Monday, April 30, 2012

ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), ಗಂಜಾಂ, ಒರಿಸ್ಸಾ ಭೂಮಿಪೂಜಾ ಸಮಾರಂಭದ ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಒರಿಸ್ಸಾರಾಜ್ಯದ ಗಂಜಾಂ ಜಿಲ್ಲೆಯ ಬಡುವಾದಲ್ಲಿರುವ ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮವು ತಮ್ಮ ಆಶ್ರಮದ ವತಿಯಿಂದ ಪ್ರಾರಂಭಿಸಬೇಕೆಂದುಕೊಂಡಿರುವ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಭೂಮಿ ಪೂಜೆಯು ಹೈದರಾಬಾದ್ ನ ಖ್ಯಾತ ಸಾಯಿಭಕ್ತರಾದ ಸಾಯಿನಾಮ ಶ್ರೀ.ಡಿ.ಶಂಕರಯ್ಯ ನವರ ಮಾರ್ಗದರ್ಶನದಲ್ಲಿ ಇದೇ ತಿಂಗಳ 26ನೇ ಏಪ್ರಿಲ್ 2012, ಗುರುವಾರ ಬೆಳಿಗ್ಗೆ 9 ಗಂಟೆಗೆ ನೆರವೇರಿತು.ಆಂಧ್ರಪ್ರದೇಶದ ಹೈದರಾಬಾದ್ ನ ಖ್ಯಾತ ಪುರೋಹಿತರಾದ ಪಂಡಿತ್ ಶ್ರೀ.ರಾಮಮುರ್ತಿ ಯವರ ಮಾರ್ಗದರ್ಶನದಲ್ಲಿ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಭೂಮಿಪೂಜೆ ಹಾಗೂ ದತ್ತ ಹೋಮವನ್ನು ಆಚರಿಸಲಾಯಿತು. ನೂರಾರು ಸ್ಥಳೀಯ ಸಾಯಿಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಡವರಿಗೆ ಉಚಿತ ವಸ್ತ್ರಗಳ ವಿತರಣೆಯನ್ನು ಕೂಡ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿರಡಿ ಸಾಯಿಬಾಬಾರವರ ಆಶೀರ್ವಾದದಿಂದ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಸೇವಾ ಕಾರ್ಯಕ್ರಮಗಳು ಇನ್ನಷ್ಟು ತೀವ್ರ ಗತಿಯಲ್ಲಿ ಮುಂದುವರಿಯುತ್ತದೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಟ್ರಸ್ಟ್ ನ ಸದಸ್ಯರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.










ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಒಳ್ಳೆಯ ಕಾರ್ಯಕ್ಕೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 

ಡಾ.ಕುಮುದ್ ಚಂದ್ರ ಬೆಹೆರಾ (ಪಿ.ಹೆಚ್.ಡಿ), 
ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), 
ಬಡುವಾ, ಗೊಲಿಯಾ ಅಂಚೆ, 
ಬುಗುಡಾ ಮಾರ್ಗ, ಗಂಜಾಂ ಜಿಲ್ಲೆ, 
ಒರಿಸ್ಸಾ- 761 118, ಭಾರತ.  
ದೂರವಾಣಿ ಸಂಖ್ಯೆ: +91 94380 36171 
ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಭಾರತದ ಖ್ಯಾತ ಕ್ರಿಕೆಟ್ ಆಟಗಾರ ರಾಹುಲ್ ಡ್ರಾವಿಡ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಖ್ಯಾತ ಕ್ರಿಕೆಟ್  ಆಟಗಾರ ರಾಹುಲ್ ಡ್ರಾವಿಡ್ ರವರು ಇದೇ ತಿಂಗಳ 24ನೇ ಏಪ್ರಿಲ್ 2012, ಮಂಗಳವಾರದಂದು ತಮ್ಮ ಕುಟುಂಬ ಸಮೇತರಾಗಿ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, April 19, 2012

ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), ಗಂಜಾಂ, ಒರಿಸ್ಸಾ ಭೂಮಿಪೂಜಾ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ 

ಒರಿಸ್ಸಾರಾಜ್ಯದ ಗಂಜಾಂ ಜಿಲ್ಲೆಯ ಬಡುವಾದಲ್ಲಿರುವ ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮವು ತಮ್ಮ ಆಶ್ರಮದ ವತಿಯಿಂದ ಪ್ರಾರಂಭಿಸಬೇಕೆಂದುಕೊಂಡಿರುವ ದ್ವಾರಕಾಮಾಯಿ ಕಮ್ಯುನಿಟಿ ಸೆಂಟರ್ ನ ಭೂಮಿ ಪೂಜೆಯನ್ನು ಹೈದರಾಬಾದ್ ನ ಖ್ಯಾತ ಸಾಯಿಭಕ್ತರಾದ ಸಾಯಿನಾಮ ಶ್ರೀ.ಡಿ.ಶಂಕರಯ್ಯ ನವರ ಮಾರ್ಗದರ್ಶನದಲ್ಲಿ ಇದೇ ತಿಂಗಳ 26ನೇ ಏಪ್ರಿಲ್ 2012, ಗುರುವಾರ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಂಡಿದೆ. ಈ ಸ್ಥಳದಲ್ಲಿ ಪ್ರತಿನಿತ್ಯ ಸಾಮೂಹಿಕ ಪ್ರಾರ್ಥನೆ, ಆರತಿ, ಅನ್ನದಾನ, ಧುನಿಯ ಸ್ಥಾಪನೆ ಮತ್ತು ನಿಯಮಿತವಾಗಿ ಸ್ಥಳೀಯ ಗುಡ್ಡಗಾಡು ಪ್ರದೇಶದ ಬಡಜನರಿಗೆ ಉಚಿತ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಟ್ರಸ್ಟ್ ನ ಆಡಳಿತ ಮಂಡಳಿಯು ಹೊಂದಿರುತ್ತದೆ. ಈ ಟ್ರಸ್ಟ್ ನ್ನು 2009 ನೇ ಇಸವಿಯಲ್ಲಿ ನೋಂದಣಿ ಮಾಡಿಸಲಾಗಿದ್ದು ಈಗಾಗಲೇ ಈ ಟ್ರಸ್ಟ್ ನ ಮೂಲಕ ನಿಯಮಿತವಾಗಿ ಭಜನೆಯ ಕಾರ್ಯಕ್ರಮಗಳು, ಅನ್ನದಾನ, ಉಚಿತವಾಗಿ ವಸ್ತ್ರಗಳ ವಿತರಣೆ ಮತ್ತು ಸ್ಥಳೀಯ ಗುಡ್ಡಗಾಡು ಪ್ರದೇಶದ ಬಡಜನರಿಗೆ ಉಚಿತ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಈ ಭಾಗದ ವಿವಿಧ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಟ್ರಸ್ಟ್ ನ್ನು ಆದಾಯ ತೆರಿಗೆಯ ಸೆಕ್ಷನ್ 12AA ಮತ್ತು 80G  ನ ಅಡಿಯಲ್ಲಿ ನೋಂದಣಿ ಮಾಡಲಾಗಿರುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 

ಡಾ.ಕುಮುದ್ ಚಂದ್ರ ಬೆಹೆರಾ (ಪಿ.ಹೆಚ್.ಡಿ), 
ಶ್ರೀ ಶಿರಡಿ ಸಾಯಿನಾಥ  ಸೇವಾಶ್ರಮ (ನೋಂದಣಿ), 
ಬಡುವಾ, ಗೊಲಿಯಾ ಅಂಚೆ, 
ಬುಗುಡಾ ಮಾರ್ಗ, ಗಂಜಾಂ ಜಿಲ್ಲೆ, 
ಒರಿಸ್ಸಾ- 761 118, ಭಾರತ.  
ದೂರವಾಣಿ ಸಂಖ್ಯೆ: +91 94380 36171 

                                                  
ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, April 7, 2012

ಮುಂಬೈನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ.ಮೋಹಿತ್ ಷಾ ರವರು ಇದೇ ತಿಂಗಳ 7ನೇ ಏಪ್ರಿಲ್ 2012, ಶನಿವಾರದಂದು ತಮ್ಮ ಕುಟುಂಬ ಸಮೇತರಾಗಿ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀ.ಮೋಹಿತ್ ಷಾ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, April 1, 2012

ಶಿರಡಿ ಸಾಯಿಬಾಬಾ ಸಂಸ್ಥಾನ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಎರಡನೇ ದಿನದ ವರದಿ -1ನೇ ಏಪ್ರಿಲ್ 2012 , ಭಾನುವಾರ - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮುಕ್ತಾಯವಾದ ನಂತರ ಸಾಯಿಬಾಬಾರವರ ವಿಗ್ರಹ, ವೀಣೆ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಜಿಲ್ಲಾ ನ್ಯಾಯಾಧೀಶರು ಹಾಗೂ ತ್ರಿಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಜಯಂತ್ ಕುಲಕರ್ಣಿ,   ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಪುರೋಹಿತರುಗಳಾದ ಶ್ರೀ.ನಾರಾಯಣ್ ಭಿಷೆ ಹಾಗೂ ಶ್ರೀ.ವಿಲಾಸ್ ಜೋಷಿಯವರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ  ಜಿಲ್ಲಾ ನ್ಯಾಯಾಧೀಶರು ಹಾಗೂ ತ್ರಿಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಜಯಂತ್ ಕುಲಕರ್ಣಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಅನುರಾಧಾ ಕುಲಕರ್ಣಿಯವರು ಗೋಧಿಯ ಚೀಲದ ಪೂಜೆಯನ್ನು ನೆರವೇರಿಸಿದರು. 
 
 
ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ತ್ರಿಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಜಯಂತ್ ಕುಲಕರ್ಣಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಅನುರಾಧಾ ಕುಲಕರ್ಣಿಯವರು ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ, ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆ,  ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ್ ರಾವ್ ಮಾನೆಯವರುಗಳು ಕೂಡ ಉಪಸ್ಥಿತರಿದ್ದರು. 
 
 
 ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ  ಮಹಾರಾಷ್ಟ್ರ ಸರ್ಕಾರದ ಕೃಷಿ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೇ ಪಾಟೀಲ್ ಮತ್ತು ಶ್ರೀಮತಿ.ಶಾಲಿನಿ ತಾಯಿ ವಿಕ್ಹೇ ಪಾಟೀಲ್ ರವರು ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ನೆರವೇರಿಸಿದರು. 
 
 
 ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಶಿರಡಿಗೆ ಲಕ್ಷಾಂತರ ಸಾಯಿ ಭಕ್ತರು ಬಂದಿಳಿದು ಸಾಯಿ ದರ್ಶನಕ್ಕಾಗಿ ಜಮಾಯಿಸಿದ್ದರು. ಅದರ ಒಂದು ಪಕ್ಷಿ ನೋಟ ಈ ಕೆಳಗೆ ನೀಡಲಾಗಿದೆ. 
 
 

ಕನ್ನಡ ಅನುವಾದ: ಶ್ರೀಕಂಠ ಶರ್ಮ