Friday, August 30, 2013

ಶಿವಸೇನಾ ನಾಯಕ ಉದ್ಧವ ಠಾಕ್ರೆ ಶಿರಡಿ ಭೇಟಿ - ಕೃಪೆ:ಸಾಯಿಅಮೃತಧಾರಾ.ಕಾಂ

ಶಿವಸೇನಾ ನಾಯಕ ಶ್ರೀ.ಉದ್ಧವ ಠಾಕ್ರೆಯವರು ಇದೇ ತಿಂಗಳ 24ನೇ ಆಗಸ್ಟ್ 2013, ಶನಿವಾರದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿ ಭೇಟಿ ನೀಡಿ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಸಮಾಧಿಯ ದರ್ಶನದ ನಂತರ ಶ್ರೀ.ಉದ್ಧವ ಠಾಕ್ರೆ ಹಾಗೂ ಅವರ ಧರ್ಮಪತ್ನಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ ರಾವ್ ಮಾನೆಯವರು ಸನ್ಮಾನಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಸ್ಥಳೀಯ ನೃತ್ಯ ರಸಿಕರ ಸಂಘ ಹಾಗೂ ಶಿರಡಿ ಗ್ರಾಮಸ್ಥರ ಸಹಯೋಗದೊಂದಿಗೆ ಇದೇ ತಿಂಗಳ 7ನೇ ಆಗಸ್ಟ್ 2013 ರಿಂದ 14ನೇ ಆಗಸ್ಟ್ 2013 ರವರೆಗೆ  ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣವನ್ನು ಆಯೋಜಿಸಿತ್ತು. ಒಂದು ವಾರಗಳ ಕಾಲ ನಡೆದ ಈ ಮಹಾಪಾರಾಯಣದಲ್ಲಿ 4000ಕ್ಕೂ ಹೆಚ್ಚು ಸಾಯಿ ಭಕ್ತರು ಪಾಲ್ಗೊಂಡಿದ್ದರು. 



 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, August 2, 2013

ಚಿಕ್ಕಮಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ (ನೋಂದಣಿ), ಎಂ.ಜಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಹತ್ತಿರ, ಚೊಕ್ಕಣ್ಣ ರಸ್ತೆ, ಚಿಕ್ಕಮಂಗಳೂರು-577 101, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು:


ಈ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಮಂಗಳೂರು ನಗರದ ಎಂ.ಜಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಹತ್ತಿರ ಹಾಗೂ ಚೊಕ್ಕಣ್ಣ ರಸ್ತೆಯಲ್ಲಿ ಇರುತ್ತದೆ. ಈ ದೇವಾಲಯವನ್ನು ಶ್ರೀ.ನಾಗೇಶ್ ರವರ ವಂಶಸ್ಥರು ನೀಡಿರುವ ಸ್ಥಳದಲ್ಲಿ ನಿರ್ಮಿಸಲಾಗಿದೆ. 

ಈ ದೇವಾಲಯದಲ್ಲಿ ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ಪೂಜಿಸುತ್ತಿದ್ದ ಮಣ್ಣಿನ ಸಾಯಿಬಾಬಾರವರ ವಿಗ್ರಹವಿತ್ತು. ಟ್ರಸ್ಟ್ ನವರು ಈ ದೇವಾಲಯಕ್ಕೆ ಇನ್ನು ಹೆಚ್ಚಿನ ಮೆರಗು ನೀಡಬೇಕೆಂದು ಮನಸ್ಸು ಮಾಡಿ ರಾಜಸ್ತಾನದ ಜಯಪುರದಿಂದ ಅಮೃತ ಶಿಲೆಯಲ್ಲಿ ಮಾಡಿದ ದ್ವಾರಕಾಮಾಯಿ ಭಂಗಿಯ ವಿಗ್ರಹವನ್ನು ಇತ್ತಿಚೆಗೆ ತಂದು ದೇವಾಲಯದ ಪ್ರಾಂಗಣದಲ್ಲಿರುವ ಒಂದು ಸಣ್ಣ ಶೆಡ್ ನಲ್ಲಿ ಸ್ಥಾಪಿಸಿದ್ದಾರೆ. 
ದೇವಾಲಯದ ಉದ್ಘಾಟನೆಯನ್ನು ಜನವರಿ 1996 ನೇ ಇಸವಿಯಲ್ಲಿ  ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ ನಲ್ಲಿ 5.4  ಅಡಿ ಎತ್ತರದ ಸುಂದರ ಅಮೃತಶಿಲೆಯ ದ್ವಾರಕಾಮಾಯಿ ಭಂಗಿಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.ಈ ಸ್ಥಳವು ತುಂಬಾ ಚಿಕ್ಕದಾಗಿರುವುದರಿಂದ ಹಾಗೂ ದಿನೇ ದಿನೇ  ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು  ಟ್ರಸ್ಟ್ ನ ಸದಸ್ಯರುಗಳು ಇದೇ ಸ್ಥಳದಲ್ಲಿ ಒಂದು ಬೃಹತ್ ಮಂದಿರವನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದಾರೆ.

ದೇವಾಲಯದ ಪ್ರಾಂಗಣದಲ್ಲಿರುವ ಪವಿತ್ರ ಬೇವಿನ  ಮರದ ಕೆಳಗೆ ಕಪ್ಪುಶಿಲೆಯ ನಾಗದೇವರ ವಿಗ್ರಹಗಳು ಹಾಗೂ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಪಾದುಕೆಗಳ ಬಗ್ಗೆ ಒಂದು ಕುತೂಹಲಕಾರಿ ಕತೆಯಿದೆ. ಅದೇನೆಂದರೆ, ಭಗವಾನ್ ಶ್ರೀರಾಮಚಂದ್ರ ತಾನು ಕೈಗೊಂಡ ವನವಾಸದ ಸಮಯದಲ್ಲಿ ಈ ಸ್ಥಳದಲ್ಲಿ ಸೀತಾ ಮಾತೆ ಹಾಗೂ ಲಕ್ಷ್ಮಣರೊಂದಿಗೆ ಈ ಸ್ಥಳದಲ್ಲಿ ಸ್ವಲ್ಪ  ಕಾಲ ವಿಶ್ರಮಿಸಿದ್ದನೆಂದು  ನಾಡಿ ಶಾಸ್ತ್ರದಿಂದ ಬೆಳಕಿಗೆ ಬಂದಿರುತ್ತದೆ. ಸ್ವತಃ ಶಿರಡಿ ಸಾಯಿಬಾಬಾರವರೇ ಶಿವಮೊಗ್ಗದ ನಿವಾಸಿಯಾದ ಮಾತಾ ಸ್ವಸ್ತಿಯವರ ಕನಸಿನಲ್ಲಿ ಕಾಣಿಸಿಕೊಂಡು ಈ ಸ್ಥಳದಲ್ಲಿರುವ ಪವಿತ್ರ ಬೇವಿನ ಮರದ ಕೆಳಗಡೆಯಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸುವಂತೆ ಆಜ್ಞಾಪಿಸಿರುತ್ತಾರೆ.





ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ದೇವಾಲಯದ ಸಮಯ:

ಬೆಳಿಗ್ಗೆ : 05:15 ರಿಂದ 12:00.
ಸಂಜೆ : 6:00  ರಿಂದ 9:00.

ಆರತಿಯ ಸಮಯ:

ಕಾಕಡಾ ಆರತಿ : 05:30 ಗಂಟೆ
ಛೋಟಾ ಆರತಿ : 08:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಸಂಜೆ ಆರತಿ   : 07:00 ಗಂಟೆ
ಶೇಜಾರತಿ      : 08:00 ಗಂಟೆ


ಪ್ರತಿ ಗುರುವಾರ ಮಂದಿರಲ್ಲಿ ಸಾಯಿಬಾಬಾರವರಿಗೆ ವಿಶೇಷ ಆರತಿಯನ್ನು ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. 

ಪ್ರತಿ ಸೋಮವಾರದಂದು ಮಂದಿರದಲ್ಲಿ ರುದ್ರಾಭಿಷೇಕವನ್ನು ಮಾಡಲಾಗುತ್ತದೆ. 

ಪ್ರತಿ ವರ್ಷ ಸಾಯಿಬಾಬಾರವರ ಭಾವಚಿತ್ರದ ಮೆರವಣಿಗೆಯನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗುತ್ತದೆ. 
 
 
ವಿಶೇಷ ಉತ್ಸವದ ದಿನಗಳು:

ಸಂಕ್ರಾಂತಿ.
ಯುಗಾದಿ. 
ದೀಪಾವಳಿ.
ದಸರಾ.

ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ನಿಯಮಿತವಾಗಿ ಆಸ್ಪತ್ರೆ ಸೇವೆ, ಅನ್ನದಾನ, ವಸ್ತ್ರದಾನ ಹಾಗೂ ಅರ್ಹ ಬಡ ಮಕ್ಕಳಿಗೆ ಟ್ರಸ್ಟ್ ನಡೆಸುವ ಸಾಯಿ ಏಂಜಲ್ಸ್ ಶಾಲೆಯಲ್ಲಿ ಉಚಿತ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.

ದೇಣಿಗೆಗೆ ಮನವಿ:

ದೇವಾಲಯವಿರುವ ಸ್ಥಳವು ತುಂಬಾ ಚಿಕ್ಕದಾಗಿರುವುದರಿಂದ ಹಾಗೂ ದಿನೇ ದಿನೇ  ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು  ಟ್ರಸ್ಟ್ ನ ಸದಸ್ಯರುಗಳು ಇದೇ ಸ್ಥಳದಲ್ಲಿ ಒಂದು ಬೃಹತ್ ಮಂದಿರವನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದಾರೆ. ದೇವಾಲಯದ ಟ್ರಸ್ಟ್ ನಿಯಮಿತವಾಗಿ  ಹಮ್ಮಿಕೊಳ್ಳುತ್ತಿರುವ ಆಸ್ಪತ್ರೆ ಸೇವೆ, ಅನ್ನದಾನ, ವಸ್ತ್ರದಾನ ಹಾಗೂ ಅರ್ಹ ಬಡ ಮಕ್ಕಳಿಗೆ ಟ್ರಸ್ಟ್ ನಡೆಸುವ ಸಾಯಿ ಏಂಜಲ್ಸ್ ಶಾಲೆಯಲ್ಲಿ ಉಚಿತ ಶಿಕ್ಷಣ ಕಾರ್ಯಕ್ರಮಗಳಿಗಾಗಿ,  ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಎಜುಕೇಷನ್  ಅಂಡ್ ಚಾರಿಟಬಲ್ ಟ್ರಸ್ಟ್  (ನೋಂದಣಿ)", ಕಾರ್ಪೊರೇಶನ್  ಬ್ಯಾಂಕ್, ಚಿಕ್ಕಮಂಗಳೂರು ಶಾಖೆ, ಚಾಲ್ತಿ ಖಾತೆ ಸಂಖ್ಯೆ: 008101601000297 ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಎಂ.ಜಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಹತ್ತಿರ ಹಾಗೂ ಚೊಕ್ಕಣ್ಣ ರಸ್ತೆ.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಎಜುಕೇಷನ್  ಅಂಡ್ ಚಾರಿಟಬಲ್ ಟ್ರಸ್ಟ್  (ನೋಂದಣಿ), 
ಎಂ.ಜಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಹತ್ತಿರ, 
ಚೊಕ್ಕಣ್ಣ ರಸ್ತೆ,  ಚಿಕ್ಕಮಂಗಳೂರು-577 101, ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಶ್ರೀ ನಾಗೇಶ್ / ಶ್ರೀಮತಿ.ವಿಜಯ ನಾಗೇಶ್
 
ದೂರವಾಣಿ ಸಂಖ್ಯೆಗಳು:
+91 94494 13754/+91 8262 237297

ಇ-ಮೈಲ್ ವಿಳಾಸ:
shiradisaibabackm@gmail.com

ಮಾರ್ಗಸೂಚಿ:
ಚಿಕ್ಕಮಂಗಳೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ಈ ದೇವಾಲಯವು ಚಿಕ್ಕಮಂಗಳೂರು ನಗರದ ಎಂ.ಜಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಹತ್ತಿರದಲ್ಲಿರುವ ಚೊಕ್ಕಣ್ಣ ರಸ್ತೆಯಲ್ಲಿ ಇರುತ್ತದೆ.ಚಿಕ್ಕಮಂಗಳೂರು ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ