ಹೆಜ್ಜೆ ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಿರುವ ಬೆಂಗಳೂರಿನ ಏಕೈಕ ಶಿರಡಿ ಸಾಯಿಬಾಬ ಮಂದಿರ - ಕೃಪೆ - ಸಾಯಿಅಮೃತಧಾರಾ.ಕಾಂ
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಹುಣಸೇಮಾರನಹಳ್ಳಿ ಎಂಬ ಹಳ್ಳಿಯು ಬಲಭಾಗಕ್ಕೆ ಸಿಗುತ್ತದೆ. ಅಲ್ಲಿ "ಶ್ರೀ ಶಿರಡಿ ಸಾಯಿ ಆನಂದಮಯಿ ದೇವಸ್ಥಾನ" ಎಂಬ ಸುಂದರ ಸಾಯಿಬಾಬನ ಮಂದಿರವಿದೆ.
ಈ ದೇವಸ್ಥಾನದ ವಿಶೇಷವೇನೆಂದರೆ, ದ್ವಾರಕಮಾಯಿಯನ್ನು ಶಿರಡಿಯಲ್ಲಿನ ದ್ವಾರಕಮಾಯಿಯಂತೆಯೇ ನಿರ್ಮಿಸಲಾಗಿದೆ.
ಇಲ್ಲಿನ ಮತ್ತೊಂದು ಮಹತ್ವವಾದ ವಿಶೇಷವೇನೆಂದರೆ ದೇವಸ್ಥಾನದ ಎಡಭಾಗದಿಂದ ಪ್ರಾರಂಭಿಸಿ ೧೦೮ ಹಾಸು ಕಲ್ಲುಗಳನ್ನು ವೃತ್ತಾಕಾರವಾಗಿ ನಿರ್ಮಿಸಲಾಗಿದ್ದು ಆ ಹಾಸು ಕಲ್ಲುಗಳು ಸರಿಯಾಗಿ ದೇವಸ್ಥಾನದ ಮುಂಭಾಗದ ಬಲಭಾಗದಲ್ಲಿ ಅಂತ್ಯಗೊಳ್ಳುತ್ತದೆ. ಸಾಯಿ ನಾಮವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ತಾರಕ ಮಂತ್ರವನ್ನು ಅಥವಾ ಸಾಯಿಬಾಬ ಅಷ್ಟೋತ್ತರವನ್ನು ಜಪಿಸುತ್ತ ಭಕ್ತರು ಹೆಜ್ಜೆ ಪ್ರದಕ್ಷಿಣೆಯನ್ನು ಮಾಡಿ ದೇವಸ್ಥಾನದ ಒಳಗೆ ಪ್ರವೇಶಿಸುವಂತೆ ಅನುಕೂಲ ಮಾಡಿಕೊಡಲಾಗಿದೆ. ಈ ಸುಂದರ ಕಲ್ಪನೆಯನ್ನು ಸಾಕಾರಗೊಳಿಸಿರುವ ದೇವಸ್ಥಾನದ ಮಾಲೀಕರಾದ ಕ್ಯಾಪ್ಟನ್ ವ.ವ. ಮಹೇಶರನ್ನು ಸಾಯಿ ಭಕ್ತರು ಎಷ್ಟು ಅಭಿನಂದಿಸಿದರೂ ಸಾಲದು.
ದೇವಸ್ಥಾನದ ವಿಳಾಸ ಈ ಕೆಳಕಂಡಂತೆ ಇದೆ:
ಕ್ಯಾಪ್ಟನ್ ವ.ವ. ಮಹೇಶ
ಶ್ರೀ ಶಿರಡಿ ಸಾಯಿ ಅನಂದಮಯಿ ದೇವಸ್ಥಾನ
ಹುಣಸೇಮರದಪಾಳ್ಯ, ಮೈಸೂರು ರಸ್ತೆ ಪಕ್ಕ,
ಅಮೃತ್ ಡಿಸ್ತಿಲ್ಲರಿ ಹಿಂಭಾಗ,
ಬೆಂಗಳೂರು.
ದೂರವಾಣಿ: ೨೮೪೩೭೩೪೫/೯೯೮೦೪೭೯೯೯೨/ ೯೪೪೮೧೧೬೧೪೬
ಸಾಯಿ ಭಕ್ತರು ಈ ಮಂದಿರಕ್ಕೆ ತಪ್ಪದೆ ತೆರಳಿ ಸಾಯಿಬಾಬನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ನಮ್ಮ ವೆಬ್ ಸೈಟಿನ ಆಶಯ.