ಮಧ್ಯಪ್ರದೇಶದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿಧಾಮ್, ಬಸ್ ನಿಲ್ದಾಣದ ಹತ್ತಿರ, ಸಿರಾಲಿ ತಹಸಿಲ್-461 331, ಹರ್ದಾ ಜಿಲ್ಲೆ, ಮಧ್ಯಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಸಿರಾಲಿ ಬಸ್ ನಿಲ್ದಾಣದ ಬಳಿ ಇರುತ್ತದೆ.
ಈ ದೇವಾಲಯದ ಭೂಮಿಪೂಜೆಯನ್ನು 15ನೇ ಮಾರ್ಚ್ 2007 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಅರ್ಚಕರಾದ ಶ್ರೀ.ಬಾಳಾ ಸಾಹೇಬ್ ಜೋಷಿಯವರು ನೆರವೇರಿಸಿದರು ಮತ್ತು ಆ ಸ್ಥಳದಲ್ಲಿ 1.25 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಿದರು. ಈ ಸ್ಥಳವನ್ನು ಕಾಲಾನಂತರದಲ್ಲಿ "ದ್ವಾರಕಾಮಾಯಿ" ಯಾಗಿ ಪರಿವರ್ತಿಸಲಾಯಿತು.
ಪ್ರಮುಖ ಶ್ರೀ ಸಾಯಿಧಾಮ್ ದೇವಾಲಯದ ಉದ್ಘಾಟನೆಯನ್ನು 27ನೇ ನವೆಂಬರ್ 2009 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಅರ್ಚಕರಾದ ಶ್ರೀ.ಬಾಳಾ ಸಾಹೇಬ್ ಜೋಷಿಯವರು ನೆರವೇರಿಸಿದರು. ಆ ಸಂದರ್ಭದಲ್ಲಿ ಶ್ರೀ.ಕೇಶವ ಬಿನವಾನಿ, ಶ್ರೀ.ವಿಜಯ್ ಬಿನವಾನಿ, ಶ್ರೀ.ಸಂಜಯ್ ಪತ್ನಿ ಮತ್ತು ಸಾವಿರಾರು ಸ್ಥಳೀಯ ಸಾಯಿಭಕ್ತರು ಉಪಸ್ಥಿತರಿದ್ದರು.
ಶ್ರೀ.ಮುಕೇಶ್ ತಾಲೆ ಮತ್ತು ಶ್ರೀ.ದಯಾಶಂಕರ್ ಕರೋಡೆಯವರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ದೇವಾಲಯದ ಮೇಲ್ವಿಚಾರಣೆಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯವು ಪ್ರತಿದಿನ ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 10 ಘಂಟೆಯ ಶೇಜಾರತಿಯ ನಂತರ ಮುಚ್ಚುತ್ತದೆ.
ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ರಾರಾಜಿಸುತ್ತಿದೆ. ಅಲ್ಲದೆ, ಸಾಯಿಬಾಬಾರವರ ವಿಗ್ರಹದ ಕೆಳಗಡೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.
ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ದ್ವಾರಕಾಮಾಯಿಯನ್ನು ಸ್ಥಾಪಿಸಲಾಗಿದೆ.
ದೇವಾಲಯದ ಆವರಣದಲ್ಲಿ ಸುಂದರವಾದ ಹೂತೋಟವನ್ನು ದೇವಾಲಯದ ಆಡಳಿತ ಮಂಡಳಿ ನಿರ್ಮಿಸಿರುತ್ತದೆ ಮತ್ತು ಅದನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳಲಾಗುತ್ತಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 5:15 ಕ್ಕೆ.
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ.
ಧೂಪಾರತಿ : ಸಾಯಂಕಾಲ 5:30 ಕ್ಕೆ.
ಶೇಜಾರತಿ: ರಾತ್ರಿ 10 ಘಂಟೆಗೆ.
ದೇವಾಲಯದಲ್ಲಿ ಪ್ರತಿನಿತ್ಯ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 1001/- ರುಪಾಯಿಗಳು.
ದೇವಾಲಯದಲ್ಲಿ ಸಾಯಿಬಾಬಾರವರಿಗೆ ವಸ್ತ್ರ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 1001/- ರುಪಾಯಿಗಳು.
ದೇವಾಲಯದಲ್ಲಿ ಮಹಾಪ್ರಸಾದ ಸೇವೆಯನ್ನು ಮಾಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ ಪ್ರತಿದಿನ 2001/- ರುಪಾಯಿಗಳು ಮತ್ತು ಗುರುವಾರದಂದು 9001/- ರುಪಾಯಿಗಳು.
ದೇವಾಲಯದಲ್ಲಿ ಶಾಶ್ವತ ಸದಸ್ಯತ್ವಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ 1100/- ರುಪಾಯಿಗಳು. ಶಾಶ್ವತ ಸೇವೆಯನ್ನು ಮಾಡಿಸುವ ಎಲ್ಲಾ ಸಾಯಿಭಕ್ತರಿಗೆ ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಕಾಲಕಾಲಕ್ಕೆ ತಿಳಿಸಲಾಗುತ್ತದೆ ಮತ್ತು ಭಕ್ತರ ಮನೆಗಳಿಗೆ ಉಧಿ ಪ್ರಸಾದವನ್ನು ಅಂಚೆಯ ಮುಖಾಂತರ ಕಳುಹಿಸಲಾಗುತ್ತದೆ.
ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 27ನೇ ನವೆಂಬರ್.
ಗುರುಪೂರ್ಣಿಮೆ.
ಶ್ರೀಕೃಷ್ಣ ಜನ್ಮಾಷ್ಟಮಿ.
ವಿಜಯದಶಮಿ.
ದೀಪಾವಳಿ.
ಮಹಾಶಿವರಾತ್ರಿ.
ಶ್ರೀರಾಮನವಮಿ.
ಹನುಮಾನ್ ಜಯಂತಿ.
ಹೋಳಿ ಹಬ್ಬ.
ಹೊಸ ವರ್ಷದ ಆಚರಣೆ.
ಸ್ವಾತಂತ್ರ್ಯ ದಿನಾಚರಣೆ.
ಗಣರಾಜ್ಯ ದಿನಾಚರಣೆ.
ದೇಣಿಗೆ ನೀಡಲು ಮನವಿ:
ಶ್ರೀ ಸಾಯಿಧಾಮ್, ಸಿರಾಲಿ ಮಂದಿರದ ಮುಂದಿನ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು "ಶ್ರೀ ಸಾಯಿಧಾಮ್, ಸಿರಾಲಿ" ಭಾರತೀಯ ಸ್ಟೇಟ್ ಬ್ಯಾಂಕ್, ಸಿರಾಲಿ ಶಾಖೆ, ಖಾತೆ ಸಂಖ್ಯೆ: 11705780181 ಮತ್ತು 954220110000001 ಈ ಖಾತೆಗಳಿಗೆ ಹಣ/ಚೆಕ್/ಡಿಡಿ ರೂಪದಲ್ಲಿ ಹಣವನ್ನು ಕಳುಹಿಸಬಹುದಾಗಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಸಿರಾಲಿ ಬಸ್ ನಿಲ್ದಾಣದ ಹತ್ತಿರ, ಸಿರಾಲಿ, ಹರ್ದಾ ಜಿಲ್ಲೆ, ಮಧ್ಯಪ್ರದೇಶ.
ವಿಳಾಸ:
ಶ್ರೀ ಸಾಯಿಧಾಮ್
ಬಸ್ ನಿಲ್ದಾಣದ ಹತ್ತಿರ,
ಸಿರಾಲಿ ತಹಸಿಲ್-461 331,
ಹರ್ದಾ ಜಿಲ್ಲೆ, ಮಧ್ಯಪ್ರದೇಶ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಮುಕೇಶ್ ತಾಲೆ ಮತ್ತು ಶ್ರೀ.ದಯಾಶಂಕರ್ ಕರೋಡೆ
ದೂರವಾಣಿ ಸಂಖ್ಯೆಗಳು:
+ 91 96698 02150 / +91 81206 16301
ಈ ಮೇಲ್ ವಿಳಾಸ:
shrisaidhamsirali
@gmail
.com
ಅಂತರ್ಜಾಲ ತಾಣ:
http://www.shrisaidhamsirali.com
ಮಾರ್ಗಸೂಚಿ:
ಹರ್ದಾ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಹೇರಳವಾಗಿ ಬಸ್ ಮತ್ತು ಆಟೋಗಳು ಸಿಗುತ್ತವೆ. ದೇವಾಲಯವು ಸಿರಾಲಿ ಬಸ್ ನಿಲ್ದಾಣದ ಬಳಿ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ