Saturday, May 31, 2014

ಗುಜರಾತಿ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕಿ ಹಾಗೂ ಅನನ್ಯ ಸಾಯಿ ಭಕ್ತೆ - ಶ್ರೀಮತಿ.ಹೀನಾ ಮೆಹ್ತಾ -ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀಮತಿ.ಹೀನಾ ಮೆಹ್ತಾರವರು ಗುಜರಾತಿ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕಿ ಹಾಗೂ ಅನನ್ಯ ಸಾಯಿ ಭಕ್ತೆ. ಇವರು  ಶ್ರೀ  ಡಾ.ರವೀಂದ್ರನಾಥ್ ಕಾಕಾರ್ಯ ರವರ ಸಾಯಿ ಸಚ್ಚರಿತ್ರೆ (ಓವಿಯಿಂದ ಓವಿಗೆ) ಯನ್ನು ಹಿಂದಿ ಭಾಷೆಯಿಂದ  ಗುಜರಾತಿ ಭಾಷೆಗೆ ತರ್ಜುಮೆ ಮಾಡಿದ್ದಾರೆ. 

ಇವರು 16ನೇ ಮೇ 1956 ರಂದು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಜನಿಸಿದರು. ಇವರು ಹೈದರಾಬಾದ್ ನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿಯನ್ನು ಗಳಿಸಿರುತಾರೆ. 

ಇವರು  ಶ್ರೀ  ಡಾ.ರವೀಂದ್ರನಾಥ್ ಕಾಕಾರ್ಯ ರವರ ಸಾಯಿ ಸಚ್ಚರಿತ್ರೆ (ಓವಿಯಿಂದ ಓವಿಗೆ) ಯನ್ನು ಹಿಂದಿ ಭಾಷೆಯಿಂದ  ಗುಜರಾತಿ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಇವರು ತಮ್ಮ ಪತಿಯಾದ ಶ್ರೀ.ವಿಜಯ್ ಮೆಹ್ತಾರವರ ಜೊತೆಯಲ್ಲಿ ಸೇರಿಕೊಂಡು ಪ್ರತಿ ವಾರವೂ  ಬೆಂಗಳೂರಿನ ವಿವಿಧ  ಸಾಯಿ ಭಕ್ತರ ಮನೆಗಳಲ್ಲಿ "ಸಾಯಿ ಭಕ್ತಿ ಪಾಠ್" ಪಠಣವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಸಾಯಿ ಭಕ್ತಿ ಪಾಠ್ ಪುಸ್ತಕವನ್ನು ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಮುದ್ರಿಸಿ ಎಲ್ಲಾ ಭಕ್ತರಿಗೂ ಉಚಿತವಾಗಿ ಹಂಚುತ್ತಿದ್ದಾರೆ. ಅಷ್ಟೆ ಅಲ್ಲದೇ ಇವರು ವರ್ಷದಲ್ಲಿ 2-3 ಬಾರಿ ಭಕ್ತರನ್ನು ಶಿರಡಿಗೆ ಕರೆದುಕೊಂಡು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. 

ಇವರು ಶ್ರೀ.ವಿಜಯ್ ಮೆಹ್ತಾರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀ.ಜಯ್  ಮೆಹ್ತಾ ಮತ್ತು ಶ್ರೀ.ಅಂಕಿತ್ ವಿ.ಮೆಹ್ತಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 

ಪ್ರಸ್ತುತ ತಮ್ಮ ಪತಿ ಹಾಗೂ ದ್ವಿತೀಯ ಪುತ್ರನೊಂದಿಗೆ  ಬೆಂಗಳೂರಿನಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀಮತಿ.ಹೀನಾ ಮೆಹ್ತಾರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:

ಸಂಪರ್ಕದ ವಿವರಗಳು: 

ಶ್ರೀಮತಿ.ಹೀನಾ ಮೆಹ್ತಾ
ಶ್ರೀ.ವಿಜಯ್ ಮೆಹ್ತಾ
ಸಂಖ್ಯೆ:886/17,1ನೇ ಮಹಡಿ,  ಜೆ.ಜೆ.ವಿಲ್ಲಾ,
18ನೇ ಮುಖ್ಯರಸ್ತೆ, 5ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು-560 010. 
ಕರ್ನಾಟಕ, ಭಾರತ.
ದೂರವಾಣಿ ಸಂಖ್ಯೆಗಳು:+91 94483 74588/+91 89511 01436
ಮಿಂಚಂಚೆ:saivacblr@vacpenumatic.co.in

(ಆಧಾರ: ಶ್ರೀಮತಿ.ಹೀನಾ ಮೆಹ್ತಾರವರೊಂದಿಗೆ 11ನೇ ಮೇ 2014 ರಂದು ನಡೆಸಿದ ನೇರ ಸಂದರ್ಶನ) 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಿರಡಿಯ ಶ್ರೀ ಸಾಯಿನಾಥ ಆಸ್ಪತ್ರೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಗೆ 14ನೇ ಮೇ 2014 ರಂದು 50 ವರ್ಷಗಳು ತುಂಬಲಿದ್ದು ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯು ಹಲವಾರು ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸಿತ್ತು ಹಾಗೂ ಸುಮಾರು 2000 ರೋಗಿಗಳು ಈ ಶಿಬಿರಗಳ ಪ್ರಯೋಜನವನ್ನು ಪಡೆದರು. 

ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ತಮ್ಮ ಬಳಿಗೆ ಬರುತ್ತಿದ್ದ ಹಲವಾರು ರೋಗಿಗಳ ರೋಗವನ್ನು ಪವಿತ್ರ ಉಧಿಯನ್ನು ನೀಡುವ ಮುಖಾಂತರ ಗುಣಪಡಿಸುತ್ತಿದ್ದರೆಂದು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ ನಾವುಗಳೆಲ್ಲಾ ಓದಿದ್ದೇವೆ. ಶ್ರೀ ಸಾಯಿಬಾಬಾರವರು ಪ್ರಾರಂಭಿಸಿದ ಈ ಮಹೋನ್ನತ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 1964ನೇ ಇಸವಿಯಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯನ್ನು ಪ್ರಾರಂಭಿಸಿತು. 

ಈ ಸುವರ್ಣ ಮಹೋತ್ಸವದ ಅಂಗವಾಗಿ 3ನೇ ಮೇ 2014 ರಂದು ಉಚಿತ ಮಧುಮೇಹ ತಪಾಸಣಾ ಹಾಗೂ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿತ್ತು. 160 ರೋಗಿಗಳು  ಈ ಶಿಬಿರದ ಪ್ರಯೋಜನವನ್ನು ಪಡೆದರು. ಈ ರೋಗಿಗಳನ್ನು ಔರಂಗಾಬಾದ್ ನ ಖ್ಯಾತ ಮಧುಮೇಹ ರೋಗ ತಜ್ಞರಾದ ಡಾ.ದೀಪಕ್ ಭೋಸ್ಲೆಯವರು ತಪಾಸಣೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಿದರು. 5ನೇ ಮೇ 2014 ರಿಂದ 10ನೇ ಮೇ 2014 ರವರೆಗೆ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಆಯೋಜಿಸಲಾಗಿತ್ತು. 1346 ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಅಲ್ಲದೆ 175 ರೋಗಿಗಳಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. 11ನೇ ಮೇ 2014 ರಿಂದ  21ನೇ ಮೇ 2014ರವರೆಗೆ ಉಚಿತ ಕಿವಿ ತಪಾಸಣಾ ಶಿಬಿರ  ಹಾಗೂ ಶ್ರವಣ ಸಾಧನದ ವಿತರಣಾ ಶಿಬಿರವನ್ನು ಆಯೊಜಿಸಲಾಗಿತ್ತು. ಇದರಲ್ಲಿ 855 ರೋಗಿಗಳಿಗೆ ತಪಾಸಣೆ ಮಾಡಲಾಯಿತು ಹಾಗೂ 300 ರೋಗಿಗಳಿಗೆ ಶ್ರಾವಣ ಸಾಧನವನ್ನು ವಿತರಿಸಲಾಯಿತು. 20ನೇ ಮೇ  2014 ರಿಂದ  24ನೇ  ಮೇ 2014 ರವರೆಗೆ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ  ಶಿರಡಿ ಸಾಯಿಬಾಬಾ ಸಂಸ್ಥಾನದ ಉದ್ಯೋಗಿಗಳಿಗಾಗಿ "ಒತ್ತಡ ನಿಯಂತ್ರಣ ಹಾಗೂ ಸುಖೀ ಜೀವನ" ಎಂಬ ವಿಷಯದ ಬಗ್ಗೆ ನಾಲ್ಕು ದಿನಗಳ ಕಾರ್ಯಾಗಾರವನ್ನು ಆಯೊಜಿಸಲಾಗಿತ್ತು. ಅಲ್ಲದೇ ಶ್ರೀ ಸಾಯಿನಾಥ ಆಸ್ಪತ್ರೆಯ ಹೊರ ರೋಗಿ ವಿಭಾಗದ ರೋಗಿಗಳಿಗೆ ಮೇ ತಿಂಗಳಿನಲ್ಲಿ ಉಚಿತ ಕೇಸ್ ಪೇಪರ್ ಗಳನ್ನು ವಿತರಿಸಲಾಯಿತು.  

ಮೇಲಿನ ಈ ಎಲ್ಲಾ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆವರು ಉತ್ತಮ ಮಾರ್ಗದರ್ಶನವನ್ನು ನೀಡಿದರು. ವೈದ್ಯಕೀಯ ನಿರ್ದೇಶಕರಾದ ಡಾ.ರಾವ್,  ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ್ ಪತಾರೆ,  ಡಾ.ಪ್ರಫುಲ್ ಪೋರ್ವಾಲ್, ಡಾ.ಬಿ.ಬಿ.ಸಬಲೆ, ನೇತ್ರ ತಜ್ಞರಾದ ಡಾ.ಸುನೀಲ್ ಸೊಂಟಕ್ಕೆ, ಡಾ.ಶ್ರೀಮತಿ.ಮನೀಷಾ ಅಗರವಾಲ್,  ಇ.ಎನ್.ಟಿ. ತಜ್ಞರಾದ ಡಾ.ರವೀಂದ್ರ ಕುಲಕರ್ಣಿ, ಸಾಯಿಬಾಬಾ ಸಂಸ್ಥಾನದ ಅಧೀಕ್ಷಕರಾದ ಶ್ರೀ.ಶೆಲ್ಕೆ, ಎಲ್ಲಾ ಸ್ತ್ರೀ ಹಾಗೂ ಪುರುಷ ದಾದಿಯರು ಮತ್ತು ಸಾಯಿಬಾಬಾ ಸಂಸ್ಥಾನದ ಎಲ್ಲಾ ಉದ್ಯೋಗಿಗಳು ಬಹಳವೇ ಶ್ರಮವಹಿಸಿ ಮೇಲೆ ತಿಳಿಸಿದ ಎಲ್ಲಾ ವೈದ್ಯಕೀಯ ಶಿಬಿರಗಳೂ ಅತ್ಯಂತ ಯಶಸ್ವಿಯಾಗಿ ನಡೆಯುವಲ್ಲಿ ಪಾತ್ರವಹಿಸಿದ್ದಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Thursday, May 29, 2014

ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿಯ ಲಯನ್ಸ್ ಕ್ಲಬ್ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ನೀಡಿರುವ ಉದಾರವಾದ ದೇಣಿಗೆಯ ಸಹಾಯದಿಂದ ಶ್ರೀ ಸಾಯಿನಾಥ ಆಸ್ಪತ್ರೆಯು ಮುಂದಿನ ತಿಂಗಳ ಬುಧವಾರ, 4ನೇ ಜೂನ್ 2014 ರಿಂದ ಶುಕ್ರವಾರ, 6ನೇ ಜೂನ್ 2014 ರವರೆಗೆ 3  ದಿನಗಳ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ  ಶಿಬಿರವನ್ನು ಹಮ್ಮಿಕೊಂಡಿದೆ.ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇತ್ರ ತಜ್ಞರನ್ನು ಕಾಣಬಯಸುವ ರೋಗಿಗಳು 4ನೇ ಜೂನ್ 2014,ಬುಧವಾರ ದಂದು ಶ್ರೀ ಸಾಯಿನಾಥ ಅಸ್ಪತ್ರೆಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ ಆಗಮಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆಯ ನಂತರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕಾಗಿರುತ್ತದೆ. 5ನೇ ಜೂನ್ 2014 ಮತ್ತು  6ನೇ ಜೂನ್ 2014 ರಂದು ನಡೆಯಲಿರುವ ಈ ಶಿಬಿರದಲ್ಲಿ ಹಲವಾರು ನುರಿತ ನೇತ್ರ ತಜ್ಞರು ಸುಮಾರು 100 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಿದ್ದಾರೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು. 

ಆದ ಕಾರಣ, ಯಾವುದೇ ರೀತಿಯ ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ದಿನಾಂಕ 4ನೇ ಜೂನ್ 2014,ಬುಧವಾರ ದಂದು ದಂದು ಬೆಳಿಗ್ಗೆ 7 ರಿಂದ ಮಧ್ಯಾನ್ಹ 1 ಗಂಟೆಯ ಒಳಗೆ  ಶ್ರೀ ಸಾಯಿನಾಥ ಅಸ್ಪತ್ರೆಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿ ಈ ನೇತ್ರ ತಪಾಸಣಾ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಅಜಯ್ ಮೋರೆಯವರು ಮನವಿ ಮಾಡಿಕೊಂಡಿದ್ದಾರೆ.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ನ ವತಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಐದು ಐಚರ್ ಬಸ್ ಗಳ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ಇದೇ ತಿಂಗಳ 29ನೇ ಮೇ  2014, ಗುರುವಾರ ದಂದು 66,50,000/-(ಅರವತ್ತಾರು ಲಕ್ಷದ ಐವತ್ತು ಸಾವಿರ) ರೂಪಾಯಿ ಬೆಲೆಬಾಳುವ ಐದು ಐಚರ್ ಬಸ್ ಗಳನ್ನು ಶಿರಡಿಗೆ ಸಾಯಿಬಾಬಾ ಸಂಸ್ಥಾನಕ್ಕೆ ಕೊಡುಗೆಯಾಗಿ ನೀಡಿತು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ನ  ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಘಮೆ, ಶ್ರೀ.ಯು.ಪಿ.ಗೊಂದ್ಕರ್, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ನ ವಾಹನ ವಿಭಾಗದ ಪ್ರಮುಖರು ಹಾಗೂ ಸಿಬ್ಬಂದಿ ವರ್ಗದವರು ಕೂಡ ಉಪಸ್ಥಿತರಿದ್ದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಜ್ಯಪಾಲ ಶ್ರೀ.ಎ.ಕೆ.ಸಿಂಗ್ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ಎ.ಕೆ.ಸಿಂಗ್ ರವರು ಇದೇ ತಿಂಗಳ  29ನೇ ಮೇ 2014, ಗುರುವಾರ  ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಸನ್ಮಾನ್ಯ ರಾಜ್ಯಪಾಲರನ್ನು ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ  ಶ್ರೀ.ಮೋಹನ್ ಯಾದವ್ ರವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 


Sunday, May 25, 2014

ಮಹಾರಾಷ್ಟ್ರದ ಕಂದಾಯ ಹಾಗೂ ಕೃಷಿ ಭೂಮಿ ಸಚಿವ ಶ್ರೀ. ಬಾಳಾಸಾಹೇಬ್ ತೋರಟ್ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಕಂದಾಯ ಹಾಗೂ ಕೃಷಿ ಭೂಮಿ ಸಚಿವರಾದ ಶ್ರೀ. ಬಾಳಾಸಾಹೇಬ್ ತೋರಟ್ರವರು ಇದೇ ತಿಂಗಳ  25ನೇ ಮೇ  2014, ಭಾನುವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಂತ್ರಿಗಳನ್ನು ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಭಾರತದ ಮಾಜಿ ರಾಷ್ಟ್ರಪತಿ ಶ್ರೀಮತಿ.ಪ್ರತಿಭಾ ಪಾಟೀಲ್ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀಮತಿ.ಪ್ರತಿಭಾ ಪಾಟೀಲ್ ರವರು ಇದೇ ತಿಂಗಳ  25ನೇ ಮೇ 2014, ಭಾನುವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಾಜಿ ರಾಷ್ಟ್ರಪತಿಗಳನ್ನು  ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, May 15, 2014

ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಪ್ರಫುಲ್ ಪಟೇಲ್ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಶ್ರೀ.ಪ್ರಫುಲ್ ಪಟೇಲ್ ರವರು ಇದೇ ತಿಂಗಳ  15ನೇ ಮೇ  2014, ಗುರುವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, May 12, 2014

ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ.ಎಚ್.ಡಿ.ದೇವೇಗೌಡರ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ  ಶ್ರೀ.ಎಚ್.ಡಿ.ದೇವೇಗೌಡ ಅವರು ತಮ್ಮ ಕುಟುಂಬ ವರ್ಗದವರೊಡನೆ ಇದೇ ತಿಂಗಳ  12ನೇ ಮೇ  2014, ಸೋಮವಾರದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಾಜಿ ಪ್ರಧಾನ ಮಂತ್ರಿಗಳನ್ನು ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, May 8, 2014

ದಿವಂಗತ ಶ್ರೀ.ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಆಧುನಿಕ ಆಂಗ್ಲ ನಿರೂಪಣೆಯನ್ನು ಹೊಂದಿರುವ ಪುಸ್ತಕದ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದಿವಂಗತ ಶ್ರೀ.ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಆಧುನಿಕ ಆಂಗ್ಲ ನಿರೂಪಣೆಯನ್ನು ಹೊಂದಿರುವ ಪುಸ್ತಕವನ್ನು ಇದೇ ತಿಂಗಳ 8ನೇ ಮೇ 2014, ಗುರುವಾರದಂದು ಶಿರಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.  ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ಹಾಗೂ ಆಧುನಿಕ ಆಂಗ್ಲ ನಿರೂಪಣೆಯನ್ನು ಮಾಡಿರುವ ಪುಸ್ತಕದ ಲೇಖಕಿ ಅಮೇರಿಕಾದ ಶ್ರೀಮತಿ.ಮೋನಿಕ ಪೆನುಕೊಂಡರವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ