ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಇದೇ ತಿಂಗಳ 12ನೇ ಸೆಪ್ಟೆಂಬರ್ 2015, ಶನಿವಾರ ದಂದು ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಸಾಯಿ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಆ ಭಕ್ತ ಸಾಗರದ ಕೆಲವು ದೃಶ್ಯಗಳನ್ನು ಈ ಕೆಳಗೆ ನೋಡಬಹುದು.
ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಇದೇ ತಿಂಗಳ 13ನೇ ಸೆಪ್ಟೆಂಬರ್ 2015, ಭಾನುವಾರ ದಂದು ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಹರಿದು ಬಂದ ಭಕ್ತ ಸಾಗರ ತಮ್ಮ ವಾಹನಗಳನ್ನು ವಾಹನ ನಿಲುಗಡೆ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಅದರ ಒಂದು ಪಕ್ಷಿನೋಟವನ್ನು ಈ ಕೆಳಗೆ ನೋಡಬಹುದು.
ನಾಸಿಕ್ ನಲ್ಲಿ ಸಿಂಹಸ್ಥ ಕುಂಭಮೇಳ ನಡೆಯುತ್ತಿರುವ ಅಂಗವಾಗಿ ಶಿರಡಿಯಲ್ಲಿ ಸಾಯಿಬಾಬಾರವರ ದರ್ಶನಕ್ಕಾಗಿ ಹರಿದು ಬಂದ ಭಕ್ತರನ್ನು ವಾಹನ ನಿಲುಗಡೆ ತಾಣದಿಂದ ದರ್ಶನದ ಸಾಲಿನ ಬಳಿಗೆ ಕರೆದುಕೊಂಡು ಹೋಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 68 ಬಸ್ ಗಳನ್ನು ವ್ಯವಸ್ಥೆ ಮಾಡಿತ್ತು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
