Friday, April 3, 2015

4ನೇ ಏಪ್ರಿಲ್ 2015, ಶನಿವಾರದಂದು ಚಂದ್ರಗ್ರಹಣದ ಪ್ರಯುಕ್ತ ದರ್ಶನ ಮತ್ತು ಆರತಿಯ ಸಮಯದಲ್ಲಿ ಬದಲಾವಣೆ - ಕೃಪೆ: ಸಾಯಿಅಮೃತಧಾರಾ.ಕಾಂ

4ನೇ ಏಪ್ರಿಲ್ 2015, ಶನಿವಾರದಂದು ಮಧ್ಯಾನ್ಹ  3.30 ರಿಂದ  ರಾತ್ರಿ 7.15 ರವರೆಗೆ  ಖಗ್ರಾಸ ಚಂದ್ರಗ್ರಹಣ ಸಂಭವಿಸಲಿರುವ ಪ್ರಯುಕ್ತ  ದರ್ಶನ ಮತ್ತು ಆರತಿಯ ಸಮಯದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯಿರುತ್ತದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 1ನೇ ಏಪ್ರಿಲ್ 2015, ಬುಧವಾರ ದಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. 

ಪ್ರತಿ ವರ್ಷದಂತೆ, ಈ ವರ್ಷವೂ 4ನೇ ಏಪ್ರಿಲ್ 2015, ಶನಿವಾರದಂದು ಶ್ರೀ ಮಾರುತಿ ಮಂದಿರದಲ್ಲಿ ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿರುವ ಪ್ರಯುಕ್ತ  ಸಮಾಧಿ ಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಇರುತ್ತದೆ. ಮಧ್ಯಾನ್ಹ 3.30 ದಿಂದ ಸರಿಯಾಗಿ ಹದಿನೈದು ನಿಮಿಷಗಳ ಕಾಲ ದರ್ಶನವನ್ನು ಸ್ಥಗಿತಗೊಳಿಸಲಾಗುತ್ತದೆ. ಮಧ್ಯಾನ್ಹ 3.45 ರಿಂದ ರಾತ್ರಿ 7.15 ರವರೆಗೆ ಸಂಸ್ಥಾನದ ಪುರೋಹಿತರುಗಳು ಮಂತ್ರೊಚ್ಛಾರಣೆಯನ್ನು ಮಾಡಲಿದ್ದಾರೆ. ಈ ಸಮಯದಲ್ಲಿ ಸಾಯಿ ಭಕ್ತರಿಗೆ ಸಮಾಧಿ ಮಂದಿರದ ಒಳಭಾಗಕ್ಕೆ ಪ್ರವೇಶವಿರುವುದಿಲ್ಲ ಎಂದು ಶ್ರೀ ಜಾಧವ್ ತಿಳಿಸಿದರು. 


ಗ್ರಹಣದ ಸಮಾಯದಲ್ಲಿ ಸಾಯಿ ಭಕ್ತರು ನಂದಿಯ ವಿಗ್ರಹದವರೆಗೆ ಸರತಿ ಸಾಲಿನಲ್ಲಿ ಬಂದು ದೂರದಿಂದಲೇ ಸಾಯಿಬಾಬಾರವರ ದರ್ಶನ ಮಾಡಿ ಅಲ್ಲಿಯೇ ಪಕ್ಕದಲ್ಲಿರುವ ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಮಂತ್ರೊಚ್ಛಾರಣೆ ಮುಗಿದ ನಂತರ ರಾತ್ರಿ  7.25 ಕ್ಕೆ ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳಸ್ನಾನವನ್ನು ಹಮ್ಮಿಕೊಳ್ಳಲಾಗಿದೆ.  ರಾತ್ರಿ 7.35 ಕ್ಕೆ ಶಿರಡಿ ಮಾಜೇ ಪಂಢರಪುರ ಛೋಟಾ ಆರತಿ ನಡೆಯುತ್ತದೆ. ರಾತ್ರಿ 7.45 ಕ್ಕೆ ಧೂಪಾರತಿ ನಡೆಸಲಾಗುತ್ತದೆ. ಆನಂತರ ಎಂದಿನಂತೆ ದರ್ಶನ ಪುನಃ ಪ್ರಾರಂಭವಾಗುತ್ತದೆ. ರಾತ್ರಿ 10.30 ಕ್ಕೆ ಎಂದಿನಂತೆ ಶೇಜಾರತಿ ಕಾರ್ಯಕ್ರಮವಿರುತ್ತದೆ. ಸಾಯಿ ಭಕ್ತರು ಸಮಾಧಿ ಮಂದಿರದ ಕಾರ್ಯಕ್ರಮದಲ್ಲಿ ಆಗಿರುವ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಂತೆಯೇ ಸಹಕರಿಸಬೇಕೆಂದು ಶ್ರೀ.ರಾಜೇಂದ್ರ ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

No comments:

Post a Comment