ಸಾಯಿಅಮೃತಧಾರಾ ಅಂತರ್ಜಾಲ ತಾಣದಿಂದ ಸಾಯಿಭಕ್ತರಿಗೊಸ್ಕರ ಆಂಗ್ಲ ಭಾಷೆಯಲ್ಲಿ " ಶಿರಡಿ ಗೈಡ್" ಕಿರುಹೊತ್ತಿಗೆಯ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ
ಸಾಯಿಅಮೃತವಾಣಿ ಬ್ಲಾಗ್ ನ ಮಾತೃ ಅಂತರ್ಜಾಲ ತಾಣವಾದ ಸಾಯಿಅಮೃತಧಾರಾ.ಕಾಂ ಕಳೆದ ತಿಂಗಳ 6ನೇ ಅಕ್ಟೋಬರ್ 2011 ರ ಪವಿತ್ರ ವಿಜಯದಶಮಿಯಂದು ತನ್ನ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಶಿರಡಿಗೆ ಪ್ರವಾಸ ಕೈಗೊಳ್ಳುವ ಸಾಯಿಭಕ್ತರಿಗೆ ಅನುಕೂಲವಾಗಲೆಂದು ಆಂಗ್ಲ ಭಾಷೆಯಲ್ಲಿ " ಶಿರಡಿ ಗೈಡ್" ಎಂಬ ಕಿರುಹೊತ್ತಿಗೆಯನ್ನು ಲೋಕಾರ್ಪಣೆ ಮಾಡಿರುತ್ತದೆ .
ಈ ಪಾಕೆಟ್ "ಶಿರಡಿ ಗೈಡ್" ಕೆಳಕಂಡ ವಿಷಯಗಳನ್ನು ಹೊಂದಿರುತ್ತದೆ:
- ಶ್ರೀ.ಮೋಹಿನಿ ರಾಜ್ ಪಂಡಿತ್ ರವರು ರಚಿಸಿರುವ ಸಾಯಿಬಾಬಾರವರ ಹನ್ನೊಂದು ಅಭಿವಚನಗಳು.
- ಶಿರಡಿ ಸಾಯಿಬಾಬಾ ದೇವಾಲಯದ ಆವರಣದಲ್ಲಿ ನೋಡಬೇಕಾದ ಸ್ಥಳಗಳು.
- ಶಿರಡಿಯ ಸುತ್ತಮುತ್ತಲೂ ನೋಡಬೇಕಾದ ಸ್ಥಳಗಳು.
- ಸಾಯಿ ಮಹಾಭಕ್ತರ ಮನೆಗಳು.
- ಸಾಯಿಬಾಬಾರವರು ಪ್ರತಿನಿತ್ಯ ಭಿಕ್ಷೆಯನ್ನು ಸ್ವೀಕರಿಸುತ್ತಿದ್ದ ಐದು ಪೂಜ್ಯ ಮನೆಗಳು.
- ಶಿರಡಿಯಲ್ಲಿನ ವಸತಿ ಸ್ಥಳಗಳ ಬಗ್ಗೆ ಮಾಹಿತಿ.
- ಸಾಯಿ ಭಕ್ತರಿಗೆ ಉಪಯೋಗವಾಗುವ ಕೆಲವು ಮಾಹಿತಿಗಳು.
- ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳ ವಿವರ.
- ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ನಡೆಯುವ ಪೂಜೆಯ ವಿವರಗಳು.
- ಹಣ ನೀಡಿ ದರ್ಶನ ಪಡೆಯುವ ಸೌಲಭ್ಯ ಮತ್ತು ವಿ.ಐ.ಪಿ.ಪಾಸ್ ಸೌಲಭ್ಯದ ವಿವರಗಳು.
- ಶಿರಡಿಯ ಪ್ರಮುಖ ಸಂಪರ್ಕದ ವಿವರಗಳು.
- ಪರಮ ಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು ರಚಿಸಿರುವ ಶ್ರೀ.ಸಾಯಿಬಾಬಾ ಅಷ್ಟೋತ್ತರಶತನಾಮಾವಳಿ.
- ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಕಟ ಮಾಡುವ ದ್ವೈಮಾಸಿಕ ಶ್ರೀ ಸಾಯಿಲೀಲಾ ಪತ್ರಿಕೆಯ ಚಂದಾವಿವರಗಳು.
ಈ ಬಹುಪಯೋಗಿ ಶಿರಡಿ ಗೈಡ್ ನ್ನು ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment