Saturday, February 25, 2012

ಮಹಾರಾಷ್ಟ್ರ ಶಿಕ್ಷಣ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರ ಶಿಕ್ಷಣ ಸಚಿವರಾದ ಶ್ರೀ.ರಾಜೇಂದ್ರ ದರ್ದಾರವರು ಇದೇ ತಿಂಗಳ 25ನೇ ಫೆಬ್ರವರಿ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ್ ರಾವ್ ಮಾನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ನಗರಪಾಲಿಕೆಯ ಉಪಾಧ್ಯಕ್ಷರಾದ ಶ್ರೀ.ವಿಜಯ್ ಗೊಂದ್ಕರ್ ರವರು ಕೂಡ ಉಪಸ್ಥಿತರಿದ್ದರು. 


 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, February 24, 2012

4ನೇ  ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬೆಂಗಳೂರಿನ ಜಯನಗರದ ಓಂ ಶ್ರೀ ಸಾಯಿರಾಂ ದೇವಸ್ಥಾನ - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಜಯನಗರ 4ನೇ "ಟಿ" ಬ್ಲಾಕ್ ಬಡಾವಣೆಯಲ್ಲಿರುವ ಓಂ ಶ್ರೀ ಸಾಯಿರಾಂ ದೇವಸ್ಥಾನವು ತನ್ನ 4ನೇ  ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮುಂದಿನ ತಿಂಗಳ 9ನೇ ಮಾರ್ಚ್ 2012, ಶುಕ್ರವಾರ ಮತ್ತು 10ನೇ ಮಾರ್ಚ್ 2012, ಶನಿವಾರ ದಂದು ಆಚರಿಸಿಕೊಳ್ಳುತ್ತಿದೆ. 

ಸಮಾರಂಭದ ಅಂಗವಾಗಿ 9ನೇ ಮಾರ್ಚ್ 2012, ಶುಕ್ರವಾರ ದಂದು ರಾತ್ರಿ 7 ರಿಂದ 9 ರವರೆಗೆ ಮಹಾಸುದರ್ಶನ ಹೋಮವನ್ನು ಹಾಗೂ 10ನೇ ಮಾರ್ಚ್ 2012, ಶನಿವಾರ ದಂದು ಬೆಳಿಗ್ಗೆ 9:30 ರಿಂದ 12:30 ರವರೆಗೆ ಬ್ರಹ್ಮ ಕುಂಭಾಭಿಷೇಕ, ಕಲಶಾಭಿಷೇಕ, ಮಹಾಗಣಪತಿ ಹೋಮ, ನವಗ್ರಹ ಹೋಮ, ಗುರುಶಾಂತಿ ಹೋಮ, ರಾಮತಾರಕ ಹೋಮ, ಸುಬ್ರಮಣ್ಯ ಹೋಮ ಮತ್ತು ಪ್ರಾಕಾರೋತ್ಸವ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. 

ವಿವಿಧ ಕಾರ್ಯಕ್ರಮಗಳು ಹಾಗೂ ಸೇವಾ ವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರಿಕೆಯನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ. 



ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, February 23, 2012

ಸದ್ಭಾವನಾ ಪ್ರತಿಷ್ಠಾನ (ನೋಂದಣಿ), ಬೆಂಗಳೂರು ವತಿಯಿಂದ 15ನೇ  ವಾರ್ಷಿಕೋತ್ಸವದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ  

ಸದ್ಭಾವನಾ ಪ್ರತಿಷ್ಠಾನ (ನೋಂದಣಿ), ರಾಜಾಜಿನಗರ, ಬೆಂಗಳೂರು, ಇದೇ ತಿಂಗಳ 27ನೇ ಫೆಬ್ರವರಿ 2012, ಸೋಮವಾರ ದಂದು ಬೆಂಗಳೂರಿನ ಎ.ಡಿ.ಎ.ರಂಗಮಂದಿರದಲ್ಲಿ ತನ್ನ 15ನೇ  ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಈ ಸಂದರ್ಭದಲ್ಲಿ "ಧರೆಗಿಳಿದ ದಿವ್ಯಚೇತನಾ-ಶಿರಡಿ ಸಾಯಿಬಾಬಾ" ಎಂಬ ಕನ್ನಡ ನೃತ್ಯರೂಪಕವನ್ನು ಬೆಂಗಳೂರಿನ ಚಾಮರಾಜಪೇಟೆಯ ಪ್ರಸಿದ್ಧ ನಾಟ್ಯಾಂಜನ ತಂಡದವರು ಶ್ರೀಮತಿ.ಆಶಾ ನಂದಕಿಶೋರ್ ರವರ ನಿರ್ದೇಶನದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. 

ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಆಮಂತ್ರಣ ಪತ್ರಿಕೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ: 



ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಸದ್ಭಾವನಾ ಪ್ರತಿಷ್ಠಾನದ ಡಾ.ಕಿರಣ್ ಕುಮಾರ್ ಪ್ರಭೂಜಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ ಡಾ.ಕಿರಣ್ ಕುಮಾರ್ ಪ್ರಭೂಜಿಯವರನ್ನು ದೂರವಾಣಿ ಸಂಖ್ಯೆ: +91 97412 25966  ಯಲ್ಲಿ ಸಂಪರ್ಕಿಸಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, February 16, 2012

ಶ್ರೀ.ಕೆ.ಹೆಚ್.ಮುನಿಯಪ್ಪ ಮತ್ತು ಶ್ರೀ.ಹರ್ಷವರ್ಧನ ಪಾಟೀಲ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾದ ಶ್ರೀ.ಕೆ.ಹೆಚ್.ಮುನಿಯಪ್ಪ ಮತ್ತು ಮಹಾರಾಷ್ಟ್ರ ರಾಜ್ಯದ ಸಹಕಾರ ಹಾಗೂ ಸಂಸದೀಯ ವ್ಯವಹಾರ ಖಾತೆ ಸಚಿವರಾದ ಶ್ರೀ.ಹರ್ಷವರ್ಧನ ಪಾಟೀಲ್ ರವರುಗಳು ತಮ್ಮ ಕುಟುಂಬ ಸಮೇತರಾಗಿ ಇದೇ ತಿಂಗಳ 16ನೇ ಫೆಬ್ರವರಿ 2012,ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಟ್ರಸ್ಟಿ ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು.


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಹಾರಾಷ್ಟ್ರ ರಾಜ್ಯದ ಸಹಕಾರ ಹಾಗೂ ಸಂಸದೀಯ ವ್ಯವಹಾರ ಖಾತೆ ಸಚಿವರಾದ ಶ್ರೀ.ಹರ್ಷವರ್ಧನ ಪಾಟೀಲ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಪಾಂಡುರಂಗ ಅಭಂಗ್ ರವರು ಕೂಡ ಉಪಸ್ಥಿತರಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, February 13, 2012

ಉದಯೋನ್ಮುಖ ಭಾರತೀಯ ಕ್ರಿಕೆಟ್ ಆಟಗಾರ ಶ್ರೀ.ಅಜಿಂಕ್ಯಾ ರಹಾನೆ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಉದಯೋನ್ಮುಖ ಭಾರತೀಯ ಕ್ರಿಕೆಟ್ ಆಟಗಾರ ಶ್ರೀ.ಅಜಿಂಕ್ಯಾ ರಹಾನೆಯವರು ಇದೇ ತಿಂಗಳ 13ನೇ ಫೆಬ್ರವರಿ 2012, ಸೋಮವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 
 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, February 12, 2012

ಭಾರತ-ಚೈನಾ (1965) ಮತ್ತು ಭಾರತ-ಪಾಕಿಸ್ತಾನ (1971) ಯುದ್ಧದಲ್ಲಿ ಪಾಲ್ಗೊಂಡ ವೀರಯೋಧರ ಶಿರಡಿ ಭೇಟಿ - ಕೃಪೆ: ಸಾಯಿ ಅಮೃತಧಾರಾ.ಕಾಂ   

ಭಾರತ-ಚೈನಾ (1965) ಮತ್ತು ಭಾರತ-ಪಾಕಿಸ್ತಾನ (1971) ಯುದ್ಧದಲ್ಲಿ ಪಾಲ್ಗೊಂಡ ನಿವೃತ್ತ ಸೇನಾಧಿಕಾರಿಗಳು ಮತ್ತು ವೀರಯೋಧರುಗಳು ಇದೇ ತಿಂಗಳ 12ನೇ ಫೆಬ್ರವರಿ 2012, ಭಾನುವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, February 11, 2012

ಕನ್ನಡದ ಪ್ರಪ್ರಥಮ ಸಾಯಿ ಸಚ್ಚರಿತ್ರೆಯ 3ನೇ ಆವೃತ್ತಿಯ ಬಿಡುಗಡೆ  - ಕೃಪೆ: ಸಾಯಿಅಮೃತಧಾರಾ.ಕಾಂ 



ಕನ್ನಡದ ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ! ಮರಾಠಿ ಶ್ರೀ ಸಾಯಿ ಸಚ್ಚರಿತೆಯ ಪ್ರಪ್ರಥಮ ಕನ್ನಡ ಆನುವಾದವಾದ "ಶ್ರೀ ಸಾಯಿನಾಥ ಚರಿತಾಮೃತ" ದ  3ನೇ ಆವೃತ್ತಿಯ ಬಿಡುಗಡೆ ಸಮಾರಂಭ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆಯಿತು. 

ಈ ಉದ್ಗ್ರಂಥದ ಮೊದಲನೆಯ ಆವೃತ್ತಿಯನ್ನು 1966 ನೇ ಇಸವಿಯಲ್ಲಿ ಗ್ರಂಥದ ಅನುವಾದಕರಾದ ದಿವಂಗತ ಶ್ರೀ.ಶ್ರೀಪಾದರಾವ್  ಜಮಖಂಡಿಯವರು ಬಿಡುಗಡೆ ಮಾಡಿರುತ್ತಾರೆ.  

ಈ ಮಹಾನ್ ಗ್ರಂಥವು ಶಿರಡಿ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ "ಶ್ರೀ ಸಾಯಿ ಸಚ್ಚರಿತ್ರೆ" ಗಿಂತಲೂ ಎರಡು ವರ್ಷಗಳ ಮುಂಚೆಯೇ ಬಿಡುಗಡೆಯಾಗಿರುತ್ತದೆ ಎಂಬ ವಿಷಯ ಇಲ್ಲಿ ಉಲ್ಲೇಖಾರ್ಹ.

ಈ ಗ್ರಂಥವನ್ನು ಖರೀದಿಸಲು ಇಚ್ಚಿಸುವ ಸಾಯಿಭಕ್ತರು ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ: 

ಶ್ರೀ.ಸಾಯಿ ಸಾಹಿತ್ಯ ಸುಧಾ, 
ಪತ್ರಕರ್ತನಗರ, 
ಹುಬ್ಬಳ್ಳಿ - 580 032, 
ಕರ್ನಾಟಕ, ಭಾರತ, 
ದೂರವಾಣಿ ಸಂಖ್ಯೆಗಳು: 0836-2374072 / +91 81054 59504 / +91 81054 59508

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬಿಹಾರ ರಾಜ್ಯದ ಆಹಾರ ಸರಬರಾಜು ಹಾಗೂ ಗ್ರಾಹಕ ರಕ್ಷಣಾ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಬಿಹಾರ ರಾಜ್ಯದ ಆಹಾರ ಸರಬರಾಜು ಹಾಗೂ ಗ್ರಾಹಕ ರಕ್ಷಣಾ ಸಚಿವರಾದ ಶ್ರೀ.ಶ್ಯಾಮ್ ರಜಕ್ ರವರು ಇದೇ ತಿಂಗಳ  11ನೇ ಫೆಬ್ರವರಿ 2012,ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಡಾ.ಪ್ಯಾರೇಲಾಲ್ ತಿವಾರಿ ಯವರುಗಳೂ ಕೊಡ ಉಪಸ್ಥಿತರಿದ್ದರು. 



ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, February 8, 2012

ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದ  "ಶಿರಡಿ ಸಾಯಿಬಾಬಾ" ಪಾತ್ರಧಾರಿ ನಟ ಶ್ರೀ.ರಾಜೀಂದರ್ ಕೆ.ಶರ್ಮ - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ರಾಜೀಂದರ್ ಕೆ.ಶರ್ಮ ಪ್ರಸಿದ್ಧ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಾಗಿರುತ್ತಾರೆ. ಇವರು 8ನೇ ಫೆಬ್ರವರಿ 1965 ರಂದು ಜನಿಸಿರುತ್ತಾರೆ. ಇವರ ತಂದೆ ಶ್ರೀ.ಲಕ್ಷ್ಮಣ ಪಂಡಿತ್ ಶರ್ಮ. ಇವರು ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಕಾಂ ಪದವಿಯನ್ನು ಗಳಿಸಿರುತ್ತಾರೆ. ಶ್ರೀ.ಎಸ್.ಎಸ್.ಥಾಕೂರ್ ರವರ ಬಳಿ ನಟನೆಯ ತರಬೇತಿಯನ್ನು ಪಡೆದಿರುತ್ತಾರೆ. ಇವರು 2005  ನೇ ಇಸವಿಯಲ್ಲಿ ಶಿರಡಿ ಸಾಯಿಬಾಬಾರವರ ಪಥಕ್ಕೆ ಬಂದಿರುತ್ತಾರೆ. ಆ ದಿನದಿಂದ ಇಲ್ಲಿಯವರೆವಿಗೂ ಅನೇಕ ಸಾಯಿ ಸಂಧ್ಯಾ ಕಾರ್ಯಕ್ರಮಗಳಲ್ಲಿ ಹಾಗೂ ಪಲ್ಲಕ್ಕಿ ಉತ್ಸವಗಳಲ್ಲಿ "ಶಿರಡಿ ಸಾಯಿಬಾಬಾ" ರವರ ವೇಷದಲ್ಲಿ ನಟಿಸುತ್ತಾ ಬಂದಿದ್ದಾರೆ. 





ಇವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ: 

ರಂಗಭೂಮಿ / ನಾಟಕ :

1986 ನೇ ಇಸವಿಯಲ್ಲಿ ನಡೆದ ಹಿಂದಿ ನಾಟಕ "ನಯೇ ಕದಂ" ಮತ್ತು "ಪುಟ್ ಪತಿಯೇ" ನಲ್ಲಿ ಅಭಿನಯ.

1987 ನೇ ಇಸವಿಯಲ್ಲಿ ಸಿರಿಫೋರ್ಟ್ ನಡೆದ "ಅಪ್ಟ್ರಾನ್ ಅವಾರ್ಡ್ಸ್ ನೈಟ್" ನಲ್ಲಿ ಖ್ಯಾತ ನಿರ್ದೇಶಕ ಶ್ರೀ.ಪ್ರಕಾಶ್ ಝಾ ರವರ ಸಹಾಯಕರಾಗಿ ಕಾರ್ಯ ನಿರ್ವಹಣೆ.

1987 ನೇ ಇಸವಿಯಲ್ಲಿ ರಾಜಸ್ಥಾನದ ಜಯಪುರ್ ನಲ್ಲಿ ನಡೆದ ಅಭಿನೇಶ್ವರ್ ದಯಾಳ್ ಸಕ್ಸೇನಾ ನಿರ್ದೇಶನದ "ಧರ್ಮ ಯುದ್ದ್" ನಲ್ಲಿ ಅಭಿನಯ.

1989 ನೇ ಇಸವಿಯಲ್ಲಿ ಡಾ.ಅಂಕಾರ್ ಶೇಷ್ ರಚಿಸಿ ಶ್ರೀ.ಜೆ.ಪಿ.ಅಜೀಬ್ ನಿರ್ದೇಶನ ಮಾಡಿದ ಹಿಂದಿ ನಾಟಕ "ಬರಾ ಕಾ ಪಾನಿ" ಯಲ್ಲಿ ಅಭಿನಯ.

1990 ನೇ ಇಸವಿಯಲ್ಲಿ  ಶ್ರೀ.ಬಾಲರಾಜ್ ಸಹಾನಿ ರಚಿಸಿ ಶ್ರೀ.ಗುರುದೀಪ್ ಸೆಹರಾ ನಿರ್ದೇಶನ ಮಾಡಿದ ಹಿಂದಿ ನಾಟಕ  "ಕೀ ಏ ಸಚ್ ಹೇ ಬಾಪು" ನಲ್ಲಿ ಅಭಿನಯ

1991 ನೇ ಇಸವಿಯಲ್ಲಿ ಶ್ರೀ.ಅಜಯ್ ಶರ್ಮ ನಿರ್ದೇಶನ ಮಾಡಿದ ಹಿಂದಿ ನಾಟಕ  "ಮೌತ್ ಕೇ ಸಾಯೇ ಮೇ" ನಲ್ಲಿ ಅಭಿನಯ.

1993 ನೇ ಇಸವಿಯಲ್ಲಿ ಶ್ರೀ.ಅಜಯ್ ಪಾಂಡೆ ನಿರ್ದೇಶನ ಮಾಡಿದ ಹಿಂದಿ ನಾಟಕ "ಕಾಲಕೂಟ" ನಲ್ಲಿ ಅಭಿನಯ.

ನವೆಂಬರ್ 2002 ನೇ ಇಸವಿಯಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ನೇರ ನಾಟಕವಾದ "ಏಕ ಔರ್ ನಯೀ ಕಿರಣ್" ನುಕ್ಕಡ್ ಪ್ರದರ್ಶನದಲ್ಲಿ ಅಭಿನಯ.

ದೂರದರ್ಶನ / ಚಲನಚಿತ್ರ / ಅಲ್ಬಮ್ / ನೇರ ಪ್ರದರ್ಶನ ಗಳು: 

1989 ನೇ ಇಸವಿಯಲ್ಲಿ ಶ್ರೀ.ಕಾಕಾ ಶರ್ಮ ನಿರ್ದೇಶನ ಮಾಡಿದ ಹರ್ಯಾಣ ಚಲನಚಿತ್ರ "ಮೇರಾ ಪರಣ್ ಮೇರಾ ಧರಂ" ನಲ್ಲಿ ಅಭಿನಯ.

1990 ನೇ ಇಸವಿಯಲ್ಲಿ ಶ್ರೀ.ಚಮನ್ ಬಾಗ್ಗಾ ನಿರ್ದೇಶಿಸಿದ ಸೀಪೀಸಿ ವಾಹಿನಿಯಲ್ಲಿ ಪ್ರಸಾರವಾದ ಟೆಲಿ ಚಿತ್ರ "ಅಭಿ ನಹೀ" ಯಲ್ಲಿ ಅಭಿನಯ.

1990 ನೇ ಇಸವಿಯಲ್ಲಿ ಶ್ರೀ.ಲೇಕ್ ಟಂಡನ್ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ದೂಸ್ರಾ ಕೇವಲ್" ನಲ್ಲಿ ಅಭಿನಯ.

1995 ನೇ ಇಸವಿಯಲ್ಲಿ ಶ್ರೀ.ಅಶ್ರಾಫ್ ಸಿಯೋಲ್ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ತಪಸ್ಯಾ" ನಲ್ಲಿ ಅಭಿನಯ.

1998 - 99 ನೇ ಇಸವಿಯಲ್ಲಿ ಶ್ರೀ.ಸುಹೇಬ್ ಇಲಿಯಾಸಿ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ಇಂಡಿಯಾಸ್ ಮೋಸ್ಟ್ ವಾಂಟೆಡ್" ನಲ್ಲಿ ಅಭಿನಯ.

2000 ನೇ ಇಸವಿಯಲ್ಲಿ ಶ್ರೀ.ಸುಹೇಬ್ ಇಲಿಯಾಸಿ ನಿರ್ದೇಶಿಸಿದ ಹಿಂದಿ ಟಿವಿ ಧಾರಾವಾಹಿ "ಏಕ್ ನಜರ್ ಕೀ ತಮನ್ನಾ" ನಲ್ಲಿ ಅಭಿನಯ.

2000 - 2001 ನೇ ಇಸವಿಯಲ್ಲಿ ಶ್ರೀ.ರಾಜೇಶ್ ತಲಂಗ್, ಶ್ರೀ.ರಿಜ್ಜು ಬಜಾಜ್ ಹಾಗೂ ಶ್ರೀ.ಮುಕೇಶ್ ಗೌತಮ್ ನಿರ್ದೇಶನ ಮಾಡಿದ ಹಿಂದಿ ಟಿವಿ ಧಾರಾವಾಹಿ "ಇಂಡಿಯಾಸ್ ಮೋಸ್ಟ್ ವಾಂಟೆಡ್" ನಲ್ಲಿ ಅಭಿನಯ.

2002 ನೇ ಇಸವಿಯಲ್ಲಿ ಶ್ರೀ.ಅರುಣ್ ಗುಪ್ತಾ ನಿರ್ದೇಶನ ಮಾಡಿದ ಹಿಂದಿ ಟಿವಿ ಧಾರಾವಾಹಿ "ತೀನ್ ಅಂಗುಟಾ ಚಾಪ್" ನಲ್ಲಿ ಅಭಿನಯ.

2000 ನೇ ಇಸವಿಯಲ್ಲಿ ದೂರದರ್ಶನದಲ್ಲಿ ಕುಮಾರಿ.ಪ್ರಿಯಾ ಗ್ರಾಹಕರ ವೇದಿಕೆಯ ಬಗ್ಗೆ ನಿರ್ದೇಶನ ಮಾಡಿದ ಜಾಹೀರಾತಿನಲ್ಲಿ ಅಭಿನಯ.

ಜನವರಿ 2003 ರಲ್ಲಿ ಶ್ರೀ.ವಿವೇಕ್ ವರ್ಮಾ ನಿರ್ದೇಶನ ಮಾಡಿದ ಪಂಜಾಬಿ ಟಿವಿ ಧಾರಾವಾಹಿ "ಚನಾನ್ ವಾಲ್" ನಲ್ಲಿ ಅಭಿನಯ.

ಫೆಬ್ರವರಿ 2003 ರಲ್ಲಿ ಶ್ರೀ.ಅಶೋಕ್ ಕುಮಾರ್ ನಿರ್ದೇಶನ ಮಾಡಿದ ಪಂಜಾಬಿ ಟಿವಿ ಧಾರಾವಾಹಿ "ಜಿಡಾನ್" ನಲ್ಲಿ ಅಭಿನಯ.

ಮಾರ್ಚ್ 2003 ರಲ್ಲಿ ಶ್ರೀ.ಪ್ರಬಾಲ್ ಮಹತೋ ನಿರ್ದೇಶನ ಮಾಡಿದ ಪಂಜಾಬಿ ಟಿವಿ ಧಾರಾವಾಹಿ "ಎಗಾಂ" ನಲ್ಲಿ ಅಭಿನಯ.

ಆಗಸ್ಟ್ 2003 ರಲ್ಲಿ ಶ್ರೀ.ಭೂಪೇಂದರ್ ಸಿಂಗ್ ನಿರ್ದೇಶನ ಮಾಡಿದ ಟಿವಿ  ಧಾರಾವಾಹಿ "ಪ್ರೇರಣಾ" ದಲ್ಲಿ ಅಭಿನಯ.

ಡಿಸೆಂಬರ್ 2003 ರಲ್ಲಿ ಶ್ರೀ.ಪ್ರಬಾಲ್ ಮಹತೋ ನಿರ್ದೇಶನ ಮಾಡಿದ ಟಿವಿ ಧಾರಾವಾಹಿ "ತೋಡಿ ಸೀ ಜಮೀನ್" ನಲ್ಲಿ ಅಭಿನಯ.

ಜನವರಿ 2004 ರಲ್ಲಿ ಸ್ಟಾರ್ ನ್ಯೂಸ್ ಗಾಗಿ ಬ್ಯಾಗ್ ಫಿಲಂಸ್ ನಿರ್ಮಿಸಿದ "ರೆಡ್ ಅಲರ್ಟ್" ನಲ್ಲಿ ಅಭಿನಯ.

ಜನವರಿ 2004 ರಲ್ಲಿ ಶ್ರೀ.ಅಭೀನ್ ಕೌಲ್ ನಿರ್ದೇಶಿಸಿದ ಪಂಜಾಬಿ ಟಿವಿ ಧಾರಾವಾಹಿ "ನಯಾ ಸವೇರಾ" ನಲ್ಲಿ ಅಭಿನಯ.

2004 ನೇ ಇಸವಿಯಲ್ಲಿ ಶ್ರೀ.ಸಂಜಯ್ ಗೆಹಲೋಟ್ ದೂರದರ್ಶನ ಮೆಟ್ರೋ ಗಾಗಿ ನಿರ್ದೇಶಿಸಿದ ವ್ಯಕ್ತಿತ್ವ ಪರಿಚಯ ಕಾರ್ಯಕ್ರಮ "ತೇರಾ ಕ್ಯಾ ಕೆಹನಾ" ದಲ್ಲಿ ಭಾಗವಹಿಸಿದ್ದಾರೆ.

ಆಗಸ್ಟ್ 2003 ರಲ್ಲಿ ಶಿಮ್ಲಾ ದೂರದರ್ಶನ ಕೇಂದ್ರ ನಿರ್ಮಿಸಿದ ಸಾಕ್ಷ್ಯಚಿತ್ರ "ಹಿಮಾಚಲ್ ಏಕ್ ಖೋಜ್" ನಲ್ಲಿ ಅಭಿನಯ.

ಜೂನ್ 2003 ರಲ್ಲಿ ಶ್ರೀ.ಪದಂ ಗುರಾಂಗ್ ಕಿಂಗ್ ಆಡಿಯೋಗಾಗಿ ನಿರ್ಮಿಸಿದ ಅಲ್ಬಮ್ "ತುಮ್ ತೋ ಚಲೇ ಪರ್ ದೇಶ್" ನಲ್ಲಿ ಅಭಿನಯ.

2003 ರಲ್ಲಿ ಶ್ರೀಮತಿ.ವಾಣಿಯವರು ಲಕ್ನೌ ದೂರದರ್ಶನ ಕೇಂದ್ರಕ್ಕಾಗಿ ನಿರ್ಮಿಸಿದ ಟಿವಿ ಧಾರಾವಾಹಿ "ಲೋಗ್ ಏ ಭೀ ಹೈ ವೋ ಭೀ" ನಲ್ಲಿ ಅಭಿನಯ.

ಜನವರಿ 2004 ರಲ್ಲಿ ಬಿ.ಎಫ್.ಎಸ್. ಕಂಪನಿ ನಿರ್ಮಿಸಿದ ಭೋಜಪುರಿ ಅಲ್ಬಮ್ "ಬುಡ್ವಾ ಮೇ ದಂ ಬಾ" ನಲ್ಲಿ ಅಭಿನಯ.

ಫೆಬ್ರವರಿ 2004 ರಲ್ಲಿ ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಕೋಯೀ ಜಾ ಕೇ ಭೋಲೆ ಕೋ ಬತಾಯೇ" ನಲ್ಲಿ ಅಭಿನಯ.

ಏಪ್ರಿಲ್ 2004 ರಲ್ಲಿ ಡಿಡಿ ನ್ಯೂಸ್ ಗಾಗಿ ವೈಡ್ ಆಂಗಲ್ ಫಿಲಂಸ್ ನಿರ್ಮಿಸಿ ಶ್ರೀಮತಿ.ಸುಜಾತಾ ಕುಲಶ್ರೇಷ್ಟ ನಿರ್ದೇಶನ ಮಾಡಿದ ಜಾಹೀರಾತಿನಲ್ಲಿ ಅಭಿನಯ.

ಜೂನ್ 2004 ರಲ್ಲಿ  ಶ್ರೀ.ಸುಹೇಬ್ ಇಲಿಯಾಸಿ ಇಂಡಿಯಾ ಟಿವಿ ಗಾಗಿ ನಿರ್ದೇಶನ ಮಾಡಿದ ಧಾರಾವಾಹಿ "ಇಂಡಿಯಾ ಮೋಸ್ಟ್ ವಾಂಟೆಡ್" ನಲ್ಲಿ ಅಭಿನಯ.

2004 ರಲ್ಲಿ  ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ದುನಿಯಾ ಮೇ ಪೆಹಲಿ ಕವರ್" ನಲ್ಲಿ ಅಭಿನಯ.

2004 ರಲ್ಲಿ  ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ತೂ ಮೇರಾ ಥಾಕೂರ್ ದ್ವಾರಕಾನಾಥ್" ನಲ್ಲಿ ಅಭಿನಯ.

2004 ರಲ್ಲಿ  ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಕಹೋ ಮಾ ಕಹೋ" ನಲ್ಲಿ ಅಭಿನಯ.

2005 ರಲ್ಲಿ  ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಚಾಹೂ ಶರಣ್ ತುಮ್ಹಾರಿ" ನಲ್ಲಿ ಅಭಿನಯ.

2008 ರಲ್ಲಿ  ಎ ಆರ್ ಜಿ ಫಿಲಂಸ್ ನಿರ್ಮಿಸಿದ ಭಕ್ತಿ ಪ್ರಧಾನ ಅಲ್ಬಮ್ "ಚಲೋ ಶಿವ್ ಕೋ ಮನಾಯೇ" ನಲ್ಲಿ ಅಭಿನಯ.

2009 ರಲ್ಲಿ  ಮಹೂವಾ ನ್ಯೂಸ್ ಗಾಗಿ ನಿರ್ಮಿಸಿದ "ತಕೀಕತ್" ನಲ್ಲಿ ಅಭಿನಯ.

2005 ನೇ ಇಸವಿಯಿಂದ ಇಲ್ಲಿಯವರೆವಿಗೂ ಅನೇಕ ಸಾಯಿ ಸಂಧ್ಯಾ ಕಾರ್ಯಕ್ರಮಗಳಲ್ಲಿ ಹಾಗೂ ಪಲ್ಲಕ್ಕಿ ಉತ್ಸವಗಳಲ್ಲಿ "ಶಿರಡಿ ಸಾಯಿಬಾಬಾ" ರವರ ವೇಷದಲ್ಲಿ ನಟಿಸುತ್ತಾ ಬಂದಿದ್ದಾರೆ.

ಪ್ರಸ್ತುತ ಇವರು ತುಂಬು ಸಂಸಾರದೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ಸಂತೃಪ್ತಿಯ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ರಾಜೀಂದರ್ ಕೆ.ಶರ್ಮ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ: 

X/1920,ರಾಜಘರ್ ಎಕ್ಸ್ಟೆನ್ಶನ್, ಗಲ್ಲಿ ನಂ.9, ಗಾಂಧಿನಗರ್, ದೆಹಲಿ-110 031,ಭಾರತ. 


ದೂರವಾಣಿ ಸಂಖ್ಯೆಗಳು: 

+91 97111 49377 / +91 98682 01621 


ಇಮೇಲ್ ವಿಳಾಸ: 



ಫೇಸ್ ಬುಕ್ ಜೋಡಣೆ: 

http://www.facebook.com/rajindersharma1920 


ಶಿರಡಿ ಸಾಯಿ ಪಾತ್ರದ ಅಭಿನಯದ ವೀಡಿಯೋ:










ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, February 5, 2012

ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿಗಳಾದ ಶ್ರೀ.ಗೊಟಬಯ್ಯಾ ರಾಜಪಕ್ಷ ರವರು ಇದೇ ತಿಂಗಳ 5ನೇ ಫೆಬ್ರವರಿ 2012, ಭಾನುವಾರ ದಂದು ತಮ್ಮ ಕುಟುಂಬವರ್ಗದವರೊಡನೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು. 


ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀ.ಗೊಟಬಯ್ಯಾ ರಾಜಪಕ್ಷ ಮತ್ತು ಅವರ ಕುಟುಂಬದವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, February 4, 2012

ಗೋವಾ ರಾಜ್ಯದ ಮುಖ್ಯಮಂತ್ರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ದಿಗಂಬರ ಕಾಮತ್ ರವರು ಇದೇ ತಿಂಗಳ 4ನೇ ಫೆಬ್ರವರಿ 2012, ಶನಿವಾರ ದಂದು  ತಮ್ಮ ಕುಟುಂಬ ಸದಸ್ಯರೊಡನೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು. 



ಸಮಾಧಿಯ ದರ್ಶನದ ನಂತರ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ವರ್ಗದವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, February 2, 2012

ಸಾಯಿ ಭಜನ ಗಾಯಕ, ಗೀತ ರಚನಕಾರ ಹಾಗೂ ಸಂಗೀತ ನಿರ್ದೇಶಕ - ಶ್ರೀ.ಸಾಯಿ ವಿಶಾಲ್ ದಾಸ್   - ಕೃಪೆ: ಸಾಯಿ ಅಮೃತಧಾರಾ.ಕಾಂ  


ಅನನ್ಯ ಸಾಯಿ ಭಕ್ತರಾದ ಶ್ರೀ.ಸಾಯಿ ವಿಶಾಲ್ ದಾಸ್ ರವರು ಪ್ರಖ್ಯಾತ ಸಾಯಿ ಭಜನ ಗಾಯಕರು, ಗೀತ ರಚನಕಾರರು ಮತ್ತು ಸಂಗೀತ ನಿರ್ದೇಶಕರೂ ಆಗಿದ್ದು ಅನೇಕ ಮನಮುಟ್ಟುವ ಸಾಯಿ ಭಜನೆಗಳನ್ನು ಹಾಡಿ ಸಾಯಿ ಭಕ್ತರನ್ನು ರಂಜಿಸಿದ್ದಾರೆ. ಇವರು ಇಲ್ಲಿಯವರೆವಿಗೂ ಸರಿ ಸುಮಾರು 1000 ಕ್ಕೂ ಹೆಚ್ಚು  ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಭಾರತ ದೇಶದ ಉದ್ದಗಲಕ್ಕೂ ನೀಡಿರುತ್ತಾರೆ. 

ಇವರು ಶಿರಡಿ ಸಾಯಿಬಾಬಾರವರ ಮೇಲೆ ಅನೇಕ ಕವನಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ "ತೇರಿ ಶಿರಡಿ ಕಾ ನಜಾರಾ", "ಮೇರೆ  ಸಾಯಿ ಕಿ ಸೌಗಾತ್", "ಸಾಯಿ ಕೆ ದೇನ್", "ಯೇ ಬಾಬಾ ನಯೇ ಜಮಾನೇ ಕೆ", "ಸಾಯಿ ಕೆ ಪ್ರೇರಣಾ", "ಸಾಯಿ ಕಾ ಇಂತಜಾರ್" ಮತ್ತು "ತಮನ್ನಾ ಹೈ ದಿಖೆ ಸಾಯಿ" ಕವನಗಳು ಅತ್ಯಂತ ಜನಪ್ರಿಯವಾಗಿರುತ್ತವೆ. 

ಇವರು ಶಿರಡಿ ಸಾಯಿಬಾಬಾರವರ ಮೇಲೆ ಎರಡು ಅಲ್ಬಮ್ ಗಳನ್ನು ಹೊರತಂದಿದ್ದಾರೆ. ಅವುಗಳೆಂದರೆ "ಮೇರಿ ಸಮಾಧಿ ಬೋಲೇಗಿ" ಮತ್ತು "ಸಾಯಿ ಆಸರಾ". 

ಶ್ರೀ.ಸಾಯಿ ವಿಶಾಲ್ ದಾಸ್ ರವರು ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿರುತ್ತಾರೆ. ಇವರನ್ನು ಸಂಪರ್ಕಿಸಲು ಇಚ್ಚಿಸುವ ಸಾಯಿ ಭಕ್ತರು ಮೊಬೈಲ್ ಸಂಖ್ಯೆ: +91 98915 11236/+91 92123 22060 ಅಥವಾ ಇಮೇಲ್ ವಿಳಾಸ contact@saivishaldas.org  ವನ್ನು ಸಂಪರ್ಕಿಸಬಹುದಾಗಿದೆ. 

ಶ್ರೀ ಸಾಯಿ ವಿಶಾಲ್ ದಾಸ್ ರವರ ಬಗ್ಗೆ ಮತ್ತು ಅವರ ಕವನಗಳು ಹಾಗೂ ಸಾಯಿ ಭಜನೆಯ ಆಲ್ಬಮ್ ಗಳಿಗಾಗಿ http://www.saivishaldas.org  ನ್ನು ಸಾಯಿ ಭಕ್ತರು ನೋಡಬಹುದಾಗಿದೆ. 

ಶ್ರೀ ಸಾಯಿ ವಿಶಾಲ್ ದಾಸ್ ರವರ ಸಾಯಿ ಭಜನೆಯ ವಿಡಿಯೋಗಳು: 





ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಕೇಂದ್ರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಕೇಂದ್ರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ.ವೀರಭದ್ರ ಸಿಂಗ್ ರವರು ಇದೇ ತಿಂಗಳ 2ನೇ ಫೆಬ್ರವರಿ 2012, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು.  



ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ  

Wednesday, February 1, 2012

ಖ್ಯಾತ ಹಿಂದಿ ಚಲನಚಿತ್ರ ನಟ ಹಾಗೂ ಸಂಸತ್ ಸದಸ್ಯ ಶತ್ರುಘ್ನ ಸಿನ್ಹಾ  ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಖ್ಯಾತ ಹಿಂದಿ ಚಲನಚಿತ್ರ ನಟ ಹಾಗೂ ಸಂಸತ್ ಸದಸ್ಯರಾದ ಶ್ರೀ.ಶತ್ರುಘ್ನ ಸಿನ್ಹಾ ರವರು ಇದೇ ತಿಂಗಳ 1ನೇ ಫೆಬ್ರವರಿ 2012, ಬುಧವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಕೂಡ ಉಪಸ್ಥಿತರಿದ್ದರು. 



ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀ.ಶತ್ರುಘ್ನ ಸಿನ್ಹಾರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ