Saturday, February 28, 2015

ಮಹಾರಾಷ್ಟ್ರದ ರಾಜ್ಯಪಾಲ ಶ್ರೀ.ಸಿ.ವಿದ್ಯಾಸಾಗರ ರಾವ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ಸಿ.ವಿದ್ಯಾಸಾಗರ ರಾವ್ ರವರು ಇದೇ ತಿಂಗಳ 28ನೇ ಫೆಬ್ರವರಿ 2015, ಶನಿವಾರದಂದು ತಮ್ಮ ಧರ್ಮಪತ್ನಿಯ ಜೊತೆಯಲ್ಲಿ ಶಿರಡಿಗೆ ಭೇಟಿ ನೀಡಿ ಶ್ರೀ.ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ವಿಧಾನಸಭೆಯ ವಿರೋಧಪಕ್ಷದ ನಾಯಕರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಅಹಮದ್ ನಗರ ಜಿಲ್ಲಾ ಕಲೆಕ್ಟರ್ ಹಾಗೂ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಶ್ರೀ.ಅನಿಲ್ ಕಾವಡೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರುಗಳು ಕೂಡ ಉಪಸ್ಥಿತರಿದ್ದರು. 


ದರ್ಶನದ ನಂತರ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಪಾಲ ಶ್ರೀ.ಸಿ.ವಿದ್ಯಾಸಾಗರ ರಾವ್ ರವರು "ಇಂದು ನಾನು ಶ್ರೀ ಸಾಯಿಬಾಬಾ, ಸಮಾಧಿ ಮಂದಿರದ ಸಂಕೀರ್ಣ ಮತ್ತು ಅತಿಥಿ ಗೃಹದ ದರ್ಶನವನ್ನು ಮಾಡುವ ಸೌಭಾಗ್ಯವನ್ನು ಹೊಂದಿದ್ದೆ. ಸಂಸ್ಥಾನದ ಪರಿಸರವನ್ನು ಕೊಳೆಯಿಲ್ಲದೆ ಶುದ್ಧವಾಗಿ ಹಾಗೂ ಸುಂದರವಾಗಿ ಇರಿಸಿರುವ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯವು ಪ್ರಶಂಸನೀಯ" ಎಂದು ಮುಕ್ತಕಂಠದಿಂದ ಹೊಗಳಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, February 20, 2015

ಮಹಾರಾಷ್ಟ್ರದ ಸಹಕಾರ, ಮಾರುಕಟ್ಟೆ, ಲೋಕೋಪಯೋಗಿ ಮತ್ತು ಜವಳಿ ಖಾತೆ ಸಚಿವ ಶ್ರೀ.ಚಂದ್ರಕಾಂತ್ ಪಾಟೀಲ್ ಶಿರಡಿ ಭೇಟಿ - ಕೃಪೆ:ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಸಹಕಾರ, ಮಾರುಕಟ್ಟೆ, ಲೋಕೋಪಯೋಗಿ ಮತ್ತು ಜವಳಿ ಖಾತೆ ಸಚಿವರಾದ  ಶ್ರೀ.ಚಂದ್ರಕಾಂತ್ ಪಾಟೀಲ್ ರವರು ತಮ್ಮ ಕುಟುಂಬವರ್ಗದವರೊಂದಿಗೆ ಇದೇ ತಿಂಗಳ 20ನೇ ಫೆಬ್ರವರಿ 2015, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, February 17, 2015

ಶಿರಡಿ ಸಂಸ್ಥಾನದ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 17ನೇ ಫೆಬ್ರವರಿ 2015, ಮಂಗಳವಾರ ದಂದು ಮಹಾ ಶಿವರಾತ್ರಿ  ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ವಿಗ್ರಹವನ್ನು ರುದ್ರಾಕ್ಷಿಯಿಂದ ವಿಶೇಷವಾಗಿ ತಯಾರಿಸಲಾದ ಬಟ್ಟೆಯಿಂದ ಅಲಂಕರಿಸಲಾಗಿತ್ತು  



ಈ ಸಂದರ್ಭದಲ್ಲಿ ನವದೆಹಲಿಯ ಸಾಯಿ ಭಕ್ತೆಯಾದ ಶ್ರೀಮತಿ.ರಜನಿ ದಾಂಗ್ ರವರು ನೀಡಿದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಪರಿಸರವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, February 14, 2015

ಸುಪ್ರಸಿದ್ಧ ಮರಾಠಿ ಚಲನಚಿತ್ರ ನಟ ಶ್ರೀ.ಸಿದ್ಧಾರ್ಥ ಜಾಧವ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಸುಪ್ರಸಿದ್ಧ ಮರಾಠಿ ಚಲನಚಿತ್ರ ನಟರಾದ ಶ್ರೀ.ಸಿದ್ಧಾರ್ಥ ಜಾಧವ್ ರವರು ತಮ್ಮ ಚಲನಚಿತ್ರ ರಂಗದ ಸಹೋದ್ಯೋಗಿಗಳೊಂದಿಗೆ  ಇದೇ ತಿಂಗಳ 14ನೇ ಫೆಬ್ರವರಿ 2015, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, February 12, 2015

ತೆಲುಗು ಚಿತ್ರನಟ ಶ್ರೀ.ಅಕ್ಕಿನೇನಿ ನಾಗಾರ್ಜುನ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಪ್ರಖ್ಯಾತ ತೆಲುಗು  ಚಿತ್ರನಟರಾದ ಶ್ರೀ.ಅಕ್ಕಿನೇನಿ ನಾಗಾರ್ಜುನರವರು ತಮ್ಮ ಧರ್ಮಪತ್ನಿ ಹಾಗೂ ಚಿತ್ರತಾರೆ ಶ್ರೀಮತಿ.ಅಮಲಾರೊಂದಿಗೆ ಇದೇ ತಿಂಗಳ  12ನೇ ಫೆಬ್ರವರಿ 2015, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, February 10, 2015

ಪರೀಕ್ಷಾ ಅವಧಿಯ ಹದಿನೆಂಟು ಐ.ಎ.ಎಸ್. ಅಧಿಕಾರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಪರೀಕ್ಷಾ ಅವಧಿಯಲ್ಲಿದ್ದು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹದಿನೆಂಟು ಐ.ಎ.ಎಸ್. ಅಧಿಕಾರಿಗಳು ಇದೇ ತಿಂಗಳ 10ನೇ ಫೆಬ್ರವರಿ 2015, ಮಂಗಳವಾರ ದಂದು ಶಿರಡಿಗೆ  ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಅಧಿಕಾರಿಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ