ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 4ನೇ ಅಕ್ಟೋಬರ್ 2013 ರಿಂದ 8ನೇ ಅಕ್ಟೋಬರ್ 2013 ರವರೆಗೆ ತನ್ನ ಮೊಬೈಲ್ ಆಂಬುಲೆನ್ಸ್ ಚಿಕಿತ್ಸಾ ವಾಹನದ ಮುಖಾಂತರವಾಗಿ ಖ್ಯಾತ ಲೇಸರ್ ಚಿಕಿತ್ಸಾ ತಜ್ಞರಾದ ಡಾ.ಕೇತನ್ ಶುಕ್ಲಾರವರ ನೇತೃತ್ವದಲ್ಲಿ ಉಚಿತ ಕಿಡ್ನಿ ಕಲ್ಲುಗಳ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. 63 ರೋಗಿಗಳು ಈ ಉಚಿತ ಕಿಡ್ನಿ ಕಲ್ಲುಗಳ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದರು. 1.5 ಸೆಂಟಿಮೀಟರ್ ಹಾಗೂ ಅದಕ್ಕಿಂತ ಕಡಿಮೆ ಗಾತ್ರದ ಕಲ್ಲುಗಳನ್ನು ಹೊಂದಿದ್ದ 28ರೋಗಿಗಳಿಗೆ ESWL
(Extra
Corporeal Shock Wave Lithotripsy) ಮುಖಾಂತರ ಶಸ್ತ್ರಚಿಕಿತ್ಸೆ ಇಲ್ಲದೆ ಕಲ್ಲುಗಳನ್ನು ಹೊರತೆಗೆಯಲಾಯಿತು. ದೊಡ್ಡ ಗಾತ್ರದ ಕಲ್ಲುಗಳನ್ನು ಹೊಂದಿದ್ದ 35ರೋಗಿಗಳಿಗೆ PCNL (Percutaneous Nephrolithotomy) ಶಸ್ತ್ರಚಿಕಿತ್ಸೆಯ ಮುಖಾಂತರ ಕಲ್ಲುಗಳನ್ನು ಹೊರತೆಗೆಯಲಾಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸಕರಾದ ಡಾ.ರಾಮ ನಾಯಕ್ ಹಾಗೂ ಡಾ.ರೆಡ್ಡಿಯವರುಗಳು ಕೂಡ ಈ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ವೈದ್ಯಕೀಯ ನೆರವನ್ನು ನೀಡಿದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment