ತುಮಕೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ), ಸಾಯಿಬಾಬಾ ಮಂದಿರ ರಸ್ತೆ, ಕೆ.ಆರ್.ಬಡಾವಣೆ, ತಿಪಟೂರು-577 201, ತುಮಕೂರು ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ಮಂದಿರವು ತಿಪಟೂರು ಪಟ್ಟಣದ ಕೆ.ಆರ್.ಬಡಾವಣೆಯಲ್ಲಿರುತ್ತದೆ. ಮಂದಿರವು ತಿಪಟೂರು ಬಸ್ ನಿಲ್ದಾಣದಿಂದ ಕೇವಲ 5 ನಿಮಿಷದ ನಡಿಗೆಯ ಅಂತರದಲ್ಲಿರುತ್ತದೆ.
ಈ ಮಂದಿರದ ಉದ್ಘಾಟನೆಯು 1950ನೇ ಇಸವಿಯಲ್ಲಿ ಆಯಿತು. ರಾಜಗೋಪುರದ ಉದ್ಘಾಟನೆಯನ್ನು 28ನೇ ನವೆಂಬರ್ 2005 ರಂದು ಸಿದ್ದಗಂಗಾ ಮಠದ ಶ್ರೀಗಳಾದ ಮತ್ತು "ನಡೆದಾಡುವ ದೇವರು" ಎಂದು ಖಾತಿಯನ್ನು ಪಡೆದ ಡಾ.ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರು ಉದ್ಘಾಟಿಸಿದರು.
ದೇವಾಲಯವನ್ನು ಶ್ರೀ.ಚಿಂತಪಲ್ಲಿ ಭಾಸ್ಕರ ಶೆಟ್ಟಿ, ಶ್ರೀ.ಕೆ.ಟಿ.ಕೃಷ್ಣಮುರ್ತಿ ಮತ್ತು ಡಾ.ಅನಂತರಾಮನ್ ರವರುಗಳು ಜಂಟಿಯಾಗಿ ನಿರ್ಮಾಣ ಮಾಡಿರುತ್ತಾರೆ. ಶ್ರೀ.ಟಿ.ಕೆ.ದಿವಾಕರ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದ ಮಧ್ಯದಲ್ಲಿರುವ ಗರ್ಭಗುಡಿಯಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಜೆರ್ಮನ್ ಬೆಳ್ಳಿಯ ಸಾಯಿಬಾಬಾರವರ ವಿಗ್ರಹ ಮತ್ತು ಬೆಳ್ಳಿಯ ಪಾದುಕೆಗಳು ಕೂಡ ದೇವಾಲಯದಲ್ಲಿದ್ದು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ.
ದೇವಾಲಯದ ಆವರಣದಲ್ಲಿ ಪಂಚಲೋಹದ ದೊಡ್ಡ ವಿಗ್ರಹವನ್ನು ಇರಿಸಲಾಗಿದ್ದು ಈ ವಿಗ್ರಹವನ್ನು ವಿಶೇಷ ಉತ್ಸವದ ದಿನಗಳಲ್ಲಿ ಉತ್ಸವಮುರ್ತಿಯಾಗಿ ಬಳಸಲಾಗುತ್ತಿದೆ.
ಸಾಯಿಬಾಬಾರವರ ವಿಗ್ರಹವಿರುವ ಗರ್ಭಗುಡಿಯ ಎರಡೂ ಬದಿಯಲ್ಲಿ ಅಮೃತ ಶಿಲೆಯ ಗಣಪತಿಯ ಮತ್ತು ಅಮೃತ ಶಿಲೆಯ ಸುಬ್ರಮಣ್ಯಸ್ವಾಮಿಯ ವಿಗ್ರಹಗಳನ್ನು ಎರಡು ಪ್ರತ್ಯೇಕ ಗರ್ಭಗುಡಿಗಳಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯದಲ್ಲಿರುವ ಗಣಪತಿಯ ವಿಶೇಷತೆ ಏನೆಂದರೆ ಈ ಗಣಪತಿಯು ತಿಪಟೂರು ಪಟ್ಟಣದ ಪ್ರಪ್ರಥಮ ಬಲಮುರಿ ಗಣಪತಿಯ ದೇವಾಲಯವಾಗಿರುತ್ತದೆ.
ದೇವಾಲಯದ ಮುಖ್ಯದ್ವಾರದಲ್ಲಿ ಸಾಯಿಬಾಬಾರವರ ಪವಿತ್ರ ಅಮೃತ ಶಿಲೆಯ ಪಾದುಕೆಗಳನ್ನು ಸಾಯಿಬಾಬಾರವರ ಚಿತ್ರಪಟದ ಕೆಳಗಡೆ ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ದೇವಾಲಯದಲ್ಲಿ ಪಲ್ಲಕ್ಕಿಯನ್ನು ಕೂಡ ಸಾಯಿಭಕ್ತರು ಕಾಣಬಹುದು.
ಮಂದಿರದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಆರತಿ | ಪ್ರತಿದಿನ | ಗುರುವಾರ |
ಬೆಳಗಿನ ಆರತಿ | 9:30 AM | 12:30 PM |
ರಾತ್ರಿಯ ಆರತಿ | 7:30 PM | 8:15 PM |
ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾರವರ ಪವಿತ್ರ ಬೆಳ್ಳಿಯ ಪಾದುಕೆಗಳಿಗೆ ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 100 ರುಪಾಯಿಗಳು.
ಪ್ರತಿದಿನ ದೇವಾಲಯದಲ್ಲಿ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 25 ರುಪಾಯಿಗಳು.
ಪ್ರತಿ ಗುರುವಾರ ಸಾಯಿಬಾಬಾರವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಸೇವಾಶುಲ್ಕ 200 ರುಪಾಯಿಗಳು.
ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಜೆ 4 ಘಂಟೆಗೆ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 25 ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 4 ಘಂಟೆಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 25 ರುಪಾಯಿಗಳು.
ಪ್ರತಿದಿನ ಸಂಜೆ 7 ಘಂಟೆಯಿಂದ 8 ಘಂಟೆಯವರೆಗೆ ಮತ್ತು ಪ್ರತಿ ಗುರುವಾರ ಸಂಜೆ 7:30 ರಿಂದ 8:15 ರವರೆಗೆ ಸಾಯಿ ಭಕ್ತರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
ವಿಶೇಷ ಉತ್ಸವದ ದಿನಗಳು:
1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಕಾರ್ತೀಕ ಮಾಸದಲ್ಲಿ - ಅನ್ನದಾನ ಕಾರ್ಯಕ್ರಮವಿರುತ್ತದೆ.
2. ಶ್ರೀರಾಮನವಮಿ.
3. ಗುರು ಪೂರ್ಣಿಮೆ.
4 .ವಿಜಯದಶಮಿ.
4 .ವಿಜಯದಶಮಿ.
5.ಶಿವರಾತ್ರಿ.
6.ಯುಗಾದಿ.
ಪ್ರತಿ ವರ್ಷದ ವೈಕುಂಠ ಏಕಾದಶಿಯಂದು ಬೆಳಿಗ್ಗೆ 7 ಘಂಟೆಯಿಂದ ರಿಂದ ಸಂಜೆ 7 ಘಂಟೆಯವರೆಗೆ ಸಾಯಿನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಸಾಯಿಬಾಬಾ ಮಂದಿರ ರಸ್ತೆ, ಕೆ.ಆರ್.ಬಡಾವಣೆ, ತಿಪಟೂರು.
ಸಾಯಿಬಾಬಾ ಮಂದಿರ ರಸ್ತೆ, ಕೆ.ಆರ್.ಬಡಾವಣೆ, ತಿಪಟೂರು.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ (ನೋಂದಣಿ),
ಸಾಯಿಬಾಬಾ ಮಂದಿರ ರಸ್ತೆ,
ಕೆ.ಆರ್.ಬಡಾವಣೆ,
ತಿಪಟೂರು-577 201, ತುಮಕೂರು ಜಿಲ್ಲೆ, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ಟಿ.ಕೆ.ದಿವಾಕರ್ / ಶ್ರೀ.ಕೆ.ವಿ.ಜಯಂತ್ ಭಟ್
ದೂರವಾಣಿ ಸಂಖ್ಯೆಗಳು:
+ 91 94484 49100 / +91 94492 93148
+ 91 94484 49100 / +91 94492 93148
ಮಾರ್ಗಸೂಚಿ:
ತಿಪಟೂರು ಬಸ್ ನಿಲ್ದಾಣದಲ್ಲಿ ಇಳಿದು ೫ ನಿಮಿಷ ಹಿಂದೆ ನಡೆದರೆ ಸಾಯಿ ಮಂದಿರ ಸಿಗುತ್ತದೆ. ಸಾಯಿ ಮಂದಿರವು ತಿಪಟೂರಿನ ಕೆ.ಆರ್.ಬಡಾವಣೆಯಲ್ಲಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment