Friday, June 28, 2013

ಅನಾರೋಗ್ಯದಿಂದ ಬಳಲುತ್ತಿರುವ ಬಡ ರೋಗಿಗಳನ್ನು ಮೊಬೈಲ್ ಔಷಧಾಲಯದ ಮುಖಾಂತರ ಸಂತೈಸುತ್ತಿರುವ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ - ಕೃಪೆ: ಶ್ರೀ ಸಾಯಿ ಲೀಲಾ ಮಾಸಪತ್ರಿಕೆ ಮಾರ್ಚ್-ಏಪ್ರಿಲ್  2013 ಸಂಚಿಕೆ



ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಉಧಿಯನ್ನು ನೀಡುವ ಮುಖಾಂತರ ಅನೇಕ ಭಕ್ತರ ದೈಹಿಕ ಹಾಗೂ ಮಾನಸಿಕ ಖಾಯಿಲೆಗಳನ್ನು ಹೇಗೆ ನಿವಾರಣೆ ಮಾಡುತ್ತಿದ್ದರೆಂಬ ವಿಷಯವನ್ನು ನಾವುಗಳೆಲ್ಲಾ  ಸಾಯಿ ಸಚ್ಚರಿತ್ರೆಯಲ್ಲಿ ಓದಿದ್ದೇವೆ. ಅದರಿಂದ ಪ್ರೇರೇಪಿತರಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 1964 ನೇ ಇಸವಿಯಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯನ್ನು ಬಡ ರೋಗಿಗಳಿಗಾಗಿ ಪ್ರಾರಂಭಿಸಿತು. ದಿನೇ ದಿನೇ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು 2006 ರಲ್ಲಿ ಸಾಯಿಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಿತು.

ಶಿರಡಿಯ ಸುತ್ತಮುತ್ತ ಹಣದ ಹಾಗೂ ಮಾಹಿತಿಯ ತೊಂದರೆಯಿಂದ ಸರಿಯಾದ ವೈದ್ಯಕೀಯ ನೆರವು ಸಿಗದೇ ಪರದಾಡುತ್ತಿರುವ ಅನೇಕ ಗ್ರಾಮಗಳಿವೆ. ಆದ ಕಾರಣ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ತ್ರಿ-ಸದಸ್ಯ ಸಮಿತಿಯು ಅಂತಹ ಬಡ ರೋಗಿಗಳ ಮನೆ ಬಾಗಿಲಿಗೆ ವೈದ್ಯಕೀಯ ನೆರವನ್ನು ಸಂಪೂರ್ಣ ಉಚಿತವಾಗಿ ನೀಡುವ ನಿರ್ಧಾರವನ್ನು ಕೈಗೊಂಡಿತು.

ಆ ನಿರ್ಧಾರದಂತೆ ಮಕರ ಸಂಕ್ರಾಂತಿಯ ಶುಭ ದಿನವಾದ 14ನೇ ಜನವರಿ 2013 ರಂದು ತ್ರಿ-ಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಅಹಮದ್ ನಗರದ ಜಿಲ್ಲಾ ಮುಖ್ಯ ನ್ಯಾಯಾಧೀಶರೂ ಆದ ಶ್ರೀ ಜಯಂತ್ ಕುಲಕರ್ಣಿಯವರು ಈ ಮೊಬೈಲ್ ಔಷಧಾಲಯದ ಉದ್ಘಾಟನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಈ ಅನನ್ಯ ಸೇವೆಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಪ್ರಯೋಗಾರ್ಥವಾಗಿ ಮೊದಲ ದಿನ ಈ ಮೊಬೈಲ್ ವ್ಯಾನ್ ಅನ್ನು ತೆಗೆದುಕೊಂಡು ಹೋದಾಗ 306 ರೋಗಿಗಳು ಇದರ ಪ್ರಯೋಜನವನ್ನು ಪಡೆದರು. ಅದರ ವಿವರ ಈ ರೀತಿಯಿದೆ: ನಂದುರ್ಕಿ ಕುರ್ದ್-72, ವೇಸ್-98, ಭದ್ರಾಪುರ್-70, ರಂಜನಗಾವ್ ದೇಶಮುಖ್-26 ಹಾಗೂ ಕಾಕಡಿ-40. ಕೇವಲ 20 ದಿನಗಳಲ್ಲಿ 3417 ರೋಗಿಗಳು ಈ ಮೊಬೈಲ್ ಔಷಧಾಲಯ ಸೇವೆಯ ಪೂರ್ಣ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಈ ಅನನ್ಯ ಸೇವೆಯನ್ನು ನೀಡುತ್ತಿರುವುದಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವನ್ನು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

ಈ ಮೊಬೈಲ್ ಔಷಧಾಲಯದಲ್ಲಿ ಒಬ್ಬ ವೈದ್ಯಕೀಯ ಅಧಿಕಾರಿ, ವೈದ್ಯಕೀಯ ಕಾರ್ಯಕರ್ತರು ಹಾಗೂ ರೋಗಿಗಳಿಗೆ ಅಗತ್ಯವಾದ ಎಲ್ಲಾ ವೈದ್ಯಕೀಯ ಉಪಕರಣಗಳಿವೆ.

ಪ್ರಾರಂಭಿದಲ್ಲಿ ಕೇವಲ ಮಂಗಳವಾರ ಹಾಗೂ ಶುಕ್ರವಾರ ಈ ಈ ಮೊಬೈಲ್ ಔಷಧಾಲಯ ಸೇವೆಯನ್ನುನೀಡಲಾಗುತ್ತಿತ್ತು. ಆದರೆ, ಈಗ ವಾರದ ನಾಲ್ಕು ದಿನಗಳು ಅಂದರೆ, ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರಗಳಂದು ಈ ಸೇವೆಯನ್ನು ನೀಡಲಾಗುತ್ತಿದೆ. ಕೇವಲ ಹೆಚ್ಚುವರಿ ದಿನಗಳು ಮಾತ್ರವಲ್ಲದೇ ಸೇವೆಯನ್ನು ನೀಡುವ ಹಳ್ಳಿಗಳ ವಿಸ್ತೀರ್ಣವನ್ನು ಕೂಡ ಹೆಚ್ಚಿಸಲಾಗಿದೆ.

ಶ್ರೀ ಸಾಯಿಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಶ್ರೀ.ಕೌಶಿಕ್ ಮಕ್ವಾನಾ, ಶ್ರೀ.ಸಾಯಿನಾಥ ಆಸ್ಪತ್ರೆಯ  ವೈದ್ಯಕೀಯ ನಿರ್ದೇಶಕರಾದ ಡಾ.ಸಂಜಯ ಪತಾರೆ, ಅಧೀಕ್ಷಕರಾದ ಶ್ರಿ. ಸುಭಾಷ್ ಚಿತ್ರೆಯವರುಗಳು ಈ  ಸೇವೆಯು ದೂರದ ಹಳ್ಳಿಗಳಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯಂತ ಶ್ರದ್ಧೆಯಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಮರಾಠಿಯಿಂದ  ಆಂಗ್ಲ ಭಾಷೆಗೆ ಅನುವಾದ: ಕುಮಾರಿ.ಶಂಶಾದ್ ಆಲಿ ಬೇಗ್ 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ: ಶ್ರೀಕಂಠ ಶರ್ಮ  

Friday, June 21, 2013

  ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಚೈತನ್ಯ ಮಂಡಳಿ (ನೋಂದಣಿ) ಮಂದಿರ ಟ್ರಸ್ಟ್, ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ, ಹುಳಿಮಾವು ಕೆರೆಯ ಪಕ್ಕ, ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಂಗಳೂರು -560 0 76, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ನಗರದ ಹುಳಿಮಾವು ಬಡಾವಣೆಯ ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ ಹಾಗೂ ಹುಳಿಮಾವು ಕೆರೆಯ ಪಕ್ಕದಲ್ಲಿ ಇರುತ್ತದೆ. ದೇವಾಲಯವನ್ನು 2400 ಚದರ ಅಡಿ ವಿಸ್ತಾರವಾದ ಟ್ರಸ್ಟ್ ನ ಸ್ವಂತ ಸ್ಥಳದಲ್ಲಿ ನಿರ್ಮಿಸಲಾಗಿದೆ. 

ದೇವಾಲಯದ ಭೂಮಿಪೂಜೆಯನ್ನು 15ನೇ ನವೆಂಬರ್ 2012 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 23ನೇ ಮೇ 2013 ರಂದು  ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಗ್ರಾಮದ ಶ್ರೀ ಸತ್ ಉಪಾಸಿ, ತುಮಕೂರಿನ ದತ್ತ ಅವಧೂತ ಆಶ್ರಮದ ಶ್ರೀ ಗುರು ಕನ್ನೇಶ್ವರ ದತ್ತ, ಶ್ರೀ ತನ್ಮಯಾನಂದ ರವರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಅಂತಸ್ತಿನಲ್ಲಿ ನಿರ್ಮಿಸಲಾಗಿರುವ  ಗರ್ಭಗುಡಿಯಲ್ಲಿ  5.4  ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಬೆಳ್ಳಿಯ ಸಾಯಿಬಾಬಾರವರ ವಿಗ್ರಹ ಮತ್ತು ಅಮೃತಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.ಗರ್ಭಗುಡಿಯ ಹಿಂಭಾಗವನ್ನು ಶಿರಡಿಯ ಸಮಾಧಿ ಮಂದಿರದಲ್ಲಿ ಇರುವಂತೆ ಮರಳು ಕಲ್ಲಿನಿಂದ ನಿರ್ಮಿಸಲಾಗಿದೆ.

ದೇವಾಲಯದಲ್ಲಿ  ಮರದ ಪಲ್ಲಕ್ಕಿ ಇದ್ದು ಇದನ್ನು ಗುರುವಾರದಂದು ಹಾಗೂ ವಿಶೇಷ ಉತ್ಸವದ ದಿನಗಳಂದು ಪಲ್ಲಕಿ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ಬಳಸಲಾಗುತ್ತದೆ.

ದೇವಾಲಯದ ಕೆಳಮಹಡಿಯಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದ್ದು ಇಲ್ಲಿ 2.5 ಅಡಿ ಎತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ.

 


 
 

 








ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ದೇವಾಲಯದ ಸಮಯ:

ಬೆಳಿಗ್ಗೆ : 6:30 ರಿಂದ 12:30.
ಸಂಜೆ : 6:00  ರಿಂದ 9:00.

ಆರತಿಯ ಸಮಯ:

ಕಾಕಡಾ ಆರತಿ : 06:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ


ಪ್ರತಿದಿನ ಬೆಳಿಗ್ಗೆ 7:00 ರಿಂದ 8:00 ರವರೆಗೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ  ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 108/- ರೂಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಬೆಳಿಗ್ಗೆ 8:00 ರಿಂದ 9:00 ರವರೆಗೆ ಮಾಡಲಾಗುತ್ತದೆ. ಸೇವಾಶುಲ್ಕ 250/- ರೂಪಾಯಿಗಳು.

ಪ್ರತಿದಿನ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 15/- ರೂಪಾಯಿಗಳು.

ದೇವಾಲಯದಲ್ಲಿ ನಿತ್ಯಾನ್ನದಾನ  ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಸೇವಾಶುಲ್ಕ 1116/- ರೂಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರಿಗೆ ಪಲ್ಲಕ್ಕಿ ಮತ್ತು ಅನ್ನದಾನ ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಸೇವಾಶುಲ್ಕ 2500/- ರೂಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರಿಗೆ ಪಲ್ಲಕ್ಕಿ ಉತ್ಸವ ಸೇವೆಯನ್ನು ಸಂಜೆ 7:30 ರಿಂದ 8:30 ರವರೆಗೆ ಮಾಡಲಾಗುತ್ತದೆ. ಸೇವಾಶುಲ್ಕ  1008/- ರೂಪಾಯಿಗಳು.  

ದೇವಾಲಯದಲ್ಲಿ ಶಾಶ್ವತ ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಸೇವಾ ಶುಲ್ಕ 5004/- ರೂಪಾಯಿಗಳು.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 23 ನೇ ಮೇ ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.

ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿದಿನ  ಬೆಳಿಗ್ಗೆ ಹಾಗೂ ರಾತ್ರಿ ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೆ ಮಹಾ ಪ್ರಸಾದ ವಿನಿಯೋಗ ಸೇವೆಯನ್ನು ಮಾಡಲಾಗುತ್ತದೆ.

ದೇಣಿಗೆಗೆ ಮನವಿ:

ದೇವಾಲಯದ ದಿನಿನಿತ್ಯ ಎರಡು ಬಾರಿ ಮಾಡಲಾಗುತ್ತಿರುವ ಅನ್ನದಾನ ಸೇವೆಗಾಗಿ, ದಿನನಿತ್ಯದ ಆಗುಹೋಗುಗಳಿಗಾಗಿ, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶ್ರೀ ಸಾಯಿ ಚೈತನ್ಯ ಮಂಡಳಿ (ನೋಂದಣಿ) ಮಂದಿರ ಟ್ರಸ್ಟ್", ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬನಶಂಕರಿ, 2ನೇ ಹಂತ, ಬೆಂಗಳೂರು, ಖಾತೆ ಸಂಖ್ಯೆ: 129801000011511 ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ ಹಾಗೂ ಹುಳಿಮಾವು ಕೆರೆಯ ಪಕ್ಕ.


ವಿಳಾಸ:
ಶ್ರೀ ಸಾಯಿ ಚೈತನ್ಯ ಮಂಡಳಿ (ನೋಂದಣಿ) ಮಂದಿರ ಟ್ರಸ್ಟ್, 
ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ,
ಹುಳಿಮಾವು ಕೆರೆಯ ಪಕ್ಕ, ಹುಳಿಮಾವು, ಬನ್ನೇರುಘಟ್ಟ ರಸ್ತೆ, 
ಬೆಂಗಳೂರು -560 0 76, ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಕೋಮಲ್ ರೂಪ್ / ಶ್ರೀಮತಿ.ಪದ್ಮಾವತಿ/ಶ್ರೀಮತಿ.ಜಯಶ್ರೀ/ಶ್ರೀ.ಭಾಸ್ಕರ್

ದೂರವಾಣಿ ಸಂಖ್ಯೆಗಳು:
+91 99010 01010/+91 97421 01010/+91 98861 24547/+91 98441 33777

ಇ-ಮೈಲ್ ವಿಳಾಸ:
natarajnagaraj.nn@gmail.com

ಮಾರ್ಗಸೂಚಿ:
ಈ ದೇವಾಲಯವು ಬೆಂಗಳೂರು ನಗರದ ಹುಳಿಮಾವು ಬಡಾವಣೆಯ ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ ಹಾಗೂ ಹುಳಿಮಾವು ಕೆರೆಯ ಪಕ್ಕದಲ್ಲಿ ಇರುತ್ತದೆ.ಹುಳಿಮಾವು ಬಸ್ ನಿಲ್ದಾಣದಿಂದ ಕೇವಲ 200 ಮೀಟರ್ ಗಳ ಅಂತರದಲ್ಲಿರುತ್ತದೆ. ಮೆಜಿಸ್ಟಿಕ್ ಮತ್ತು ಮಾರುಕಟ್ಟೆಯಿಂದ ಹೇರಳವಾಗಿ ಬಸ್ ಗಳು ದೊರೆಯುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, June 7, 2013

ಭರವಸೆಯ ಸಾಯಿ ಭಜನ ಗಾಯಕ ಶ್ರೀ.ದಾಸ್ ಆರುಣಿ - ಕೃಪೆ: ಸಾಯಿಅಮೃತಧಾರಾ.ಕಾಂ

 

ಶ್ರೀ.ದಾಸ್ ಆರುಣಿಯವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ನವದೆಹಲಿಯ ಗಂಧರ್ವ ಮಹಾವಿದ್ಯಾಲಯದಿಂದ ತರಬೇತಿಯನ್ನು ಪಡೆದ ಸಾಯಿ ಭಜನ  ಗಾಯಕರು.

ಇವರು 4ನೇ ಮಾರ್ಚ್ 1982 ರಂದು ಶ್ರೀಮತಿ.ಮಾಧುರಿ ಹಾಗೂ ಶ್ರೀ.ಅನಿಲ್ ಕುಮಾರ್ ಸಿನ್ಹಾ ರವರ  ಪುತ್ರನಾಗಿ ಬಿಹಾರ ರಾಜ್ಯದ ಗಯಾ ಪಟ್ಟಣದಲ್ಲಿ ಸಂಗೀತಗಾರರ ವಂಶದಲ್ಲಿ ಜನಿಸಿರುತ್ತಾರೆ. ಇವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಎರಡು ವರ್ಷಗಳ ಡಿಪ್ಲೊಮಾವನ್ನು ನವದೆಹಲಿಯ ಗಂಧರ್ವ ಮಹಾವಿದ್ಯಾಲಯದಿಂದ ಗಳಿಸಿರುತ್ತಾರೆ.

ಶ್ರೀ ದಾಸ್ ಆರುಣಿಯವರನ್ನು ಇವರ ತಂದೆ ತಾಯಿಗಳು ಸಂಪೂರ್ಣ ಸಂಗೀತಮಯ ವಾತಾವರಣದಲ್ಲಿ ಬೆಳಿಸಿದರು. ಆದ ಕಾರಣ, ತಮ್ಮ ಶಾಲಾ ದಿನಗಳಿಂದಲೇ ಇವರು ಸಂಗೀತಕ್ಕೆ ಆಕರ್ಷಿತರಾಗಿದ್ದಷ್ಟೇ ಅಲ್ಲದೆ, ತಮ್ಮ ಮನೆಯವರ ಹಾಗೂ ಸ್ನೇಹಿತರ ಮುಂದೆ ತಮ್ಮ ಮಧುರ ಧ್ವನಿಯಲ್ಲಿ ಹಾಡಿ ಅವರುಗಳ ಮೆಚ್ಚಿಗೆಯನ್ನು ಪಡೆದಿದ್ದರು.

ಇವರು ಶಿರಡಿ ಸಾಯಿಬಾಬಾರವರ ಆಶೀರ್ವಾದದಿಂದ ಸಂಗೀತವನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸಿ 2003ನೇ ಇಸವಿಯಿಂದ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸಿದರು. ಇವರು ತಮ್ಮ ಮೊದಲನೇ ಸಾಯಿ ಭಜನೆಯ ಕಾರ್ಯಕ್ರಮವನ್ನು ನವದೆಹಲಿಯ ಕಮಾನಿ ಆಡಿಟೋರಿಯಂನಲ್ಲಿ ನೀಡಿದರು.

ಸಾಯಿಭಜನ ಗಾಯಕರಾಗಿ ಇವರು ಭಾರತದ ಅನೇಕ ಕಡೆಗಳಲ್ಲಿ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. 2012ನೇ ಇಸವಿಯಲ್ಲಿ ಲಕ್ನೌನಲ್ಲಿ ಹಾಗೂ 2013ನೇ ಇಸವಿಯಲ್ಲಿ ಗಜಿಯಾಬಾದ್ ಮತ್ತು ಲೂಧಿಯಾನಾದಲ್ಲಿ ನೀಡಿದ ಕಾರ್ಯಕ್ರಮಗಳು ಅವುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳಾಗಿರುತ್ತವೆ.  

ಇವರು ಸುಪ್ರಸಿದ್ಧ ಸಾಯಿಬಾಬಾ ಚಿತ್ರಕಾರರಾದ ಶ್ರೀ.ನವನೀತ್ ಅಗ್ನಿಹೋತ್ರಿ ಹಾಗೂ ಶ್ರೀ.ಅಮಾನ್ ಮೈಂಗಿಯವರ ಮಾರ್ಗದರ್ಶನದಲ್ಲಿ ಸಾಯಿ ಗ್ಲೋರಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ SORRY SAI ಎಂಬ ಧ್ವನಿಸುರಳಿಯಲ್ಲಿ ಪ್ರಪ್ರಥಮ ಬಾರಿಗೆ ಹಾಡಿದ್ದಾರೆ.

ಇವರು ಶ್ರೀಮತಿ.ವಿಷ್ಣುಪ್ರಿಯ ಅವರನ್ನು ವಿವಾಹವಾಗಿದ್ದು ಇವರಿಗೆ ಆರ್ಣವ್ ಎಂಬ ಮಗನಿದ್ದಾನೆ. ಪ್ರಸ್ತುತ ಇವರು ತಮ್ಮ  ತಂದೆ,ತಾಯಿ,ಮಗ ಹಾಗೂ ಧರ್ಮಪತ್ನಿಯೊಂದಿಗೆ ನವದೆಹಲಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ದಾಸ್ ಆರುಣಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀ.ದಾಸ್ ಆರುಣಿ
ಆರ್.ಜೆಡ್.32, ಬಿ-ರಸ್ತೆ ನಂ.7,
ರಘು ನಗರ,
ನವದೆಹಲಿ - 110 045,ಭಾರತ.

ದೂರವಾಣಿ ಸಂಖ್ಯೆ:

+91 99900 90271/+91 99993 82004

ಇ-ಮೈಲ್ ವಿಳಾಸ:

Das.aaruni@gmail.com

ಫೇಸ್ ಬುಕ್ ವಿಳಾಸ :

das.aaruni@facebook.com

ಅಂತರ್ಜಾಲ ತಾಣ:

www.saisursangam.com/sangam/dasaaruni


ಧ್ವನಿಸುರಳಿಗಳು:

SORRY SAI

ಸಾಯಿ ಭಜನೆಯ ವೀಡಿಯೋ:



ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, June 1, 2013

ಭಾರತದ ರಾಷ್ಟ್ರಪತಿ ಶ್ರೀ.ಪ್ರಣಬ್ ಮುಖರ್ಜಿ ಶಿರಡಿ ಭೇಟಿ- ಕೃಪೆ:ಸಾಯಿಅಮೃತಧಾರಾ.ಕಾಂ

ಭಾರತದ ರಾಷ್ಟ್ರಪತಿಗಳಾದ ಶ್ರೀ.ಪ್ರಣಬ್ ಮುಖರ್ಜಿಯವರು ಇದೇ ತಿಂಗಳ  1ನೇ ಜೂನ್ 2013, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ.ಶಂಕರ ನಾರಾಯಣ, ಪಂಜಾಬ್ ನ ರಾಜ್ಯಪಾಲರಾದ ಶ್ರೀ.ಶಿವರಾಜ್ ಪಾಟೀಲ್ ಚಾಕೂರ್ಕರ್, ಸಂಸತ್ ಸದಸ್ಯ ಶ್ರೀ.ಬಾವು ಸಾಹೇಬ್ ವಾಕ್ಚುರೆ, ಮಹಾರಾಷ್ಟ್ರ ಸರ್ಕಾರದ ಬುಡಕಟ್ಟು ಜನಾಂಗ ಅಭಿವೃದ್ಧಿ ಸಚಿವರಾದ ಶ್ರೀ.ಬಾಬಾನ್ ರಾವ್ ಪಚ್ಪುಟೆ, ಕಂದಾಯ ಮತ್ತು ಉಪ್ಪು ಭೂಮಿ ಸಚಿವರಾದ ಬಾಳಾಸಾಹೇಬ್ ತೋರಟ್, ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖ್ಹೆ ಪಾಟೀಲ್, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿ, ಅಹಮದ್ ನಗರದ ಕಲೆಕ್ಟರ್ ಹಾಗೂ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಡಾಕ್ಟರ್ ಸಂಜೀವ್ ಕುಮಾರ್ ದಯಾಳ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರುಗಳು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಭಾರತದ ರಾಷ್ಟ್ರಪತಿಗಳಾದ ಶ್ರೀ.ಪ್ರಣಬ್ ಮುಖರ್ಜಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ.ಶಂಕರ ನಾರಾಯಣ, ಪಂಜಾಬ್ ನ ರಾಜ್ಯಪಾಲರಾದ ಶ್ರೀ.ಶಿವರಾಜ್ ಪಾಟೀಲ್ ಚಾಕೂರ್ಕರ್, ಸಂಸತ್ ಸದಸ್ಯ ಶ್ರೀ.ಬಾವು ಸಾಹೇಬ್ ವಾಕ್ಚುರೆ, ಮಹಾರಾಷ್ಟ್ರ ಸರ್ಕಾರದ ಬುಡಕಟ್ಟು ಜನಾಂಗ ಅಭಿವೃದ್ಧಿ ಸಚಿವರಾದ ಶ್ರೀ.ಬಾಬಾನ್ ರಾವ್ ಪಚ್ಪುಟೆ, ಕಂದಾಯ ಮತ್ತು ಉಪ್ಪು ಭೂಮಿ ಸಚಿವರಾದ ಬಾಳಾಸಾಹೇಬ್ ತೋರಟ್, ಕೃಷಿ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖ್ಹೆ ಪಾಟೀಲ್, ಅಹಮದ್ ನಗರದ ಕಲೆಕ್ಟರ್ ಹಾಗೂ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಡಾಕ್ಟರ್ ಸಂಜೀವ್ ಕುಮಾರ್ ದಯಾಳ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರುಗಳು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಾತನಾಡಿದ ರಾಷ್ಟ್ರಪತಿ ಶ್ರೀ.ಪ್ರಣಬ್ ಮುಖರ್ಜಿಯವರು ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಮಾಡಿ ಅವರ ಪಾದಕಮಲಗಳಿಗೆ ಪ್ರಣಾಮಗಳನ್ನು ಸಲ್ಲಿಸುವ ಅವಕಾಶ ತಮಗೆ ದೊರಕಿದ್ದು ತಮ್ಮ ಸೌಭಾಗ್ಯವೆಂದು ಬಣ್ಣಿಸಿದರು. 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ