸ್ಥಳ ಮತ್ತು ದೇವಾಲಯದ ಪಕ್ಕದಲ್ಲಿರುವ ಉದ್ಯಾನವನವಿರುವ ಸುಮಾರು 4500 ಚದರ ಅಡಿ ಸ್ಥಳವನ್ನು ಮಾಲೂರು ನಗರಸಭೆಯವರು ದೇವಾಲಯದ ಟ್ರಸ್ಟ್ ಗೆ ಮಂಜೂರು ಮಾಡಿರುತ್ತಾರೆ.
ಈ ದೇವಾಲಯವನ್ನು 12ನೇ ಫೆಬ್ರವರಿ 2009 ರಂದು ಸಿದ್ಧಗಂಗಾ ಮಠದ ಸ್ವಾಮೀಜಿಗಳಾದ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿರುತ್ತಾರೆ.
ಶ್ರೀ.ಶ್ರೀನಿವಾಸ ಮುರ್ತಿಯವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ದಿನನಿತ್ಯದ ಆಗು ಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದಲ್ಲಿ ಸುಮಾರು 5 1/2 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸುಮಾರು 3 ಅಡಿ ಎತ್ತರದ ಪಂಚ ಲೋಹದ ಸಾಯಿಬಾಬಾ ವಿಗ್ರಹವನ್ನು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪಕ್ಕದಲ್ಲಿ ಇರಿಸಲಾಗಿದ್ದು ಇದನ್ನು ವಿಶೇಷ ದಿನಗಳಲ್ಲಿ ಮತ್ತು ಉತ್ಸವದ ದಿನಗಳಲ್ಲಿ ಉತ್ಸವ ಮುರ್ತಿಯಂತೆ ಬಳಸಲಾಗುತ್ತಿದೆ. ಸುಮಾರು 1 1/2 ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ಜರ್ಮನ್ ಬೆಳ್ಳಿಯಲ್ಲಿ ಮಾಡಿದ ಗಣಪತಿ ಮತ್ತು ರಾಧಾಕೃಷ್ಣ ದೇವರ ವಿಗ್ರಹಗಳು ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸಾಯಿಭಕ್ತರು ನೋಡಬಹುದಾಗಿದೆ.
ದೇವಾಲಯದ ಗರ್ಭಗುಡಿಯಲ್ಲಿ ಪಂಚಲೋಹದಲ್ಲಿ ಮಾಡಿದ ಸುಮಾರು 1 ಅಡಿ ಎತ್ತರದ ಮಹಾವಿಷ್ಣುವಿನ ವಿಗ್ರಹವನ್ನು ಇರಿಸಲಾಗಿದ್ದು ಇದನ್ನು ಪ್ರತಿ ತಿಂಗಳ ಹುಣ್ಣಿಮೆಯ ದಿನ ಶ್ರೀ.ಸಾಯಿ ಸತ್ಯನಾರಾಯಣ ವ್ರತದ ಸಂದರ್ಭದಲ್ಲಿ ಸಾಯಿಬಾಬಾರವರ ವಿಗ್ರಹದ ಜೊತೆಗೆ ಪೂಜೆಗೆ ಇರಿಸಲಾಗುತ್ತದೆ.
ದೇವಾಲಯದ ಪ್ರವೇಶ ದ್ವಾರದ ಎಡಭಾಗದಲ್ಲಿ ಸುಮಾರು 2 1/2 ಅಡಿ ಎತ್ತರದ ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ: 6 ರಿಂದ 11 ರವರೆಗೆ.
ಸಂಜೆ: 5:30 ರಿಂದ 9 ರವರೆಗೆ.
ಆರತಿಯ ಸಮಯ:
ಬೆಳಿಗ್ಗೆ: 8 ಘಂಟೆಗೆ
ಸಂಜೆ: 7:30 ಕ್ಕೆ
ಪ್ರತಿದಿನ ಬೆಳಿಗ್ಗೆ 6:30 ರಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ ಶ್ರೀ ಸಾಯಿ ಸತ್ಯನಾರಾಯಣ ವ್ರತವನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 21/- ರುಪಾಯಿಗಳು.
ವಿಶೇಷ ಉತ್ಸವದ ದಿನಗಳು:
ಪ್ರತಿ ವರ್ಷದ 12ನೇ ಫೆಬ್ರವರಿ ಯಂದು ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ದೇಣಿಗೆಗೆ ಮನವಿ:
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್" ಉಳಿತಾಯ ಖಾತೆ ಸಂಖ್ಯೆ: 5907, ಕಾರ್ಪೋರೇಶನ್ ಬ್ಯಾಂಕ್, ಯಶವಂತಪುರ ಶಾಖೆ, ಶಾಖೆ ಸಂಖ್ಯೆ:0431, ಮಾಲೂರು, ಇವರಿಗೆ ಸಂದಾಯವಾಗುವಂತೆ ಹಣವನ್ನು ಸಂದಾಯ ಮಾಡಬಹುದಾಗಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ತಾಲ್ಲೂಕು ಕಚೇರಿ ಪಕ್ಕದಲ್ಲಿ, ಆದರ್ಶ ನಗರ, ಅರಳೇರಿ ಮುಖ್ಯರಸ್ತೆ, ಮಾಲೂರು.
ವಿಳಾಸ:
ಶ್ರೀ.ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ (ನೋಂದಣಿ),
ಅರಳೇರಿ ಮುಖ್ಯರಸ್ತೆ, ಅದರ್ಶನಗರ,
ಮಾಲೂರು-563 130,
ಕೋಲಾರ ಜಿಲ್ಲೆ, ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಶ್ರೀನಿವಾಸ ಮುರ್ತಿ - ಅಧ್ಯಕ್ಷರು / ಶ್ರೀ.ಸುಬ್ರಮಣ್ಯ ರೆಡ್ಡಿ - ಖಚಾಂಚಿ / ಶ್ರೀ.ಅಮರ್ ಸಿಂಗ್ - ಕಾರ್ಯದರ್ಶಿ
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
+ 91 94481 51475 - ಶ್ರೀನಿವಾಸ ಮುರ್ತಿ / +91 94480 19116 - ಅಮರ್ ಸಿಂಗ್ / +91 98458 74776 – ಸುಬ್ರಮಣ್ಯ ರೆಡ್ಡಿ.
ಮಾರ್ಗಸೂಚಿ:
ನೀವು ಬಸ್ ನಲ್ಲಿ ಬಂದರೆ, ಮಾಲೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಗಳ ಅಂತರದಲ್ಲಿದೆ. ರೈಲಿನಲ್ಲಿ ಬರುವುದಾದರೆ, ಮಾಲೂರು ರೈಲು ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಮಾಲೂರು ರೈಲು ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ. ರೈಲು ನಿಲ್ದಾಣದಿಂದ ಹೇರಳವಾಗಿ ಆಟೋಗಳು ಸಿಗುತ್ತವೆ. ದೇವಾಲಯವು ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಪಟ್ಟಣದ ಅರಳೇರಿ ಮುಖ್ಯರಸ್ತೆಯಲ್ಲಿರುವ ಆದರ್ಶನಗರದಲ್ಲಿರುತ್ತದೆ ಮತ್ತು ತಾಲ್ಲೂಕು ಕಚೇರಿಯ ಪಕ್ಕದಲ್ಲಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ