ದೇವನಹಳ್ಳಿ ಸಾಯಿಬಾಬಾ ಮಂದಿರದ ವತಿಯಿಂದ ವೈಭವೋಪೇತ ಹೊಸ ವರ್ಷದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವನಹಳ್ಳಿ ಸಾಯಿಬಾಬಾ ಮಂದಿರದ ವತಿಯಿಂದ ಇದೇ ತಿಂಗಳ 1ನೇ ಜನವರಿ 2013, ಮಂಗಳವಾರದಂದು ಹೊಸ ವರ್ಷವನ್ನು ಅತ್ಯಂತ ವೈಭವವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ದಿನವಿಡೀ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಿನದ ಕಾರ್ಯಕ್ರಮಗಳು ಬೆಳಿಗ್ಗೆ ಬಾಬಾರವರಿಗೆ ಕಾಕಡಾ ಆರತಿ ಹಾಗೂ ಮಂಗಳಸ್ನಾನದೊಂದಿಗೆ ಆರಂಭವಾದವು. ನಂತರ ವಿಶೇಷ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಖ್ಯಾತ ಸಾಯಿ ಭಜನ ಗಾಯಕರಾದ ಹಾಗೂ ಸಾಯಿಬಾಬಾ ಸಂಸ್ಥಾನದ ಗಾಯಕರಾದ ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾನ್ಹ 1 ಗಂಟೆಯವರೆಗೆ ಹಲವಾರು ಉತ್ತಮ ಸಾಯಿ ಭಜನೆಗಳನ್ನು ಹಾಡಿ ಭಕ್ತರನ್ನು ರಂಜಿಸಿದರು. ಸಂಜೆಯ ಕಾರ್ಯಕ್ರಮಗಳು 5 ಗಂಟೆಗೆ ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರ ಸಾಯಿ ಭಜನೆಯೊಂದಿಗೆ ಆರಂಭವಾದವು. ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರು ರಾತ್ರಿ 10 ಗಂಟೆಯವರೆಗೆ ಹಲವಾರು ಸಾಯಿ ಭಜನೆಗಳನ್ನು ಎಂದಿನಂತೆ ತಮ್ಮ ಅತ್ಯುತ್ತಮ ಧ್ವನಿಯಲ್ಲಿ ಹಾಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. ಭಾರತದ ಹತ್ತು ಪ್ರಖ್ಯಾತ ಸಂತರು ಹಾಗೂ ದತ್ತಾತ್ರೇಯರ ಭಾವಚಿತ್ರಗಳನ್ನು ಒಳಗೊಂಡ ಸುಂದರ ಹೊಸವರ್ಷದ ಕ್ಯಾಲೆಂಡರ್ ಹಾಗೂ ಮಹಾಪ್ರಸಾದವನ್ನು ಬೆಳಿಗ್ಗೆಯಿಂದ ರಾತ್ರಿಯವರೆವಿಗೂ ದೇವಾಲಯಕ್ಕೆ ದರ್ಶನಕ್ಕೆ ಬಂದ ಎಲ್ಲಾ ಸಾಯಿ ಭಕ್ತರಿಗೂ ವಿತರಿಸಲಾಯಿತು. ಸುಮಾರು 20000 ಕ್ಕೂ ಹೆಚ್ಚು ಸಾಯಿ ಭಕ್ತರು ಹೊಸ ವರ್ಷದ ದಿನದಂದು ಸಾಯಿಬಾಬಾರವರ ದರ್ಶನವನ್ನು ಪಡೆದು ಪುನೀತರಾದರು.
ಕನ್ನಡ ಅನುವಾದ: ಶ್ರೀಕಂಠಶರ್ಮ
No comments:
Post a Comment