ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ವರಪ್ರದ ಮಾರುತಿ ಸಾಯಿ ಮಂದಿರ ಟ್ರಸ್ಟ್ (ನೋಂದಣಿ), ನಂ.27, "ಅಯೋಧ್ಯಾ", 6ನೇ ಅಡ್ಡರಸ್ತೆ, ನಾರಾಯಣ ರಾವ್ ಬಡಾವಣೆ, ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು-560 085, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ಮಂದಿರವು ಬೆಂಗಳೂರು ದಕ್ಷಿಣದ ಹೊಸಕೆರೆಹಳ್ಳಿಯ ನಾರಾಯಣ ರಾವ್ ಬಡಾವಣೆಯಲ್ಲಿರುತ್ತದೆ. ಮಂದಿರವು ಹೊಸಕೆರೆಹಳ್ಳಿಯ ಅರಳಿಮರ ಬಸ್ ನಿಲ್ದಾಣ ಮತ್ತು ಕೆರೆಕಟ್ಟೆ ಬಸ್ ನಿಲ್ದಾಣದಿಂದ ಕೇವಲ 5 ನಿಮಿಷದ ನಡಿಗೆಯ ಅಂತರದಲ್ಲಿರುತ್ತದೆ.
ದೇವಾಲಯದ ಭೂಮಿಪೂಜೆಯನ್ನು 23ನೇ ಏಪ್ರಿಲ್ 2004 ರಂದು ನೆರವೇರಿಸಲಾಯಿತು.
ಈ ಮಂದಿರದ ಉದ್ಘಾಟನೆಯನ್ನು 24ನೇ ಏಪ್ರಿಲ್ 2011 ರಂದು ಬೆಂಗಳೂರಿನ ಶ್ರೀ.ಎಲ್.ಕೃಷ್ಣಮುರ್ತಿ (ಬಾಬು) ಯವರು ವಿಧ್ಯುಕ್ತವಾಗಿ ಸಾವಿರಾರು ಸಾಯಿಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ಸಾಯಿ ಭಕ್ತರೂ ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರೂ ಆದ ಶ್ರೀ.ಶರವಣರವರು ಕೂಡ ಉಪಸ್ಥಿತರಿದ್ದರು.
ಶ್ರೀ.ಎಲ್.ಕೃಷ್ಣಮುರ್ತಿ (ಬಾಬು) ಯವರು ಮತ್ತು ಇವರ ಮನೆಯವರು ಈ ದೇವಾಲಯದ ಸಂಸ್ಥಾಪಕರಾಗಿರುತ್ತಾರೆ. ಶ್ರೀ.ಶ್ರೀಧರ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದಲ್ಲಿ ಸುಮಾರು 4 1/2 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಮೇಲ್ಭಾಗದಲ್ಲಿ ಕಪ್ಪು ಶಿಲೆಯ ವರಪ್ರದ ಮಾರುತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ಸಾಯಿಬಾಬಾರವರ ವಿಗ್ರಹದ ಇಕ್ಕೆಲಗಳಲ್ಲಿ ಕಪ್ಪು ಶಿಲೆಯ ಗಣಪತಿಯ ಮತ್ತು ಕಪ್ಪು ಶಿಲೆಯ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಕೆಳಭಾಗದಲ್ಲಿ ಅಮೃತ ಶಿಲೆಯ ದ್ವಾರಕಾಮಾಯಿ ಸಾಯಿಬಾಬಾರವರ ಪುಟ್ಟ ವಿಗ್ರಹವನ್ನು ಇರಿಸಲಾಗಿದೆ.
ದೇವಾಲಯದ ಮುಖ್ಯದ್ವಾರದಲ್ಲಿ ಸಾಯಿಬಾಬಾರವರ ಪವಿತ್ರ ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
ಮಂದಿರದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ | 6:00 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:00 PM |
ಶೇಜಾರತಿ | 9:00 PM |
ಪ್ರತಿನಿತ್ಯ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ.
ಪ್ರತಿ ತಿಂಗಳ ಹುಣ್ಣಿಮೆಯ ದಿನ ಸಂಜೆ 4 ಘಂಟೆಯಿಂದ 7 ಘಂಟೆಯವರಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತಾದೆ. ಯಾವುದೇ ಸೇವಾ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ
ಪ್ರತಿ ತಿಂಗಳ ಅಮಾವಾಸ್ಯೆಯಂದು ಬೆಳಿಗ್ಗೆ 7 ಘಂಟೆಯಿಂದ ದತ್ತಾತ್ರೇಯ, ದಕ್ಷಿಣಾಮುರ್ತಿ ಮತ್ತು ಸಾಯಿ ಸಹಸ್ರನಾಮ ಹೋಮಗಳನ್ನು ಆಚರಿಸಲಾಗುತ್ತದೆ.
ಪ್ರತಿದಿನ ಮಂದಿರಕ್ಕೆ ಬರುವ ಎಲ್ಲ ಸಾಯಿ ಭಕ್ತರಿಗೆ ಪ್ರಸಾದದ ವಿತರಣೆಯ ವ್ಯವಸ್ಥೆಯಿರುತ್ತದೆ.
ವಿಶೇಷ ಉತ್ಸವದ ದಿನಗಳು:
1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಚೈತ್ರ ಮಾಸದ ಕೃಷ್ಣ ಪಕ್ಷದ ಸಪ್ತಮಿಯಂದು.
2.ಹೊಸವರ್ಷದ ಆಚರಣೆ.
3.ಯುಗಾದಿ ಹಬ್ಬದ ಆಚರಣೆ.
4.ಶ್ರೀರಾಮನವಮಿ.
5.ಗುರುಪೂರ್ಣಿಮೆ.
6.ಗಣೇಶ ಚತುರ್ಥಿ.
7.ವಿಜಯದಶಮಿ - ವಿಶೇಷ ಚಂಡಿ ಹೋಮ.
8.ಹನುಮಜ್ಜಯಂತಿ.
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
6ನೇ ಅಡ್ಡರಸ್ತೆ, ನಾರಾಯಣ ರಾವ್ ಬಡಾವಣೆ, ಹೊಸಕೆರೆಹಳ್ಳಿ.
6ನೇ ಅಡ್ಡರಸ್ತೆ, ನಾರಾಯಣ ರಾವ್ ಬಡಾವಣೆ, ಹೊಸಕೆರೆಹಳ್ಳಿ.
ಶ್ರೀ ವರಪ್ರದ ಮಾರುತಿ ಸಾಯಿ ಮಂದಿರ ಟ್ರಸ್ಟ್ (ನೋಂದಣಿ),
ನಂ.27, "ಅಯೋಧ್ಯಾ", 6ನೇ ಅಡ್ಡರಸ್ತೆ,
ನಾರಾಯಣ ರಾವ್ ಬಡಾವಣೆ, ಹೊಸಕೆರೆಹಳ್ಳಿ,
ಬನಶಂಕರಿ 3ನೇ ಹಂತ, ಬೆಂಗಳೂರು-560 085, ಕರ್ನಾಟಕ
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ಶ್ರೀಧರ್ / ಶ್ರೀ.ಕೃಷ್ಣಮುರ್ತಿ (ಬಾಬು) / ಶ್ರೀಮತಿ.ದೀಪಾ / ಶ್ರೀಮತಿ.ಸುಜಾತ /ಶ್ರೀ.ಕೃಷ್ಣಕುಮಾರ್ /ಶ್ರೀಮತಿ.ಗೀತಾ ರಾವ್ /ಶ್ರೀ.ಮನೋಜ್ ಚಕ್ರವರ್ತಿ
ದೂರವಾಣಿ ಸಂಖ್ಯೆಗಳು:
+ 91 99166 83942 / +91 98444 45442 / +91 91411 64250 / +91 99162 08208 / +91 98450 48457 / +91 78995 70206 / +91 93423 40708
ಈ ಮೇಲ್ ವಿಳಾಸ:
saimaruthimandira@gmail.com
ಈ ಮೇಲ್ ವಿಳಾಸ:
saimaruthimandira@gmail.com
ಮಾರ್ಗಸೂಚಿ:
ಹೊಸಕೆರೆಹಳ್ಳಿಯ ಅರಳಿಮರ ಅಥವಾ ಕೆರೆಕೋಡಿ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. ಬಸ್ ಸಂಖ್ಯೆಗಳು: 43ಬಿ, 43ಎಫ್.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment