Tuesday, January 27, 2015

ಖ್ಯಾತ ಚಲನಚಿತ್ರ ತಾರೆ ಶ್ರೀಮತಿ.ಜಯಾ ಬಚ್ಚನ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಚಲನಚಿತ್ರ ತಾರೆ ಶ್ರೀಮತಿ.ಜಯಾ ಬಚ್ಚನ್ ರವರು ಇದೇ ತಿಂಗಳ 27ನೇ ಜನವರಿ 2015, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಕೂಡ ಉಪಸ್ಥಿತರಿದ್ದರು. 
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಜಯಾ ಬಚ್ಚನ್ ರವರನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆಯವರು ಕೂಡ ಉಪಸ್ಥಿತರಿದ್ದರು. 

 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, January 26, 2015

ಗಣರಾಜ್ಯೋತ್ಸವದ ಅಂಗವಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಕ್ರೀಡಾ ಶಿಕ್ಷಕ ಶ್ರೀ.ರಾಜೇಂದ್ರ ಕೋಕಡೆಯವರಿಗೆ ಸನ್ಮಾನ - ಕೃಪೆ: ಸಾಯಿಅಮೃತಧಾರಾ.ಕಾಂ

ಗಣರಾಜ್ಯೋತ್ಸವದ ಅಂಗವಾಗಿ ಇದೇ ತಿಂಗಳ  26ನೇ ಜನವರಿ 2015, ಸೋಮವಾರ ದಂದು  ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಕ್ರೀಡಾ ಶಿಕ್ಷಕ ಶ್ರೀ.ರಾಜೇಂದ್ರ ಕೋಕಡೆಯವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆಯವರುಗಳು ಉಪಸ್ಥಿತರಿದ್ದರು. 


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಕನ್ನಡಕ್ಕೆ: ಶ್ರೀಕಂಠ ಶರ್ಮ  

Sunday, January 25, 2015

ಶ್ರೀ ಸಾಯಿಬಾಬಾ ಸಂಸ್ಥಾನದ ವಸತಿ ಯೋಜನೆಗೆ ISO 9001:2008 ಪ್ರಮಾಣ ಪತ್ರದ ನೀಡಿಕೆ - ಕೃಪೆ:ಸಾಯಿಅಮೃತಧಾರಾ. ಕಾಂ

ಇದೇ ತಿಂಗಳ 24ನೇ ಜನವರಿ 2015, ಶನಿವಾರ ದಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ವಸತಿ ಯೋಜನೆಗೆ ISO 9001:2008 ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಈ ಪ್ರತಿಷ್ಟಿತ ಪ್ರಮಾಣ ಪತ್ರವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಸಂಸ್ಥಾನದ ಪರವಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ದಾನಿಗಳಾದ ಶ್ರೀ.ಸಿ.ಕೇಶವ ಮೂರ್ತಿ, ಶ್ರೀ.ಆರ್.ಲಕ್ಷ್ಮಣ್ ದೇವ್, ಶ್ರೀ.ಎಸ್. ಮೋಹನ್ ರೆಡ್ಡಿ, ಶ್ರೀ.ಪಿ.ಚಂದ್ರಶೇಖರ ರೆಡ್ಡಿ ಮತ್ತು ಇತರ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. 

ಮರಾಠಿಯಿಂದ ಆಂಗ್ಲಭಾಷೆಗೆ: ಶ್ರೀ,ನಾಗರಾಜ್ ಅನ್ವೇಕರ್, ಬೆಂಗಳೂರು
ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಜಿಲ್ಲಾವಾರು ಆಶುಭಾಷಣ ಸ್ಪರ್ಧೆಯಲ್ಲಿ ಜಯಗಳಿಸಿದ ಸಾಯಿಬಾಬಾ ಬಾಲಕಿಯರ ಶಾಲೆಯ ಕುಮಾರಿ.ಪೋತೆದಾರ್ ಪೂಜಾ ಶುಭ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಬಳಿಯಿರುವ ಶ್ರೀರಾಮಪುರದ ಡಿ.ಡಿ.ಕಚೋಲೆ ಪ್ರೌಢಶಾಲೆಯು ಇತ್ತೀಚೆಗೆ ಮಾಜಿ ಕೇಂದ್ರ ಕೃಷಿ ಸಚಿವ ಡಾ.ಅಣ್ಣಾಸಾಹೇಬ್ ಶಿಂಧೆಯವರ ಸ್ಮರಣಾರ್ಥವಾಗಿ ಜಿಲ್ಲಾವಾರು ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪಧೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಸಾಯಿಬಾಬಾ ಬಾಲಕಿಯರ ಶಾಲೆಯ ಕುಮಾರಿ.ಪೋತೆದಾರ್ ಪೂಜಾ ಶುಭ ಮೊದಲ ಸ್ಥಾನವನ್ನು ಗಳಿಸಿ 1001/- ರೂಪಾಯಿ ನಗದು ಹಾಗೂ ಪ್ರಶಂಸಾ ಪತ್ರವನ್ನು ತನ್ನದಾಗಿಸಿಕೊಂಡಳು. ಈ ವಿಷಯವನ್ನು 19ನೇ ಜನವರಿ 2015, ಸೋಮವಾರದಂದು ನಡೆದ ಪತ್ರಿಕಾ ಪ್ರಕಟಣೆಯಲ್ಲಿ ಸುದ್ಧಿಗಾರರಿಗೆ ತಿಳಿಸಲಾಯಿತು. 

ಈ ಸ್ಪರ್ಧೆಯನ್ನು 16ನೇ ಜನವರಿ 2015 ರಂದು ಶ್ರೀರಾಮಪುರದ ಡಿ.ಡಿ.ಕಚೋಲೆ ಪ್ರೌಢಶಾಲೆಯು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯಲ್ಲಿ ಸಾಯಿಬಾಬಾ ಬಾಲಕಿಯರ ಶಾಲೆಯ ಕುಮಾರಿ.ಕಾಳೆ ಪ್ರಾಜಕ್ತಾ, ಕುಮಾರಿ.ಪಾಟೀಲ್ ವೈಷ್ಣವಿ, ಕುಮಾರಿ.ಸನಪ್ ಸಿನ್ಹಾ, ಕುಮಾರಿ. ಪೋತೆದಾರ್ ಪೂಜಾ ಶುಭ ಹಾಗೂ ಸಾಯಿಬಾಬಾ ಆಂಗ್ಲ ಮಾಧ್ಯಮಿಕ ಶಾಲೆಯ  ಕುಮಾರಿ.ವಾಣಿ ಸಾಯಿ ಪ್ರಸಾದ್ ವಸಂತ್ ಹಾಗೂ ಕುಮಾರಿ.ಶೃತಿ ವಸಂತ್ ರವರುಗಳು ಭಾಗವಹಿಸಿದ್ದರು. ಆಶುಭಾಷಣ ಸ್ಪರ್ಧೆಗೆ " “ Save Girl Save Nation“, “ Swatcchhata  Abhiyan” ಹಾಗೂ “contribution in Education field by Karmavir Bhaurao Patil” ವಿಷಯಗಳನ್ನು ವಿದ್ಯಾರ್ಥಿನಿಯರು ಆಯ್ದುಕೊಂಡಿದ್ದರು. ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಮಾತನಾಡಿ ತಮ್ಮ ಆಶುಭಾಷಣ ಪ್ರೌಢಿಮೆಯನ್ನು ಮೆರೆದು ನೆರದಿದ್ದ ಸಭಿಕರ ಹೃದಯಗಳನ್ನು ಸೂರೆಗೊಂಡರು. ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಮತ್ತು ಜಿಲ್ಲಾ ನ್ಯಾಯಾಧೀಶರಾದ ಶ್ರೀ.ವಿನಯ್ ಜೋಶಿ, ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಶಿಕ್ಷಣ ವಿಭಾಗದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ದಿಲೀಪ್ ಉಗಳೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ವಿ.ಗಮೆ, ಶ್ರೀ.ಎಸ್.ಎನ್. ಗಾರ್ಕಲ್,ಶ್ರೀ.ಯು.ಪಿ.ಗೋಂದ್ಕರ್,  ಪ್ರಾಂಶುಪಾಲರಾದ ಶ್ರೀಮತಿ.ನೀತಾ ಚವಂಕೆಯವರುಗಳು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಶುಭಾಶಯ ಕೋರಿದರು. ಈ ವಿದ್ಯಾರ್ಥಿನಿಯರ ಯಶಸ್ಸಿಗೆ ವಿದ್ಯಾರ್ಥಿನಿಯರ ಗುರುಗಳಾದ ಶ್ರೀ.ವಸಂತ್ ಕಿಶನ್ ವಾಣಿಯವರು ಕಾರಣೀಭೂತರಾಗಿರುತ್ತಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, January 18, 2015

ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣಗಾವ್ ನ ಶಿರಡಿ ಸಾಯಿಬಾಬಾ ಮಂದಿರ - ದ್ವಾರಕಾಮಾಯಿ ಸಾಯಿಬಾಬಾ ಮಂದಿರ, ಸಾಯಿ ಭಕ್ತ ಮಂಡಲ ಟ್ರಸ್ಟ್ (ನೋಂದಣಿ), ನಾರಾಯಣಗಾವ್ - 410 504, ಜುನ್ನರ್ ತಾಲೂಕು, ಪುಣೆ ಜಿಲ್ಲೆ, ಮಹಾರಾಷ್ಟ್ರ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ  ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ  ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4  ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ಈ ಮಂದಿರವನ್ನು 2008ನೇ ಇಸವಿಯ ಅಕ್ಟೋಬರ್ ತಿಂಗಳಿನ ಪವಿತ್ರ ವಿಜಯದಶಮಿಯ ದಿನದಂದು ಹಿಮಾಲಯದ ಮೌನಿ ಬಾಬಾ ಮತ್ತು ಸಾಯಿ ಮಹಾಭಕ್ತ ನಾನಾ ಸಾಹೇಬ್ ನಿಮೋಣ್ಕರ್ ರವರ ಮರಿಮಗನಾದ ನಂದಕುಮಾರ್ ರೇವನ್ನಾಥ್ ದೇಶಪಾಂಡೆ ನಿಮೋಣ್ಕರ್ ರವರುಗಳು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಶ್ರೀ. ವಿನಾಯಕ ರಸಾಲ್ ಎಂಬ ಸಾಯಿಭಕ್ತರು ಮಂದಿರದ ಟ್ರಸ್ಟ್ ಗೆ ದಾನವಾಗಿ ನೀಡಿರುವ  ಅರ್ಧ ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಶಿವಾಜಿ ಬೋರಾಡೆಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ಸಾಯಿ ಭಕ್ತರು ನೋಡಬಹುದು. ಅಲ್ಲದೇ ಕಪ್ಪು ಶಿಲೆಯ ನಂದಿ ಹಾಗೂ ಪವಿತ್ರ ಧುನಿಯನ್ನು ಸಹ ಮಂದಿರದಲ್ಲಿ ಸ್ಥಾಪಿಸಲಾಗಿದೆ. ಈ ನಂದಿಯ ವಿಗ್ರಹದ ಪ್ರತಿಷ್ಟಾಪನೆಯ ಬಗ್ಗೆ ಒಂದು ಸ್ವಾರಸ್ಯಕರವಾದ ಕಥೆಯಿದ್ದು ಅದು ಈ ರೀತಿಯಿದೆ: ಶ್ರೀ ಸಾಯಿಬಾಬಾರವರು ತಾವು ಸಮಾಧಿಯಾಗುವುದಕ್ಕೆ ಕೆಲವು ದಿನಗಳ ಹಿಂದೆ ಮಹಾಭಕ್ತ ಭೀಮಾಜಿ ಪಾಟೀಲರಿಗೆ ನಿಜವಾದ ನಂದಿಯೊಂದನ್ನು ನೀಡಿದ್ದರು. ಈ ನಂದಿಯು ಕೆಲವು ವರ್ಷಗಳ ಬಳಿಕ ಮರಣ ಹೊಂದಿತು. ಈ ನಂದಿಯ ಸಮಾಧಿಯನ್ನು ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಮಾಡಲಾಗಿದೆ ಹಾಗೂ ಆ ಸಮಾಧಿಯ ಮೇಲೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 






ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 4:00 ರಿಂದ ಮಧ್ಯಾನ್ಹ  1:00 ಗಂಟೆಯವರೆಗೂ ಹಾಗೂ ಮಧ್ಯಾನ್ಹ 3:00 ರಿಂದ ರಾತ್ರಿ 11:00 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 4:00 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  06:00 PM
ಶೇಜಾರತಿ        : 10:30 PM

ವಿಶೇಷ ಉತ್ಸವದ ದಿನಗಳು: 

1.ಶ್ರೀರಾಮನವಮಿ.
2.ಗುರುಪೂರ್ಣಿಮೆ.
3.ವಿಜಯದಶಮಿ - ಮಂದಿರದ ವಾರ್ಷಿಕೋತ್ಸವ. 

ಮಂದಿರದ ಟ್ರಸ್ಟ್ ನ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಮಂದಿರದ ಟ್ರಸ್ಟ್ ನ ವತಿಯಿಂದ ನಾರಾಯಣಗಾವ್ ನ ಬಡವರಿಗೆ ಉಚಿತ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ. 
ಮಂದಿರದ ಟ್ರಸ್ಟ್ ನ ವತಿಯಿಂದ ಪುಣೆ ಮತ್ತು ಕೊಂಕಣ ಪ್ರದೇಶದಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪಾದಯಾತ್ರಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು  ಹಮ್ಮಿಕೊಳ್ಳಲಾಗುತ್ತಿದೆ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ  ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ  ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4  ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ವಿಳಾಸ:

ದ್ವಾರಕಾಮಾಯಿ ಸಾಯಿಬಾಬಾ ಮಂದಿರ, 
ಸಾಯಿ ಭಕ್ತ ಮಂಡಲ ಟ್ರಸ್ಟ್ (ನೋಂದಣಿ), 
ನಾರಾಯಣಗಾವ್ - 410 504,  
ಜುನ್ನರ್ ತಾಲೂಕು, 
ಪುಣೆ  ಜಿಲ್ಲೆ, 
ಮಹಾರಾಷ್ಟ್ರ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಶಿವಾಜಿ ಬೋರಾಡೆ/ಶ್ರೀ.ಕಿರಣ್ ಬಾವು/ಶ್ರೀ. ಹರಿ ಓಂ ಬ್ರಹ್ಮೆ

ದೂರವಾಣಿ ಸಂಖ್ಯೆ: 

+91 98605 86582/|91 73878 51007/ +91 98603 89028/

ಮಾರ್ಗಸೂಚಿ:

ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ  ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ  ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4  ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಪುಣೆ-ನಾಸಿಕ್ ಹೆದ್ದಾರಿಯಲ್ಲಿ  ನೇರವಾಗಿ ಚಲಿಸಿ ನಾಸಿಕ್  ಫತಾಹ್ ನ ಬಳಿ ಬಲಭಾಗದ ರಸ್ತೆಗೆ ತಿರುಗಿ ನಂತರ ಅಲ್ಲಿಂದ ಸುಮಾರು 75 ಕಿಲೋಮೀಟರ್ ಕ್ರಮಿಸಿದರೆ ನಾರಾಯಣಗಾವ್ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಬಿಹಾರ ರಾಜ್ಯದ ಮುಖ್ಯಮಂತ್ರಿ ಶ್ರೀ.ಜಿತನ್ ರಾಮ್ ಮಂಜಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಬಿಹಾರ ರಾಜ್ಯದ ಮುಖ್ಯಮಂತ್ರಿ ಶ್ರೀ.ಜಿತನ್ ರಾಮ್ ಮಂಜಿ ಇದೇ ತಿಂಗಳ 18ನೇ ಜನವರಿ 2015, ಭಾನುವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ  ದರ್ಶನವನ್ನು ಪಡೆದರು. ಆ ಸಮಯದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ  ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರುಗಳು ಕೂಡ ಉಪಸ್ಥಿತರಿದ್ದರು. 


ಸಮಾಧಿಯ ದರ್ಶನದ ನಂತರ ಮುಖ್ಯಮಂತ್ರಿಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ  ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, January 17, 2015

ಶ್ರೀ ಸಾಯಿಬಾಬಾ ಸಂಸ್ಥಾನದ ನೂತನ ಅಧ್ಯಕ್ಷ ಹಾಗೂ ಜಿಲ್ಲಾ ನ್ಯಾಯಾಧೀಶ ಶ್ರೀ.ವಿನಯ್ ಜೋಶಿಯವರಿಂದ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ನೂತನ ಅಧ್ಯಕ್ಷ ಹಾಗೂ ಜಿಲ್ಲಾ ನ್ಯಾಯಾಧೀಶ ಶ್ರೀ.ವಿನಯ್ ಜೋಶಿಯವರು ತಮ್ಮ ಧರ್ಮಪತ್ನಿಯೊಂದಿಗೆ ಇದೇ ತಿಂಗಳ 17ನೇ ಜನವರಿ 2015, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ  ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ.ಶಶಿಕಾಂತ ಕುಲಕರ್ಣಿಯವರಿಗೆ ಬೀಳ್ಕೊಡುಗೆ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್  ಶಿಂಧೆಯವರುಗಳು ಇದೇ ತಿಂಗಳ 17ನೇ ಜನವರಿ 2015, ಶನಿವಾರ ದಂದು ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾದ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಮತ್ತು ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಶಶಿಕಾಂತ್ ಕುಲಕರ್ಣಿಯವರನ್ನು ಸನ್ಮಾನಿಸಿದರು.  


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, January 16, 2015

ಶಿರಡಿ ಸಂಸ್ಥಾನದ ವತಿಯಿಂದ ಸಾಯಿ ಪ್ರಸಾದಾಲಯದ ಆವರಣದಲ್ಲಿ ಜೈವಿಕ ಅನಿಲ ಘಟಕದ ಸ್ಥಾಪನೆಗೆ ಭೂಮಿ ಪೂಜಾ ಕಾರ್ಯಕ್ರಮದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಇದೇ ತಿಂಗಳ  ಮಕರ ಸಂಕ್ರಾಂತಿಯ ಶುಭ ದಿನವಾದ 15ನೇ ಜನವರಿ 2015, ಗುರುವಾರ ದಂದು ಸಾಯಿ ಪ್ರಸಾದಾಲಯದ ಆವರಣದಲ್ಲಿ ಐದು ಟನ್ ಸಾಮರ್ಥ್ಯವನ್ನು ಹೊಂದಿರುವ ಸುಮಾರು 58 ಲಕ್ಷ ರೂಪಾಯಿ ವೆಚ್ಚ ತಗಲುವ ಜೈವಿಕ ಅನಿಲ ಘಟಕದ ಸ್ಥಾಪನೆಗೆ ಭೂಮಿ ಪೂಜೆಯನ್ನು ನೆರವೇರಿಸಿದರು. 


ಈ ಸಂದರ್ಭದಲ್ಲಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಸೂರ್ಯಭಾನ್ ಗಮೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ದಿಲೀಪ್ ಉಗಳೆ, ಉಪ ಅಭಿಯಂತರರಾದ ಶ್ರೀ.ವಿಜಯ್ ರೋಹಮಾರೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಸಾಯಿ ಪ್ರಸಾದಾಲಯದ ಅಧೀಕ್ಷಕರಾದ ಶ್ರೀ.ವಿಜಯ್ ಸಿಂಕಾರ್, ನೀರು ಸರಬರಾಜು ವಿಭಾಗದ ಮುಖ್ಯಸ್ಥರಾದ ಶ್ರೀ.ರಾಜೇಂದ್ರ ಜಗ್ತಪ್ ಮತ್ತು ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ.ಅತುಲ್ ವಾಗ್ ರವರುಗಳು ಕೂಡ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಇಂಧನದ ವೆಚ್ಚವನ್ನು ಉಳಿಸುವ ಸಲುವಾಗಿ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಯ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನದ ಮೇಲುಸ್ತುವಾರಿ ಸಮಿತಿಯು ಸಾಯಿ ಭಕ್ತರು ನೀಡಿದ ಉದಾರ ದೇಣಿಗೆಯ ಸಹಾಯದಿಂದ  ಪ್ರಸಾದಾಲಯದ ಆವರಣದಲ್ಲಿ   ಜೈವಿಕ ಅನಿಲ ಘಟಕವನ್ನು ಸ್ಥಾಪಿಸಲು ಒಪ್ಪಿಗೆ ನೀಡಿತು. ಈ ಘಟಕ ಸ್ಥಾಪನೆಗೆ ಸರಿ ಸುಮಾರು 58 ಲಕ್ಷ ರೂಪಾಯಿ ತಗುಲಲಿದ್ದು ಸಾಯಿ ಭಕ್ತರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ ಪ್ರತಿವರ್ಷ ಶ್ರೀ ಸಾಯಿಬಾಬಾ ಸಂಸ್ಥಾನದ ಬೊಕ್ಕಸಕ್ಕೆ 25 ಲಕ್ಷ ರೂಪಾಯಿಗಳ ಉಳಿತಾಯವಾಗಲಿದೆ ಎಂದರು. ಈ ಘಟಕದ ಸ್ಥಾಪನೆಯ ಗುತ್ತಿಗೆಯನ್ನು ಪುಣೆಯ ಇನ್ಪ್ರೊಟೆಕ್ ಸಲ್ಯೂಷನ್ಸ್ ಎಂಬ ಪ್ರತಿಷ್ಟಿತ ಸಂಸ್ಥೆಗೆ ವಹಿಸಿದ್ದು ಇನ್ನು ಕೇವಲ ಮೂರು ತಿಂಗಳಿನಲ್ಲಿ ಈ ಜೈವಿಕ ಅನಿಲ ಘಟಕವು ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಸಹ ತಿಳಿಸಿದರು.  

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 


Wednesday, January 14, 2015

ಕರ್ನಾಟಕದ ಪ್ರಪ್ರಥಮ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ

ಬೆಂಗಳೂರಿನ ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್ (ನೋಂದಣಿ) ಕರ್ನಾಟಕದ ಪ್ರಪ್ರಥಮ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವನ್ನು  ಇದೇ ತಿಂಗಳ 23ನೇ ಜನವರಿ 2015, ಶುಕ್ರವಾರ ದಿಂದ 26ನೇ ಜನವರಿ 2015, ಸೋಮವಾರ ದವರಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಲೇ ಔಟ್, ಕುಲುಮೆ ಪಾಳ್ಯದಲ್ಲಿ ಹಮ್ಮಿಕೊಂಡಿದ್ದಾರೆ.  

ಕಾರ್ಯಕ್ರಮದ ವಿವರ ಇರುವ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:





ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ  ಕೃಪೆಗೆ ಪಾತ್ರರಾಗಬೇಕೆಂದು ಮಂದಿರದ ಆಡಳಿತ ಮಂಡಳಿಯ ಸದಸ್ಯರು ಈ ಮೂಲಕ ಮನವಿಯನ್ನು ಮಾಡಿಕೊಳ್ಳುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, January 13, 2015

ಖ್ಯಾತ ಕಲಾವಿದೆ ಶ್ರೀಮತಿ.ಜಯ ಮಲ್ಹಾರ್ ಮತ್ತು ಇತರ ಕಲಾವಿದರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಕಲಾವಿದೆ ಶ್ರೀಮತಿ.ಜಯ ಮಲ್ಹಾರ್ ಮತ್ತು  ಇತರ ಕಲಾವಿದರ ತಂಡವು ಇದೇ ತಿಂಗಳ 13ನೇ ಜನವರಿ 2015, ಮಂಗಳವಾರ ದಂದು  ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಜಯ ಮಲ್ಹಾರ್ ಮತ್ತು ಇತರ ಕಲಾವಿದರುಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, January 10, 2015

ನೀರು ಸರಬರಾಜು ಮತ್ತು ನಿರ್ಮಲೀಕರಣ ರಾಜ್ಯ ಸಚಿವ ಶ್ರೀ.ಬಾಬನರಾವ್ ಲೋಣಿಕರ್ ಶಿರಡಿ ಭೇಟಿ - ಕೃಪೆ: ಸಾಯಿ ಅಮೃತಧಾರಾ.ಕಾಂ

ನೀರು ಸರಬರಾಜು ಮತ್ತು ನಿರ್ಮಲೀಕರಣ ರಾಜ್ಯ ಸಚಿವರಾದ ಶ್ರೀ.ಬಾಬನರಾವ್ ಲೋಣಿಕರ್ ರವರು ಇದೇ ತಿಂಗಳ 10ನೇ ಜನವರಿ 2015,ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, January 9, 2015

ನಲವತ್ತು ಕೆನಡಾ ಸಾಯಿ ಭಕ್ತರ ಶಿರಡಿ ಭೇಟಿ - ಕೃಪೆ: ಸಾಯಿ ಅಮೃತಧಾರಾ.ಕಾಂ

ನಲವತ್ತು ಸಾಯಿ ಭಕ್ತರು ಇದೇ ತಿಂಗಳ 9ನೇ ಜನವರಿ 2015,ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಅವರುಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಸನ್ಮಾನಿಸಿದರು. 


ಕನ್ನಡ ಅನುವಾದ:ಶ್ರೀಕಂಠ ಶರ್ಮ 

Sunday, January 4, 2015

ಪ್ರಖ್ಯಾತ ಹಿಂದಿ ಮತ್ತು ಮರಾಠಿ ಚಲನಚಿತ್ರ ನಟ ಶ್ರೀ.ರಮೇಶ್ ದೇವ್ ಶಿರಡಿ ಭೇಟಿ - ಕೃಪೆ:ಸಾಯಿಅಮೃತಧಾರಾ.ಕಾಂ

ಪ್ರಖ್ಯಾತ ಹಿಂದಿ ಮತ್ತು ಮರಾಠಿ ಚಲನಚಿತ್ರ ನಟರಾದ ಶ್ರೀ.ರಮೇಶ್ ದೇವ್ ರವರು  ಇದೇ ತಿಂಗಳ 4ನೇ ಜನವರಿ 2015, ಭಾನುವಾರ ದಂದು ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಸಚಿವ ಶ್ರೀ.ಹರ್ಷವರ್ಧನ್ ರವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಸಚಿವರಾದ ಶ್ರೀ.ಹರ್ಷವರ್ಧನ್ ರವರು ಇದೇ ತಿಂಗಳ 4ನೇ ಜನವರಿ 2015, ಭಾನುವಾರ ದಂದು ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 


Thursday, January 1, 2015

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊಸ ವರ್ಷ 2015 ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಹೊಸ ವರ್ಷದ ಮೊದಲನೆಯ ದಿನವಾದ  1ನೇ ಜನವರಿ 2015, ಗುರುವಾರ ದಂದು ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ.ಶಿವರಾಜ್ ಸಿಂಗ್ ಚವಾಣ್ ರವರು ತಮ್ಮ ಕುಟುಂಬ ಸಮೇತರಾಗಿ ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ  ಶ್ರೀ.ರಾಜೇಂದ್ರ ಜಾಧವ್ ಮತ್ತು ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರುಗಳು ಸಹ ಉಪಸ್ಥಿತರಿದ್ದರು. 


ಹೊಸ ವರ್ಷದ ಅಂಗವಾಗಿ ಬೆಂಗಳೂರಿನ ನಿವಾಸಿಯಾದ ಶ್ರೀ.ಅನಿಲ್ ಕುಮಾರ್ ರವರು ನೀಡಿದ ದೇಣಿಗೆಯ ಸಹಾಯದಿಂದ ಶ್ರೀ ಸಾಯಿಬಾಬಾ ಸಮಾಧಿ ಮಂದಿರ ಹಾಗೂ ಸುತ್ತಮುತ್ತಲ ಅವರಣವನ್ನು ಸುಂದರವಾದ ಹೂವು ಮತ್ತು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. 


ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಶಿರಡಿಗೆ ಸಾಯಿ ಭಕ್ತ ಸಾಗರವೇ ಹರಿದು ಬಂದಿತ್ತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ