Tuesday, April 30, 2013

ಪಗ್ವಾರಾದ ಶಿರಡಿ ಸಾಯಿಬಾಬಾ ಮಂದಿರ- ಶ್ರೀ ಸಾಯಿಬಾಬಾ ಮಂದಿರ ಕಮಿಟಿ, ಸುಖಚೈನ್ ಸಾಹೀಬ್ ರಸ್ತೆ, ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ, ಪಗ್ವಾರಾ, ಕಪುರ್ತಲಾ ಜಿಲ್ಲೆ, ಪಂಜಾಬ್,ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಪಂಜಾಬ್ ರಾಜ್ಯದ ಕಪುರ್ತಲಾ ಜಿಲ್ಲೆಯ ಪಗ್ವಾರಾ ನಗರದ ಸುಖಚೈನ್ ಸಾಹೀಬ್ ರಸ್ತೆಯಲ್ಲಿರುವ ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ ಇರುತ್ತದೆ. ಗೋವಿಂದ ಗೋಧಾಮ್ ಗೋಶಾಲೆಯಿಂದ ಎರಡು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 2ನೇ ಜುಲೈ 2010 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 2ನೇ ಅಕ್ಟೋಬರ್ 2011 ರಂದು ದೇವಾಲಯದ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ರಾಜನ್ ಶರ್ಮರವರು  ಹಲವಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ರಾಜನ್ ಶರ್ಮರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಪಲ್ಲಕ್ಕಿಯನ್ನು ದೇವಾಲಯದ ಒಳಗಡೆ ಇರಿಸಲಾಗಿದೆ.






ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ 6:00 ರಿಂದ ರಾತ್ರಿ 9:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ          : ಬೆಳಿಗ್ಗೆ 6:30 ಗಂಟೆಗೆ.
ಮಧ್ಯಾನ್ಹ ಆರತಿ         : ಮಧ್ಯಾನ್ಹ 12:00 ಗಂಟೆಗೆ
ಧೂಪಾರತಿ               : ಸಂಜೆ 6:30 ಗಂಟೆಗೆ.
ಶೇಜಾರತಿ                : ರಾತ್ರಿ 9:00 ಗಂಟೆಗೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 2ನೇ ಅಕ್ಟೋಬರ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಸಂಸ್ಥಾಪಕ ಅಧ್ಯಕ್ಷರೂ ಹಾಗೂ ಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ರಾಜನ್ ಶರ್ಮರವರು ಭಾರತದ ಎಲ್ಲ ಕಡೆಗಳಲ್ಲಿ ಉಚಿತವಾಗಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಪಗ್ವಾರ ಬಳಿಯಿರುವ ಆಶ್ರಮದಲ್ಲಿರುವ ಕುಷ್ಟ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತಿದೆ.

ಪಗ್ವಾರ ಬಳಿಯಿರುವ ಅಂಧರ ಆಶ್ರಮದಲ್ಲಿರುವ ಅಂಧರಿಗೆ ಉಚಿತವಾಗಿ ಊಟವನ್ನು ವಿತರಣೆ ಮಾಡಲಾಗುತ್ತಿದೆ.


ದೇಣಿಗೆಗೆ ಮನವಿ:

ದೇವಾಲಯದ ಟ್ರಸ್ಟ್ ನಿಯಮಿತವಾಗಿ ಹಲವಾರು ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಇಚ್ಚಿಸುವ ಸಾಯಿಭಕ್ತರು "ಶ್ರೀ ಸಾಯಿಬಾಬಾ ಮಂದಿರ ಕಮಿಟಿ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಖಾತೆ ಸಂಖ್ಯೆ: 07202191002037" ಗೆ ಸಲ್ಲುವಂತೆ ನಗದು/ಚೆಕ್/ಡಿಡಿ ರೂಪದಲ್ಲಿ ಸಂದಾಯ ಮಾಡಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಪಗ್ವಾರಾದ ಸುಖಚೈನ್ ಸಾಹೀಬ್ ರಸ್ತೆಯಲ್ಲಿರುವ ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ ಇರುತ್ತದೆ.

ವಿಳಾಸ:
ಶ್ರೀ ಸಾಯಿಬಾಬಾ ಮಂದಿರ ಕಮಿಟಿ,
ಸುಖಚೈನ್ ಸಾಹೀಬ್ ರಸ್ತೆ,
ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ,
ಪಗ್ವಾರಾ, ಕಪುರ್ತಲಾ ಜಿಲ್ಲೆ,
ಪಂಜಾಬ್,ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ರಾಜನ್ ಶರ್ಮ (ಅಧ್ಯಕ್ಷರು)

ದೂರವಾಣಿ ಸಂಖ್ಯೆ:
+91 98142 22345

ಇ ಮೇಲ್ ವಿಳಾಸ: 
sairajan12@yahoo.in


ಮಾರ್ಗಸೂಚಿ: 
ದೇವಾಲಯವು ಪಗ್ವಾರಾ ನಗರದ ಸುಖಚೈನ್ ಸಾಹೀಬ್ ರಸ್ತೆಯಲ್ಲಿರುವ ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ ಇರುತ್ತದೆ. ಗೋವಿಂದ ಗೋಧಾಮ್ ಗೋಶಾಲೆಯಿಂದ ಎರಡು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, April 27, 2013

ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ (ನೋಂದಣಿ) ಯ ವತಿಯಿಂದ ಮಂದಿರದ 34ನೇ ವಾರ್ಷಿಕೋತ್ಸವದ  ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ (ನೋಂದಣಿ) ಯ ವತಿಯಿಂದ ಮುಂದಿನ  ತಿಂಗಳ 11ನೇ ಮೇ 2013, ಶನಿವಾರ ದಿಂದ 13ನೇ ಮೇ 2013, ಮಂಗಳವಾರದವರೆಗೆ ಶ್ರೀ ಸಾಯಿ ಮಂದಿರದ 34ನೇ ವಾರ್ಷಿಕೋತ್ಸವವನ್ನು  ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮದ ವಿವರಗಳನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:


ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಟ್ರಸ್ಟಿಗಳು, ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಶ್ರೀ ಸಾಯಿ ಮಂದಿರದ 34ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಎಲ್ಲಾ ಸಾಯಿ ಭಕ್ತರೂ ಪಾಲ್ಗೊಂಡು ಸದ್ಗುರುಗಳಾದ ಶ್ರೀ ಶಿರಡಿ ಸಾಯಿಬಾಬಾ, ಪರಮ ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿ ಹಾಗೂ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರುಗಳ ಕೃಪೆಗೆ ಪಾತ್ರರಾಗಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠಶರ್ಮ

Friday, April 26, 2013

ಶ್ರೀ ಆನಂದಸಾಯಿ ನೂತನ ಧ್ಯಾನ ಮಂಟಪಂ, ಚನ್ನೈನ ವತಿಯಿಂದ ಮಹಾ ಕುಂಭಾಭಿಷೇಕ ಮಹೋತ್ಸವ -ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಆನಂದಸಾಯಿ ನೂತನ ಧ್ಯಾನ ಮಂಟಪಂ, ಚನ್ನೈ  ಮುಂದಿನ ತಿಂಗಳು 21ನೇ ಮೇ 2013 ರಿಂದ 23ನೇ ಮೇ 2013 ರವರೆಗೆ  ಚನ್ನೈ ನ ಸಾಯಿಬಾಬಾ ನಗರ, ಪೂಂತಾಂಡಲಂ, ನಂದಂಬಾಕ್ಕಂ ಅಂಚೆ, ಕುಂಡ್ರತೂರು ರಸ್ತೆಯಲ್ಲಿರುವ ಮಂದಿರದಲ್ಲಿ ಮಹಾ ಕುಂಭಾಭಿಷೇಕ ಮಹೋತ್ಸವವನ್ನು ಹಮ್ಮಿಕೊಂಡಿದೆ.

ಪರಮಪಿತ ಪೀಠಂ ನ ಶ್ರೀ.ಶ್ರೀ.ಶ್ರೀಮತ್. ಪ್ರವನಂದ ಅವಧೂತ ಸರಸ್ವತಿ ಸ್ವಾಮಿಗಳು ಈ ಮಹಾ ಕುಂಭಾಭಿಷೇಕವನ್ನು ನೆರವೇರಿಸಲಿದ್ದಾರೆ.

 ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ:

Date/Day
Time
Programme Details
21st May 2013, Tuesday
6am to 9am
Veda prathana,Anugyai,guru Pooja, Vigneswara pooja,Sri Maha Ganapathi Pooja, Go Pooja,Maha Sankalpa,Punyaavaajanam,Navagraha homam,Bhoosuktha Homam,Lakshmi homam,Dhana Poojai, , Poornahoothi, Deepaaradhana, Prasad.
21st May 2013, Tuesday
6pm to 9pm
Bhoo suththi, Punyaavaajanam,Vaasthu Pooja,Vaasthu Pooja,Pravesa bali, Mruthsyangagrahanam, Anguraarpanam, Rakshabandhanam  Soma Kumbha Pooja,Dwara Pooja,Devadhaa Avaahan, Shodasa upachaara Pooja, Deepa Aradhana.Agni Sthaapanam, First kaala Moola manthra homam,kala homam,Thathva homam,Chathur veda parayanam, Deepa Aradhana,Prasad
22nd May 2013, Wednesday
8.30am to 11.30am
Veda Parayanam, Second Kaala homam, kala homam,Thathva homam,Moorthi homam, Poornahoothi Chathur veda parayanam, Deepa Aradhana,Prasad
22nd May 2013, Wednesday
6pm to 9pm
Veda Parayanam, Third Kaala homam, kala homam,Thathva homam,Moorthi homam,Prathistaa homam, Poornahoothi Chathur veda parayanam, Deepa Aradhana,Prasad
23rd May 2013, Thursday
4.30am to 7.30am
Veda Parayanam, Gaja Poojai,Dwara Pooja,Aavarana Archanai,Fourth Kaala homam, kala homam,Thathva homam,Moorthi homam,Prathistaa homam,, Swabaavaahoodhi,Naadi sandhanam,Thiraavyaa hoodhi, Poornahoothi, Chathur veda parayanam, Deepa Aradhana.Yaatraa dhaana sankalpam
23rd May 2013, Thursday
8:00 am
Gatam Procession
23rd May 2013, Thursday
9:00 am
Gopura kalasaVimaana Maha Kumbhabhishekam
23rd May 2013, Thursday
9:30 am
Anandha Sai Moorthi Maha Kumbhabhishekam
ಶ್ರೀ ಸಾಯಿ ಪ್ರಚಾರ ಪರಿವಾರ, ಚನ್ನೈ ನ ವತಿಯಿಂದ ಶಿರಡಿ ಸಾಯಿಬಾಬಾ ಚಿತ್ರಾ ಪೂರ್ಣಿಮಾ ಉತ್ಸವ -  ಕೃಪೆ: ಸಾಯಿಅಮೃತಧಾರಾ.ಕಾಂ 

ಭಕ್ತರು ಕೋರಿಕೆಗಳನ್ನು ಈಡೇರಿಸುತ್ತಿರುವ ಕಲಿಯುಗದ ಕಾಮಧೇನು ಶ್ರೀ ಶಿರಡಿ ಸಾಯಿಬಾಬಾರವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚನ್ನೈನ  ಶ್ರೀ ಸಾಯಿ ಪ್ರಚಾರ ಪರಿವಾರವು ಇದೇ  ತಿಂಗಳ 28ನೇ ಏಪ್ರಿಲ್ 2013, ಭಾನುವಾರ ದಂದು ಚನ್ನೈ ನಗರದಲ್ಲಿ ಶಿರಡಿ ಸಾಯಿಬಾಬಾ ಚಿತ್ರಾ ಪೂರ್ಣಿಮಾ ಉತ್ಸವವನ್ನು ಹಮ್ಮಿಕೊಂಡಿರುತ್ತದೆ. 

ಬೆಳಗಿನಿಂದ ಸಂಜೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಆಗಮಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿ ಪ್ರಚಾರ ಪರಿವಾರದ ಸದಸ್ಯರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕಾರ್ಯಕ್ರಮದ ವಿವರ ಮತ್ತು ನಡೆಯುವ ಸ್ಥಳದ ವಿವರವನ್ನು ಈ ಕೆಳಗೆ ಕೊಡಲಾಗಿದೆ.

ಕಾರ್ಯಕ್ರಮದ ಸಮಯ: 
 
ಬೆಳಿಗ್ಗೆ 6:00 ರಿಂದ ಸಂಜೆ 6:30 ರವರೆಗೆ 

ಕಾರ್ಯಕ್ರಮ ನಡೆಯುವ ಸ್ಥಳ: 
 
ಪದ್ಮಾರಾಂ ಮಹಲ್ (ಹಳೆ ರಾಮ್ ಚಿತ್ರಮಂದಿರ), 
83, ಆರ್ಕಾಟ್ ರಸ್ತೆ, 
ಕೋಡಮ್ಬಾಕ್ಕಂ, ಚನ್ನೈ - 24.
ದೂರವಾಣಿ: +91 44 6544 9766 / +91 98408 18595 


ಕಾರ್ಯಕ್ರಮದ ವಿವರಗಳು: 
 
6.00 AM – ಮಹಾ ಗಣಪತಿ ಪೂಜೆ, ಶ್ರೀ ಸಾಯಿನಾಥ ಆವಾಹನೆ.
7.00 AM – 108 ಶ್ರೀ ಸಾಯಿ ಸತ್ಯವ್ರತ ಪೂಜೆ.
9.00 AM –  ಬಡವರಿಗೆ ವಿವಾಹಕ್ಕೆ ಸಹಾಯ, ತ್ರಿಚಕ್ರ ವಾಹನ ವಿತರಣೆ,ಆಲಯಂ ನ ಅಂಗವಿಕಲ ಮಕ್ಕಳಿಗೆ ವಸ್ತ್ರ ವಿತರಣೆ.
9.30 AM -  ನಾಮ ಸಂಕೀರ್ತನೆ. 
12.00 PM – ಆರತಿ 
12.30 PM – 3000 ಭಕ್ತರಿಗೆ ಅನ್ನದಾನ ಕಾರ್ಯಕ್ರಮ. 
02.00 PM -  405 ಮಹಿಳೆಯರಿಗೆ ಸೀರೆ, ಕುಂಕುಮ ವಿತರಣೆ.
5.00 PM – ನಾಮ ಸಂಕೀರ್ತನ ನಾಟ್ಯಾಂಜಲಿ ಕಾರ್ಯಕ್ರಮ.
6.00 PM – ಆರತಿ.
6.30 PM – ಪ್ರಸಾದ ವಿತರಣೆ.

ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸಬಹುದು. 

ಶ್ರೀ ಸಾಯಿ ಪ್ರಚಾರ ಪರಿವಾರ 
11/11, ಆಂಡವರ ನಗರ, 6ನೇ ರಸ್ತೆ, ಕೋಡಂಬಾಕಂ, ಚನ್ನೈ-24.
ದೂರವಾಣಿ: +91 44 6544 9766 / +91 98408 18595 
ಅಂತರ್ಜಾಲ ತಾಣ: www.srisaipracharpariwar.org
 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, April 25, 2013

ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ (ನೋಂದಣಿ) ಯ ವತಿಯಿಂದ ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರ 107ನೇ ಜಯಂತಿಯ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ (ನೋಂದಣಿ) ಯ ವತಿಯಿಂದ ಇದೇ ತಿಂಗಳ 27ನೇ ಏಪ್ರಿಲ್ 2013, ಶನಿವಾರ ದಿಂದ 30ನೇ ಏಪ್ರಿಲ್ 2013, ಮಂಗಳವಾರದವರೆಗೆ ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರ 107ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಕಾರ್ಯಕ್ರಮದ ವಿವರಗಳನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:



ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಟ್ರಸ್ಟಿಗಳು, ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಶ್ರೀ ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರ 107ನೇ ಜಯಂತಿಯ ಕಾರ್ಯಕ್ರಮಗಳಲ್ಲಿ ಎಲ್ಲಾ ಸಾಯಿ ಭಕ್ತರೂ ಪಾಲ್ಗೊಂಡು ಸದ್ಗುರುಗಳಾದ ಶ್ರೀ ಶಿರಡಿ ಸಾಯಿಬಾಬಾ, ಪರಮ ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿ ಹಾಗೂ ಶ್ರೀ ರಾಧಾಕೃಷ್ಣ ಸ್ವಾಮೀಜಿಯವರುಗಳ ಕೃಪೆಗೆ ಪಾತ್ರರಾಗಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠಶರ್ಮ
ಅನನ್ಯ ಸಾಯಿ ಭಕ್ತೆ ಹಾಗೂ ಶ್ರೀ ಶಿವಸಾಯಿ ಟ್ರಸ್ಟ್, ಚನ್ನೈನ ಅಧ್ಯಕ್ಷೆ ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ

ಅನನ್ಯ ಸಾಯಿ ಭಕ್ತೆ ಹಾಗೂ ಶ್ರೀ ಶಿವಸಾಯಿ ಟ್ರಸ್ಟ್, ಚನ್ನೈನ ಅಧ್ಯಕ್ಷೆ ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ಇದೇ ತಿಂಗಳ 25ನೇ ಏಪ್ರಿಲ್ 2013 ರಂದು ಮಧ್ಯಾನ್ಹ 3:20 ಕ್ಕೆ ಚನ್ನೈನ ಮೈಲಾಪುರಂ ನ ತಮ್ಮ ನಿವಾಸದಲ್ಲಿ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ.

   ಬಂಗಾರಪೇಟೆಯ ಕಾರ್ಯಕ್ರಮವೊಂದರಲ್ಲಿ ದೀಪವನ್ನು ಬೆಳಗುತ್ತಿರುವ  ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್

ಇವರು ಪ್ರಖ್ಯಾತ ಸಾಯಿಭಕ್ತರಾದ ಹಾಗೂ "ಮಹಾನ್ ಸಾಯಿದಾಸನ್" ಎಂದು ಕರೆಯಲ್ಪಡುತ್ತಿದ್ದ ದಿವಂಗತ ಡಾಕ್ಟರ್ ಮುತ್ತುವೆಂಕಟರಾಮನ್ ರವರ ಧರ್ಮಪತ್ನಿ. ಶ್ರೀ.ಮುತ್ತುವೆಂಕಟರಾಮನ್ ರವರು 100 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಹಾಗೂ ಅದರ ಸುತ್ತಲೂ ಸರ್ವಧರ್ಮ ಸಮನ್ವಯದ ಸಂಕೇತವಾಗಿ ಹಿಂದೂ, ಮುಸ್ಲಿಮ್ ಹಾಗೂ ಕ್ರೈಸ್ತ ಧರ್ಮದ ದೇವಾಲಯಗಳನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದ್ದರು.

ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ರವರು ತಮ್ಮ ಪತಿಯ ಕೊನೆಯ ಆಸೆಯನ್ನು ನೆರವೇರಿಸಲು ಹಗಲೂ ರಾತ್ರಿ ಶ್ರಮಿಸುತ್ತಿದ್ದರು. ಅಲ್ಲದೇ, ಕೇವಲ ಕಳೆದ ವಾರವಷ್ಟೇ ಅಂದರೆ 23ನೇ ಏಪ್ರಿಲ್ 2013, ಮಂಗಳವಾರದಂದು ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್, ಸೆಂಡ್ರಾಯನಪಾಳ್ಯಂ  ಗ್ರಾಮದಲ್ಲಿ    ದೇವಾಲಯ, ಚರ್ಚ್ ಹಾಗೂ ಮಸೀದಿಯಿಂದ ಸುತ್ತುವರಿಯಲ್ಪಡುವ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯದ ಭೂಮಿಪೂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು ಎಂಬುದನ್ನು ಬ್ಲಾಗ್ ನ ವಾಚಕರು ಇಲ್ಲಿ ಸ್ಮರಿಸಬಹುದು.

www.saiamrithadhara.com ಮತ್ತು ಅದರ ಸಹಯೋಗಿ ಕನ್ನಡ ಬ್ಲಾಗ್ ಆದ http://www.saiamrithavani.blogspot.in/ ನ ತಂಡದ ಸದಸ್ಯರುಗಳು ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ರವರ ಈ ಅಕಾಲಿಕ ಮರಣಕ್ಕೆ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೇ, ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಶಿವಸಾಯಿ ಟ್ರಸ್ಟ್, ಚನ್ನೈನ ಸದಸ್ಯರುಗಳಿಗೆ ನೀಡಲೆಂದು ಮತ್ತು ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ಹಾಗೂ ಡಾ.ಮುತ್ತುವೆಂಕಟರಾಮನ್ ರವರ ಬಹಳ ವರ್ಷಗಳ ಆಸೆಯಾದ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯವನ್ನು ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್, ಸೆಂಡ್ರಾಯನಪಾಳ್ಯಂ  ಗ್ರಾಮದಲ್ಲಿ ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಶಕ್ತಿ ನೀಡಲೆಂದು ಶಿರಡಿ ಸಾಯಿಬಾಬಾರವರಲ್ಲಿ ಅತ್ಯಂತ ವಿನಯದಿಂದ ಬೇಡಿಕೊಳ್ಳುತ್ತೇವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, April 18, 2013

ಶಿವಸಾಯಿ ಟ್ರಸ್ಟ್ ನ ವತಿಯಿಂದ ಚನ್ನೈನ ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್, ಸೆಂಡ್ರಾಯನಪಾಳ್ಯಂ ಗ್ರಾಮದಲ್ಲಿ  ದೇವಾಲಯ, ಚರ್ಚ್ ಹಾಗೂ ಮಸೀದಿಯಿಂದ ಸುತ್ತುವರಿಯಲ್ಪಡುವ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯದ ಭೂಮಿಪೂಜೆ ಹಾಗೂ ಶ್ರೀ ಪಂಚಮುಖಿ ವಿಷ್ಣು ಗಣಪತಿ, ಶ್ರೀ ಭಕ್ತ ಆಂಜನೇಯ ಹಾಗೂ ಶಿರಡಿ ಸಾಯಿಬಾಬಾ ವಿಗ್ರಹಗಳ ಪ್ರತಿಷ್ಟಾಪನೆ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ  

ಶಿವಸಾಯಿ ಟ್ರಸ್ಟ್, ಚನ್ನೈ ಇದೇ ತಿಂಗಳ 23ನೇ ಏಪ್ರಿಲ್ 2013, ಮಂಗಳವಾರ, ಪವಿತ್ರ ಮಹಾವೀರ ಜಯಂತಿಯ ದಿನದಂದು 8 ಗಂಟೆಗೆ ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್ ಗ್ರಾಮದಲ್ಲಿ    ದೇವಾಲಯ, ಚರ್ಚ್ ಹಾಗೂ ಮಸೀದಿಯಿಂದ ಸುತ್ತುವರಿಯಲ್ಪಡುವ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯದ ಭೂಮಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  

ಇದೇ ದಿನ ಬೆಳಿಗ್ಗೆ 9:30 ಕ್ಕೆ ಶ್ರೀ ಪಂಚಮುಖಿ ವಿಷ್ಣು ಗಣಪತಿ, ಶ್ರೀ ಭಕ್ತ ಆಂಜನೇಯ ಹಾಗೂ ಶಿರಡಿ ಸಾಯಿಬಾಬಾ ವಿಗ್ರಹಗಳ ಪ್ರತಿಷ್ಟಾಪನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.   

ಬೆಳಿಗ್ಗೆ 10:30 ಕ್ಕೆ ಉಚಿತ ವೈದ್ಯಕೀಯ ಶಿಬಿರ ಮತ್ತು ಅದರ ನಂತರ ಅನ್ನದಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. 




ದೇವಾಲಯದ ವಿಳಾಸ: 

ನಂ.8, ಗ್ರಿನ್ವೆಲ್ನಾಥಮ್ ಗ್ರಾಮ, 
ಸೆಂಡ್ರಾಯನಪಾಳ್ಯಂ, 
ಪೂಂಡಿ ಅಂಚೆ-602 023,
ತಿರುವಳ್ಳೂರು ಜಿಲ್ಲೆ, 
ತಮಿಳುನಾಡು, ಭಾರತ  
ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಮೊಬೈಲ್ ಸಂಖ್ಯೆಗಳು: +91 94446 56167, +91 99400 24173   
ಇ-ಮೈಲ್ ವಿಳಾಸ: info@aaosai.com
ಅಂತರ್ಜಾಲ ತಾಣ: www.aaosai.com 

  

ಕನ್ನಡ ಅನುವಾದ ಶ್ರೀಕಂಠ ಶರ್ಮ 
ಶಿರಡಿ ಸಾಯಿಬಾಬಾ ಸಂಸ್ಥಾನ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಮೊದಲನೇ ದಿನದ ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಇದೇ ತಿಂಗಳ 18ನೇ ಏಪ್ರಿಲ್ 2013, ಗುರುವಾರದಂದು ಸಾಯಿಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆ, ಅಧೀಕ್ಷಕರಾದ ಶ್ರೀ.ರಾಮರಾವ್ ಶೆಲ್ಕೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಪುರೋಹಿತರಾದ ಶ್ರೀ.ಚಂದ್ರಕಾಂತ್ ಗೋರ್ಕರ್ ರವರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಏರ್ಪಡಿಸಿದ್ದ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆಯವರು ಉದ್ಘಾಟಿಸಿದರು.


ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆಯವರು ನೆರವೇರಿಸಿದರು. 


ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಚನ್ನೈನ ಸಾಯಿ ಭಕ್ತರಾದ ಶ್ರೀ.ಎಸ್.ದೇವರಾಜ್ ರವರು ಸಮಾಧಿ ಮಂದಿರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಿದ್ದರು. 



ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ಮುಂಬೈನ ದ್ವಾರಕಾಮಾಯಿ ಮಂಡಳದ ವತಿಯಿಂದ ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಹನುಮಂತ ದೇವರುಗಳ ಸುಂದರ ಮಹಾದ್ವಾರದ ನಿರ್ಮಾಣವನ್ನು ಮಾಡಲಾಗಿತ್ತು.  





ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, April 14, 2013

ವಿಶ್ವವಿಖ್ಯಾತ ಗುರುವಾರದ ಚಾವಡಿ ಉತ್ಸವ ಈಗ ಟಾಟಾ ಸ್ಕೈ ಹಾಗೂ ಶಿರಡಿ ಲೈವ್ ದರ್ಶನದಲ್ಲಿ ಲಭ್ಯ - ಕೃಪೆ: ಸಾಯಿಅಮೃತಧಾರಾ.ಕಾಂ

ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ! ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸುವ ವಿಶ್ವವಿಖ್ಯಾತ ಚಾವಡಿ ಉತ್ಸವವನ್ನು ಇದೇ ತಿಂಗಳ  4ನೇ ಏಪ್ರಿಲ್ 2013, ಗುರುವಾರದಿಂದ ಟಾಟಾ ಸ್ಕೈ ಹಾಗೂ ಅಂತರ್ಜಾಲದ ಶಿರಡಿ ಲೈವ್ ದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.

ಇದರಿಂದ ಪ್ರಪಂಚದಾದ್ಯಂತ ಇರುವ ಕೋಟ್ಯಾಂತರ ಸಾಯಿ ಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಕುಳಿತು ವಿಶ್ವವಿಖ್ಯಾತ ಚಾವಡಿ ಉತ್ಸವವನ್ನು ನೋಡಿ ಸಂತೋಷಪಡುವುದಷ್ಟೇ ಅಲ್ಲದೇ, ಶಿರಡಿ ಸಾಯಿಬಾಬಾರವರ ಅವತರಣ ಕಾಲದಲ್ಲಿ ನಡೆಯುತ್ತಿದ್ದ ಚಾವಡಿ ಉತ್ಸವದ ದಿನಗಳನ್ನು ಮನದಲ್ಲಿ ನೆನೆದು ರೋಮಾಂಚನಗೊಳ್ಳುವಂತೆ ಮಾಡಿದೆ.

www.saiamrithadhara.com ಮತ್ತು www.saiamrithavani.blogspot.in ತಂಡದ ಸದಸ್ಯರು ಟಾಟಾ ಸ್ಕೈ ಹಾಗೂ ಅಂತರ್ಜಾಲದ ಶಿರಡಿ ಲೈವ್ ದರ್ಶನದಲ್ಲಿ ಚಾವಡಿ ಉತ್ಸವವನ್ನು ನೇರ ಪ್ರಸಾರ ಮಾಡುತ್ತಿರುವುದಕ್ಕೆ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಕೋಟ್ಯಾಂತರ ಸಾಯಿ ಭಕ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, April 11, 2013


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮಹಾರಾಷ್ಟ್ರ ಬರ ಪರಿಹಾರ ನಿಧಿಗೆ 25 ಕೋಟಿ ರೂಪಾಯಿಗಳ ಕೊಡುಗೆ - ಕೃಪೆ:ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಡಿ.ಕುಲಕರ್ಣಿಯವರು ಇದೇ ತಿಂಗಳ ಪವಿತ್ರ ಗುಡಿ ಪಾಡ್ವ ದಿನವಾದ 11ನೇ ಏಪ್ರಿಲ್ 2013, ಗುರುವಾರದಂದು ಮಹಾರಾಷ್ಟ್ರ ಬರ ಪರಿಹಾರ ನಿಧಿಗೆ 25 ಕೋಟಿ ರೂಪಾಯಿಗಳ ಚೆಕ್ ಅನ್ನು ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರಿಗೆ ನೀಡಿದರು.



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ  ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ-1" ರ ಉದ್ಘಾಟನೆ- ಕೃಪೆ:ಸಾಯಿಅಮೃತಧಾರಾ.ಕಾಂ

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ಶ್ರೀ.ಕೆ.ವಿ.ರಮಣಿಯವರು ನೀಡಿದ 110 ಕೋಟಿ ರೂಪಾಯಿಗಳ ಕಾಣಿಕೆಯಿಂದ ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ-1" ಅನ್ನು ಇದೇ ತಿಂಗಳ ಪವಿತ್ರ ಗುಡಿ ಪಾಡ್ವ ದಿನವಾದ 11ನೇ ಏಪ್ರಿಲ್ 2013, ಗುರುವಾರದಂದು ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರು ಉದ್ಘಾಟಿಸಿದರು.

ದಾನಿಗಳಾದ ಶ್ರೀ.ಕೆ.ವಿ.ರಮಣಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಜಯಂತ್ ಡಿ.ಕುಲಕರ್ಣಿಯವರು ಸನ್ಮಾನ ಪತ್ರವನ್ನು ನೀಡುವ ಮುಖಾಂತರ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್, ವ್ಯವಸಾಯ ಖಾತೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖೆ ಪಾಟೀಲ್, ಮಂತ್ರಿಗಳಾದ ಶ್ರೀ.ಹರ್ಷವರ್ಧನ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಡಿ.ಕುಲಕರ್ಣಿ ಮತ್ತು ಹಲವಾರು ಗಣ್ಯರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, April 10, 2013

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ- ಸಾಯಿ ಸಗುಣೋಪಾಸನ ಮಂಡಳಿ, ನಂ.2338, ನೆಲಮಹಡಿ, 8ನೇ ಅಡ್ಡರಸ್ತೆ, 2ನೇ ಹಂತ, ಕುಮಾರಸ್ವಾಮಿ ಲೇಔಟ್, ಬೆಂಗಳೂರು-560 078, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ 2ನೇ ಹಂತದಲ್ಲಿರುವ ಚಂದ್ರಾನಗರ ಬಸ್ ನಿಲ್ದಾಣದ ಹತ್ತಿರ ಇರುತ್ತದೆ. ಚಂದ್ರಾನಗರ ಬಸ್ ನಿಲ್ದಾಣದಿಂದ ಕೇವಲ ಐದು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ದೇವಾಲಯದ ಉದ್ಘಾಟನೆಯನ್ನು 13ನೇ ಮಾರ್ಚ್ 2013 ರಂದು ಬೆಂಗಳೂರಿನ ವೇದ ಬ್ರಹ್ಮ ಶ್ರೀ.ಕೆ.ಎನ್.ಜಗನ್ನಾಥ ಶಾಸ್ತ್ರಿಯವರು ಹಲವಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಕೆ.ಎನ್.ವಿವೇಕಾನಂದ ಶರ್ಮರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯ ನೆಲಮಹಡಿಯಲ್ಲಿರುವ ಗರ್ಭಗುಡಿಯಲ್ಲಿ ಅಮೃತಶಿಲೆಯ 2 ಅಡಿ 7 ಅಂಗುಲ ಎತ್ತರದ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ, ಅಲ್ಲದೇ, ಪುಟ್ಟದಾದ ಸಾಯಿಬಾಬಾರವರ ಅಮೃತಶಿಲೆಯ ಮತ್ತೊಂದು ವಿಗ್ರಹವನ್ನು ಇರಿಸಲಾಗಿದ್ದು ಅದನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತಿದೆ.

ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.





ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 7:00 ರಿಂದ 10:30 ಗಂಟೆಯವರೆಗೆ.
ಸಂಜೆ : 6:00 ರಿಂದ 8:30 ರವರೆಗೆ.

ಗುರುವಾರದಂದು ಬೆಳಿಗ್ಗೆ 7:00 ರಿಂದ 12:30 ರವರೆಗೆ ಹಾಗೂ ಸಂಜೆ 6:00 ರಿಂದ 8:30 ರವರೆಗೆ ಮಂದಿರವನ್ನು ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ          : ಬೆಳಿಗ್ಗೆ 7:00 ಗಂಟೆಗೆ.
ಮಧ್ಯಾನ್ಹ ಆರತಿ         : ಮಧ್ಯಾನ್ಹ 12:00 ಗಂಟೆಗೆ (ಗುರುವಾರದಂದು ಮಾತ್ರ).
ಧೂಪಾರತಿ               : ಸಂಜೆ 06:00 ಗಂಟೆಗೆ.
ಶೇಜಾರತಿ               : ರಾತ್ರಿ 8:00 ಗಂಟೆಗೆ.

ಪ್ರತಿದಿನ ಬೆಳಿಗ್ಗೆ 7:30 ಕ್ಕೆ ಸಾಯಿಬಾಬಾರವರ ಪುಟ್ಟ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಸಂಜೆ 5:30 ರಿಂದ 8:30 ರವರೆಗೆ ವಿಷ್ಣು ಸಹಸ್ರನಾಮ ಹೋಮವನ್ನು ಹಮ್ಮಿಕೊಳ್ಳಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ಪ್ರತಿ ತಿಂಗಳ ಅಮಾವಾಸ್ಯೆಯ ದಿನದಂದು ಸಂಜೆ 5:30 ರಿಂದ 8:30 ರವರೆಗೆ ಲಲಿತಾ ಸಹಸ್ರನಾಮ ಹೋಮವನ್ನು ಹಮ್ಮಿಕೊಳ್ಳಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 13ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
ದತ್ತ ಜಯಂತಿ.




ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ 2ನೇ ಹಂತದಲ್ಲಿರುವ ಚಂದ್ರಾನಗರ ಬಸ್ ನಿಲ್ದಾಣದ ಹತ್ತಿರ ಇರುತ್ತದೆ.

ವಿಳಾಸ:
ಸಾಯಿ ಸಗುಣೋಪಾಸನ ಮಂಡಳಿ
ನಂ.2338, ನೆಲಮಹಡಿ,
8ನೇ ಅಡ್ಡರಸ್ತೆ, 2ನೇ ಹಂತ,
ಕುಮಾರಸ್ವಾಮಿ ಲೇಔಟ್,
ಬೆಂಗಳೂರು-560 078,
ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಕೆ.ಎನ್.ವಿವೇಕಾನಂದ ಶರ್ಮ (ಅಧ್ಯಕ್ಷರು)

ದೂರವಾಣಿ ಸಂಖ್ಯೆಗಳು:
+91 99865 85665/+91 90600 90049

ಇ ಮೇಲ್ ವಿಳಾಸ: 
knvivekanand@gmail.com


ಮಾರ್ಗಸೂಚಿ: 
ಚಂದ್ರಾನಗರ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು  ಕುಮಾರಸ್ವಾಮಿ ಲೇ ಔಟ್ ಮತ್ತು ಇಸ್ರೋ ಲೇ ಔಟ್ ನ ಮಧ್ಯದ ದಾರಿಯಲ್ಲಿ ಇರುತ್ತದೆ.  ಮೆಜಿಸ್ಟಿಕ್ ಬಸ್  ನಿಲ್ದಾಣದಿಂದ ಕುಮಾರಸ್ವಾಮಿ ಲೇ ಔಟ್ ಬಡಾವಣೆಗೆ ಹೋಗುವ 210X ಬಸ್ ಸಂಖ್ಯೆಗೆ ಚಂದ್ರಾನಗರ ಬಸ್ ನಿಲ್ದಾಣದಲ್ಲಿ ನಿಲುಗಡೆ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, April 4, 2013

ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಸನಾತನ ಸಿಂಹ ಚಾರಿಟಬಲ್ ಸೇವಾ ಟ್ರಸ್ಟ್ (ನೋಂದಣಿ) ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ (ನೋಂದಣಿ) ಯ ವತಿಯಿಂದ ಶಿರಡಿಯ ಪ್ರಖ್ಯಾತ ಕಲಾವಿದರೂ ಹಾಗೂ ಸಾಯಿ ಭಕ್ತರಾದ ಶ್ರೀ.ಬಬ್ಲೂ ದುಗ್ಗಲ್ ಜೀ ಹಾಗೂ ಸಂಗಡಿಗರಿಂದ "ಶ್ರೀ ಸಾಯಿ ಸಚ್ಚರಿತೆ ಆಧಾರಿತ ನೃತ್ಯ ನಾಟಕ  "ಏಕ್ ಶ್ಯಾಮ್ ಸಾಯೀ ಕೆ ನಾಮ್" ನ ಆಯೋಜನೆ - ಕೃಪೆ: ಶ್ರೀ ಚಂದ್ರಕಾಂತ್ ಜಾಧವ, ಸಾಯಿ ಸಮರ್ಥ ಟ್ರಸ್ಟ್, ಬೆಂಗಳೂರು