Monday, June 11, 2012

ಶಿರಡಿ ಸಾಯಿ ಪರಿವಾರ್ ಟ್ರಸ್ಟ್ , ಬೆಂಗಳೂರು ವತಿಯಿಂದ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿ ಪರಿವಾರ್ ಟ್ರಸ್ಟ್ , ಹೆಚ್.ಎಸ್.ಆರ್ ಬಡಾವಣೆ, ಬೆಂಗಳೂರು ವತಿಯಿಂದ 28ನೇ ಜುಲೈ 2012, ಶನಿವಾರದಂದು ರಾತ್ರಿ 9:00 ರಿಂದ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ಎಂಬ ಶೀರ್ಷಿಕೆಯಡಿಯಲ್ಲಿ  ಶಿರಡಿಯ ಪ್ರಖ್ಯಾತ ನಾಟಕ ತಂಡವಾದ "ಶ್ರೀ.ಬಬ್ಲು ದುಗ್ಗಾಲ್ ಮತ್ತು ತಂಡ" ದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿರಡಿಯಲ್ಲಿರುವ ದ್ವಾರಕಾಮಾಯಿಯ ಪ್ರತಿರೂಪವನ್ನು ಪುನರ್ ನಿರ್ಮಾಣ ಮಾಡುತ್ತಿರುವುದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಶಿರಡಿ ಸಾಯಿ ಪರಿವಾರ್ ಟ್ರಸ್ಟ್, ಬೆಂಗಳೂರು ಸಾಯಿಬಾಬಾರವರ ಆಶೀರ್ವಾದದೊಂದಿಗೆ 2009 ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಮಾಡಿದ ಅನೇಕ ಲೀಲೆಗಳನ್ನು ಮತ್ತು ಚಮತ್ಕಾರಗಳನ್ನು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ  ಬರುವ ಘಟನೆಗಳ ಮುಖಾಂತರವಾಗಿ ಸಾಯಿ ಭಕ್ತರಿಗೆ ಈ ನಾಟಕದ ಮುಖಾಂತರ ತೋರಿಸುವುದು ಹಾಗೂ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಟ್ರಸ್ಟ್ ನ್ನು ಪ್ರಾರಂಭಿಸಲಾಗಿರುತ್ತದೆ.

ಕಾರ್ಯಕ್ರಮವು 28ನೇ ಜುಲೈ 2012, ಶನಿವಾರ ದಂದು ರಾತ್ರಿ 9:00 ಕ್ಕೆ  ಪ್ರಾರಂಭವಾಗುತ್ತದೆ. ಶಿರಡಿ ಸಾಯಿಬಾಬಾರವರ ಆರತಿ, ಭಜನೆ,  ಸಾಯಿಬಾಬಾರವರ ಉಪದೇಶಗಳು, ದ್ವಾರಕಾಮಾಯಿ ದರ್ಬಾರ್, ಸಾಯಿಬಾಬಾರವರ ದರ್ಶನ, ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನಾಟಕ, ಸಾಯಿಬಾಬಾರವರು ಮಾಡಿದ  ಅನೇಕ ಪವಾಡಗಳು, ಮಹಾಪ್ರಸಾದ ಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ.

ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳ:

ಪ್ರಿನ್ಸಸ್ ಗಾಲ್ಫ್, ಅರಮನೆ ಮೈದಾನ,
ಹೀರೋ ಹೊಂಡಾ ಶೋರೂಂ ಎದುರು,
ಬಳ್ಳಾರಿ ರಸ್ತೆ, ಬೆಂಗಳೂರು.


ಕಳೆದ ವರ್ಷ ನೆಡೆದ ಕಾರ್ಯಕ್ರಮದಲ್ಲಿ ಸರಿ ಸುಮಾರು 5000 ಕ್ಕೂ ಹೆಚ್ಚು ಸಾಯಿಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜಕರು ರಾತ್ರಿ ಪೂರ್ತಿ ನೆಡೆಯುವ ಈ ಶಿರಡಿ ಸಾಯಿಬಾಬಾ ಕಾರ್ಯಕ್ರಮಕ್ಕೆ ಮತ್ತಷ್ಟು ಹೆಚ್ಚಿನ ಸಾಯಿ ಭಕ್ತರ ಸಹಕಾರವನ್ನು ಕೋರುತ್ತಾರೆ. ಕಾರ್ಯಕ್ರಮಕ್ಕೆ ದೇಣಿಗೆ ನೀಡಲು ಅಥವಾ ಇನ್ನ್ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡಲು ಇಚ್ಚಿಸುವ ಸಾಯಿಭಕ್ತರು ಶ್ರೀ.ಮುಕೇಶ್ ಅಗರವಾಲ್ - +91 98800 73330  ಶ್ರೀ.ಅಜಯ್ ಶರ್ಮ - +91 99649 73330 ಶ್ರೀ.ರಾಜೇಂದರ್ ಬೈಡ್ - +91 94488 03769 ಅಥವಾ ಶ್ರೀ.ರವಿ - +91 94482 56685  ಇ-ಮೈಲ್ ವಿಳಾಸ: shirdisaipariwartrust@gmail.com ನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment