ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಸಾಯಿಬಾಬಾ ಸಂಸ್ಥಾನವು ಶ್ರೀರಾಮನವಮಿ ಉತ್ಸವವನ್ನು ಇದೇ ತಿಂಗಳ 27ನೇ ಮಾರ್ಚ್ 2015,ಶುಕ್ರವಾರ ದಿಂದ 29ನೇ ಮಾರ್ಚ್ 2015, ಭಾನುವಾರ ದವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 20ನೇ ಮಾರ್ಚ್ 2015, ಶುಕ್ರವಾರ ದಂದು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ. ಜಾಧವ್ ರವರು 1911ನೇ ಇಸವಿಯಲ್ಲಿ ಸಾಯಿಬಾಬಾರವರ ಅಪ್ಪಣೆಯ ಮೇರೆಗೆ ಪ್ರಾರಂಭಿಸಲಾದ ಈ ಉತ್ಸವವನ್ನು ಇಂದಿಗೂ ಅಷ್ಟೇ ಸಡಗರ ಸಂಭ್ರಮಗಳಿಂದ ಶ್ರೀ ಸಾಯಿಬಾಬಾ ಸಂಸ್ಥಾನವು ಆಚರಿಸಿಕೊಂಡು ಬರುತ್ತಿದ್ದು ಈ ಸಮಯದಲ್ಲಿ ಶಿರಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ವಿವರ:
27-3-2015; ಶುಕ್ರವಾರ - (ಮೊದಲ ದಿನ)
ಬೆಳಿಗ್ಗೆ:
4.30 am : ಕಾಕಡಾ ಆರತಿ.
5.00 am: ಶ್ರೀ ಸಾಯಿಬಾಬಾ ವಿಗ್ರಹ, ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆ.
5.15 am: ದ್ವಾರಕಾಮಾಯಿಯಲ್ಲಿ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಪ್ರಾರಂಭ.
5.20 am: ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಹಾಗೂ ಆನಂತರದಲ್ಲಿ ದರ್ಶನ ಪ್ರಾರಂಭ.
ಮಧ್ಯಾನ್ಹ:
12.30 noon: ಮಧ್ಯಾನ್ಹ ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ.
ಸಂಜೆ:
4.00 pm - 6.00 pm: ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗುವ ವೇದಿಕೆಯಲ್ಲಿ ಕೀರ್ತನೆಯ ಆಯೋಜನೆ.
6.30 pm: ಧೂಪಾರತಿ.
ರಾತ್ರಿ:
7.30 pm - 10.00 pm: ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಕಾರ್ಯಕ್ರಮ.
9.15 pm: ಶಿರಡಿ ಗ್ರಾಮದ ಸುತ್ತಾ ಪಲ್ಲಕ್ಕಿ ಉತ್ಸವದ ಆಯೋಜನೆ.
10.30 pm: ಶೇಜಾರತಿ.
ಅಖಂಡ ಪಾರಾಯಣದ ಅಂಗವಾಗಿ ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗುತ್ತದೆ.
28-3-2015; ಶನಿವಾರ (ಮುಖ್ಯ ದಿವಸ) - ಎರಡನೇ ದಿನ
ಬೆಳಿಗ್ಗೆ:
4.30 am : ಕಾಕಡಾ ಆರತಿ.
5.00 am: ಅಖಂಡ ಪಾರಾಯಣ ಮುಕ್ತಾಯ. ಶ್ರೀ ಸಾಯಿಬಾಬಾ ವಿಗ್ರಹ, ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆ.
5.15 am: ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಹಾಗೂ ಆನಂತರದಲ್ಲಿ ದರ್ಶನ ಪ್ರಾರಂಭ.
10.00 am – 12.00 pm: ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗುವ ವೇದಿಕೆಯಲ್ಲಿ ಶ್ರೀ ರಾಮ ಜನ್ಮ ಕೀರ್ತನೆಯ ಆಯೋಜನೆ.
ಮಧ್ಯಾನ್ಹ:
12.30 noon: ಮಧ್ಯಾನ್ಹ ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ.
ಸಂಜೆ:
4.00 pm: ಧ್ವಜಗಳ ಮೆರವಣಿಗೆ.
5:00 pm: ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವದ ಆಯೋಜನೆ.
6.30 pm: ರಥೋತ್ಸವ ವಾಪಸಾದ ನಂತರ ಶ್ರೀ ಸಾಯಿಬಾಬಾರವರ ಧೂಪಾರತಿ.
ರಾತ್ರಿ:
7.30 pm - 10.00 pm: ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಕಾರ್ಯಕ್ರಮ.
10.00 pm to 5.00 am (ಮಾರನೇ ದಿನ): ಸಾಯಿಬಾಬಾ ಭಕ್ತರಿಂದ ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ವೇದಿಕೆಯಲ್ಲಿ ಸಾಯಿ ಭಜನೆಯ ಕಾರ್ಯಕ್ರಮ.
ಮುಖ್ಯ ದಿನದ ಅಂಗವಾಗಿ, ರಾತ್ರಿಯಿಡೀ ಸಮಾಧಿ ಮಂದಿರವನ್ನು ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆದ ಕಾರಣ ಆ ರಾತ್ರಿಯ ಶೇಜಾರತಿ ಹಾಗೂ ಮಾರನೇ ದಿನ ಅಂದರೆ 29ನೇ ಮಾರ್ಚ್ 2015 ರ ಬೆಳಗಿನ ಕಾಕಡಾ ಆರತಿ ಇರುವುದಿಲ್ಲ.
29-03-2015; ಭಾನುವಾರ (ಕೊನೆಯ ದಿನ) - ಮೂರನೇ ದಿನ
ಬೆಳಿಗ್ಗೆ:
5.05 am: ಶ್ರೀ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಹಾಗೂ ಆನಂತರದಲ್ಲಿ ದರ್ಶನ ಪ್ರಾರಂಭ.
6.30 am: ಗುರುಸ್ಥಾನದಲ್ಲಿರುವ ಶಿವಲಿಂಗಕ್ಕೆ ರುದ್ರಾಭಿಷೇಕ.
10:30 am: ಗೋಪಾಲ ಕಾಲಾ ಮತ್ತು ದಹಿ ಹಂಡಿ ಕಾರ್ಯಕ್ರಮ.
ಮಧ್ಯಾನ್ಹ:
12.10 noon: ಮಧ್ಯಾನ್ಹ ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ.
ಸಂಜೆ:
6.30 pm: ಧೂಪಾರತಿ.
ರಾತ್ರಿ:
7.30 pm - 10.00 pm: ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಕಾರ್ಯಕ್ರಮ.
10.30 pm: ಶೇಜಾರತಿ.
ಶ್ರೀರಾಮನವಮಿ ಉತ್ಸವದ ಅಂಗವಾಗಿ 27ನೇ ಮಾರ್ಚ್ 2015 ರಿಂದ 28ನೇ ಮಾರ್ಚ್ 2015 ರವರೆಗೂ ಶ್ರೀ ಸಾಯಿ ಸತ್ಯವ್ರತ ಪೂಜೆ ಹಾಗೂ ಅಭಿಷೇಕ ಪೂಜೆಯ ಸೇವಾ ಪತ್ರಕಗಳನ್ನು ವಿತರಿಸಲಾಗುವುದಿಲ್ಲ.
ದ್ವಾರಕಾಮಾಯಿಯಲ್ಲಿ ಮೊದಲ ದಿನದಂದು ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮಾಡಲು ಇಚ್ಛಿಸುವ ಸಾಯಿ ಭಕ್ತರು 26ನೇ ಮಾರ್ಚ್ 2015 ರಂದು ಮಧ್ಯಾನ್ಹ 2 pm ರಿಂದ 6 pm ಗಂಟೆಯವರೆಗೆ ಸಮಾಧಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಲಾಗುವ ವಿಶೇಷ ವೇದಿಕೆಯ ಬಳಿಗೆ ತೆರಳಿ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು. ಹಾಗೂ ಅದೇ ದಿನ ಸಂಜೆ 7 ಗಂಟೆಗೆ ಲಕ್ಕಿ ಡ್ರಾ ಮೂಲಕ ಪಾರಾಯಣ ಮಾಡಲು ಆಯ್ಕೆಯಾಗಿರುವವರ ಹೆಸರನ್ನು ನಿರ್ಧರಿಸಿ ಪ್ರಕಟಿಸಲಾಗುವುದು.
ಅಂತೆಯೇ 28ನೇ ಮಾರ್ಚ್ 2015 ರಂದು ರಾತ್ರಿ ಸಮಾಧಿ ಮಂದಿರದ ಪ್ರಾಂಗಣದಲ್ಲಿನ ವೇದಿಕೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾಯಿ ಭಕ್ತರು ಪ್ರಕಟಣಾ ಕೊಠಡಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು.
ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮನವಮಿ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ರಾಜೇಂದ್ರ ಜಾಧವ್ ರವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ. ವಿನಯ್ ಜೋಷಿಯವರ ಮಾರ್ಗದರ್ಶನದಲ್ಲಿ ತ್ರಿಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾಧಿಕಾರಿಯಾದ ಶ್ರೀ.ಅನಿಲ್ ಕಾವಡೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳೂ, ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿ ವರ್ಗದವರುಗಳು ಬಹಳ ಶ್ರಮವಹಿಸಿ ಕಾರ್ಯ ನಿರ್ವಹಿಸಿರುತ್ತಾರೆ ಎಂದು ಶ್ರೀ ರಾಜೇಂದ್ರ ಜಾಧವ್ ಸುದ್ಧಿಗಾರರಿಗೆ ತಿಳಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್,
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment