Sunday, July 22, 2012

ಸುಪ್ರಸಿದ್ಧ ಸಾಯಿಬಾಬಾ ಮಾಸಪತ್ರಿಕೆ "ಶ್ರೀ ಸಾಯಿ ಸುಮಿರನ್ ಟೈಮ್ಸ್" ನ ಸಂಪಾದಕಿ - ಕುಮಾರಿ.ಅಂಜು ಟಂಡನ್ - ಕೃಪೆ: ಸಾಯಿಅಮೃತಧಾರಾ.ಕಾಂ



ಕುಮಾರಿ.ಅಂಜು ಟಂಡನ್ ಅವರು ಶಿರಡಿ ಸಾಯಿಬಾಬಾರವರ ಬಗ್ಗೆ ನವದೆಹಲಿಯಿಂದ ಪ್ರಕಟಣೆಯಾಗುತ್ತಿರುವ  ಸುಪ್ರಸಿದ್ಧ ಮಾಸಪತ್ರಿಕೆ ಸಂಸ್ಥಾನದಿಂದ ಪ್ರಕಟಣೆಯಾಗುತ್ತಿರುವ "ಶ್ರೀ ಸಾಯಿ ಸುಮಿರನ್ ಟೈಮ್ಸ್" ನ ಸಂಪಾದಕಿ. ಇವರು ಅತ್ಯುತ್ತಮ ಬರಹಗಾರ್ತಿ ಹಾಗೂ ಸಾಯಿ ಭಕ್ತೆ.

ಇವರು 25ನೇ ಮೇ ಯಂದು ಪಂಜಾಬ್ ನ ಫಿರೋಜಪುರದಲ್ಲಿ ಜನಿಸಿದರು. ಇವರು ಚಿಕ್ಕಂದಿನಲ್ಲಿಯೇ ತಮ್ಮ ತಾಯಿ ತಂದೆಯರನ್ನು ಕಳೆದುಕೊಂಡರು. ಇವರ ತಂದೆಯವರು Military Engineering Service ನಲ್ಲಿದ್ದರು. ಇವರು ಸುಮಾರು 1997 ರಲ್ಲಿ ಸಾಯಿಭಕ್ತೆಯಾಗಿ ರೂಪುಗೊಂಡರು.

ಇವರು ಶಿರಡಿ ಸಾಯಿಬಾಬಾರವರ ತತ್ವ ಹಾಗೂ ಬೋಧನೆಯನ್ನು ಇಡೀ ಜಗತ್ತಿಗೆ ತಿಳಿಸುವ ಉದ್ದೇಶದಿಂದ "ಶ್ರೀ ಸಾಯಿ ಸುಮಿರನ್ ಟೈಮ್ಸ್" ಮಾಸಪತ್ರಿಕೆಯನ್ನು ಜುಲೈ 2005 ರಲ್ಲಿ ಪ್ರಾರಂಭಿಸಿದರು. ಈ ಪತ್ರಿಕೆಯನ್ನು ಜನಪ್ರಿಯಗೊಳಿಸಲು ಇವರು ಹಗಲೂ ರಾತ್ರಿ ಅವಿರತ ಶ್ರಮಪಟ್ಟು ಕೆಲಸ ಮಾಡಿದರು. ಇವರ ಮುಂದೆ ಅನೇಕ ಸಮಸ್ಯೆಗಳು ಎದುರಾದವು. ಆದರೂ ಇವರು ಸ್ವಲ್ಪವೂ ಧೃತಿಗೆಡದೇ ಎದುರಾದ ಎಲ್ಲಾ ಸಮಸ್ಯೆಗಳನ್ನು ಸಾಯಿಬಾಬಾರವರ ಆಶೀರ್ವಾದದಿಂದ ಎದುರಿಸಿ ಜಯಶೀಲರಾದರು. ಪ್ರಸ್ತುತ ಇವರು ಈ ಜನಪ್ರಿಯ ಮಾಸಪತ್ರಿಕೆಯನ್ನು ಬಹಳ ಸಮರ್ಥವಾಗಿ ನೆಡೆಸಿಕೊಂಡು ಹೋಗುತ್ತಿದ್ದಾರೆ.

ಇವರು ತಾವೇ ಖುದ್ದಾಗಿ ಪ್ರಪಂಚದಾದ್ಯಂತ ಸಂಚರಿಸಿ ಸಾಯಿ ಮಂದಿರ, ಸಾಯಿಬಾಬಾ ಕಾರ್ಯಕ್ರಮ, ಸಾಯಿ ವ್ಯಕ್ತಿಗಳು ಮತ್ತು ಸಾಯಿ ಭಕ್ತರು ಗಳನ್ನು ಭೇಟಿ ಮಾಡಿ ಆ ಮಾಹಿತಿಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ.  ಮಾಸಪತ್ರಿಕೆಯಲ್ಲಿ ಹಲವಾರು ವಿಶೇಷ ಸಾಯಿಲೀಲೆಗಳನ್ನು ಪ್ರಕಟ ಮಾಡುವ ಮುಖಾಂತರ ಅನೇಕ ಜನರು ಸಾಯಿಭಕ್ತರಾಗಿ ಪರಿವರ್ತನೆಗೊಳ್ಳುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸುತ್ತಿದ್ದಾರೆಂದರೆ ಅತಿಶಯೋಕ್ತಿಯಲ್ಲ! ಲಕ್ಷಾಂತರ ಸಾಯಿಭಕ್ತರು ಈ ಪತ್ರಿಕೆಯು ಇಂದು ಮೊದಲನೇ ಸ್ಥಾನದಲ್ಲಿದೆ. ಇದರಲ್ಲಿ ಸಾಯಿಬಾಬಾರವರ ಬಗ್ಗೆ ಪ್ರಕಟವಾಗುತ್ತಿರುವ ಲೇಖನಗಳನ್ನು ಮೆಚ್ಚಿ ಪ್ರಪಂಚದ ಎಲ್ಲಾ ಕಡೆಗಳಿಂದ ಸಾವಿರಾರು ಸಾಯಿಭಕ್ತರು ಪ್ರತಿನಿತ್ಯ ಪ್ರಶಂಸನೀಯ ಪತ್ರ ಮತ್ತು ಇ-ಮೈಲ್ ಗಳನ್ನು ಸಂಪಾದಕಿಗೆ ಕಳುಹಿಸುತ್ತಿದ್ದಾರೆ.

ಈ ಪತ್ರಿಕೆಯು ಭಾರತದ ಎಲ್ಲಾ ಭಾಗಗಳಿಗೂ ತಲುಪುತ್ತಿದೆಯಷ್ಟೇ ಅಲ್ಲದೆ ಹೊರದೇಶಗಳಾದ U.S.A., Australia, Singapore, Japan, New Zealand, London, Dubai, Nepal, Canada, Saudi Arabia, Malaysia ಮತ್ತಿತರ ದೇಶಗಳಿಗೂ ತಲುಪುತ್ತಿದೆ.

ಈ ಪತ್ರಿಕೆಯ ಪ್ರತಿಯನ್ನು ಪಡೆಯಲು ಸಾಯಿಭಕ್ತರು ದೂರವಾಣಿ ಸಂಖ್ಯೆ:+91 98180 23070 ಅಥವಾ ಇ-ಮೈಲ್ ವಿಳಾಸ:saisumirannews@gmail.com ಅನ್ನು ಸಂಪರ್ಕಿಸಬಹುದು.

ಪ್ರಶಸ್ತಿಗಳು / ಪುರಸ್ಕಾರಗಳು: 

ಇವರಿಗೆ 2010 ಇಸವಿಯಲ್ಲಿ ಶ್ರೇಷ್ಟ G-Times ಪ್ರಶಸ್ತಿ ಲಭಿಸಿರುತ್ತದೆ. ಅಲ್ಲದೆ, ದೇಶದಾದ್ಯಂತ ಇರುವ ಹಲವಾರು ಸಾಯಿ ಮಂದಿರಗಳಲ್ಲಿ ಇವರಿಗೆ ಸನ್ಮಾನ ಮಾಡಲಾಗಿದೆ.

ಕುಮಾರಿ.ಅಂಜು ಟಂಡನ್ ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಎಫ್-44/ಡಿ, ಎಂ.ಐ.ಜಿ.ಫ್ಲಾಟ್ಸ್, ಜಿ-8 ಬಡಾವಣೆ, 
ಹರಿನಗರ, ನವದೆಹಲಿ-110 064, ಭಾರತ.


ದೂರವಾಣಿ ಸಂಖ್ಯೆಗಳು:
+91 98180 23070


ಇ-ಮೈಲ್ ವಿಳಾಸ:
saisumirannews@gmail.com


ಫೇಸ್ ಬುಕ್ ಜೋಡಣೆ:
Anju Tandon


ಕನ್ನಡ ಅನುವಾದ: ಶ್ರೀಕಂಠ ಶರ್ಮ


ಸಂಕ್ಷಿಪ್ತ ಕನ್ನಡ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕರು  - ಶ್ರೀ.ಎನ್.ಎಸ್.ಅನಂತರಾಮು- ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಎನ್.ಎಸ್.ಅನಂತರಾಮು ಅವರು ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಣೆಯಾಗುತ್ತಿರುವ ಹೇಮಾಡಪಂತರ ಸಮಗ್ರ ಮರಾಠಿ "ಶ್ರೀ ಸಾಯಿ ಸಚ್ಚರಿತೆ" ಯನ್ನು ಕನ್ನಡಕ್ಕೆ ಸಂಕ್ಷಿಪ್ತ ರೂಪದಲ್ಲಿ ಅನುವಾದ ಮಾಡಿರುವ ಲೇಖಕರು. ಇವರು ಅತ್ಯುತ್ತಮ ಲೇಖಕರು ಹಾಗೂ ಸಾಯಿ ಭಕ್ತರು.

ಇವರು 17ನೇ ಜುಲೈ 1930 ರಂದು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಶ್ರೀಮತಿ.ರಂಗನಾಯಕಿ ಮತ್ತು ತಂದೆ ದಿವಂಗತ ಶ್ರೀ.ಎನ್.ಶ್ರೀನಿವಾಸ ಅಯ್ಯಂಗಾರ್. 

ಇವರು ಮೊದಲಿನಿಂದಲೂ ಓದಿನಲ್ಲಿ ಬಹಳ ಚುರುಕಾಗಿದ್ದು ಹಲವಾರು ಪದವಿಗಳನ್ನು ಸಂಪಾದಿಸಿದ್ದಾರೆ. ಅವುಗಳೆಂದರೆ: Bachelor of Science, Bachelor of Law, D.T.L., M.L., M.H.R., Diploma in Training and Development, Post Graduate Diploma in Foreign Trade, Diploma in Export & Import, Post Graduate Diploma in Environment & Ecology, Diploma in Public Relations, Advance Post Graduate Diploma in Transport, Post Graduate Diploma in Human Resource, Diploma in T.C.H.M ಮತ್ತು Computer Programming Level I, II and III. 

ಇವರು ಸಂತೇಬೆನ್ನೂರಿನ ಜಿಲ್ಲಾ ಬೋರ್ಡ್ ಪ್ರೌಢಶಾಲೆಯಲ್ಲಿ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ 1954 ರಲ್ಲಿ ಅಕೌಂಟೆಂಟ್ ಜನರಲ್ಸ್ ಕಛೇರಿಯ  ಕರ್ನಾಟಕ ವೃತ್ತದಲ್ಲಿ ಕೆಲಸಕ್ಕೆ ಸೇರಿ ಅನೇಕ ಹುದ್ದೆಗಳಲ್ಲಿ ದುಡಿದು 1988 ರಲ್ಲಿ ಹಿರಿಯ ಆಡಿಟ್ ಆಫೀಸರ್ ಆಗಿ ನಿವೃತ್ತರಾದರು. ನಿವೃತ್ತರಾದ ಮೇಲೆ 1988 ರಿಂದ ವಕೀಲಿ ವೃತ್ತಿಯನ್ನು ಆರಂಭಿಸಿ ಅಂದಿನಿಂದ ಇಂದಿನವರೆವಿಗೂ Taxation, Company Laws, Management & Investment ವಿಭಾಗದಲ್ಲಿ ಜನರಿಗೆ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು 1950 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.  1954 ನೇ ಇಸವಿಯಲ್ಲಿ ಸಾಯಿಬಾಬಾರವರ ಆಜ್ಞೆ ಮೇರೆಗೆ ಬೆಂಗಳೂರಿಗೆ ಬಂದು ಶಾಶ್ವತವಾಗಿ ನೆಲೆಸಿದರು. ಅಲ್ಲದೇ, ಹೇಮಾಡಪಂತರ ಸಮಗ್ರ ಮರಾಠಿ ಶ್ರೀ ಸಾಯಿ ಸಚ್ಚರಿತೆಯನ್ನು ಕನ್ನಡಕ್ಕೆ ಸಂಕ್ಷಿಪ್ತ ರೂಪದಲ್ಲಿ ಅನುವಾದ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಶಿರಡಿ ಸಾಯಿಬಾಬಾ ಸಂಸ್ಥಾನವು 1961 ರಲ್ಲಿ ಈ ಸಂಕ್ಷಿಪ್ತ "ಶ್ರೀ ಸಾಯಿ ಸಚ್ಚರಿತ್ರೆ" ಯನ್ನು ಪ್ರಕಟಗೊಳಿಸಿತು.

ಇವರು 1998 ರಲ್ಲಿ ಸಂತ ಕವಿ ದಾಸಗಣು ರವರ "ಶ್ರೀ ಸಾಯಿನಾಥ ಸ್ತವನ ಮಂಜರಿ" ಯನ್ನು ಕನ್ನಡಕ್ಕೆ ಅನುವಾದ ಮಾಡಿದರು. ಈ ಕೃತಿಯನ್ನು ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದವರು ಪ್ರಕಟಗೊಳಿಸಿದರು.

ಇವರು 2008 ರಲ್ಲಿ ಪರಮಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರ “Life of Saibaba” ಕೃತಿಯನ್ನು ಕನ್ನಡಕ್ಕೆ "ಶ್ರೀ ಸಾಯಿಬಾಬಾ ಜೀವನ ಚರಿತೆ" ಎಂಬ ಹೆಸರಿನಲ್ಲಿ ಅನುವಾದ ಮಾಡಿದರು. ಈ ಕೃತಿಯನ್ನು ಸಾಯಿ ಭಕ್ತರಾದ ಶ್ರೀ.ಬಿ.ಕೃಷ್ಣಮುರ್ತಿಯವರು ಬೆಂಗಳೂರಿನ ಅನೇಕ ಸಾಯಿಭಕ್ತರ ನೆರವಿನೊಂದಿಗೆ ಪ್ರಕಟಗೊಳಿಸಿದರು.

ಇವರು ಕನ್ನಡ ಸಂಕ್ಷಿಪ್ತ "ಶ್ರೀ ಸಾಯಿ ಸಚ್ಚರಿತ್ರೆ" ಯ ಆಡಿಯೋ ಧ್ವನಿಸುರಳಿಯ ಲೇಖಕರಾಗಿದ್ದಾರೆ.

ಇವರು 2011 ರಲ್ಲಿ ಕೃ.ಜಾ.ಭೀಷ್ಮರವರ "ಶ್ರೀ ಸಾಯಿ ಸಗುಣೋಪಾಸನ" ಆರತಿಯ ಪುಸ್ತಕವನ್ನು ಕನ್ನಡ ಅರ್ಥಗಳೊಂದಿಗೆ ಅನುವಾದ ಮಾಡಿದರು. ಇದನ್ನು ಮೈಸೂರಿನ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿಯ ಡಾ.ಸೀತಾಲಕ್ಷ್ಮಿಯವರು ಸಹ ಅನುವಾದಕರಾಗಿ ಪ್ರಕಟಗೊಳಿಸಿದರು.

ಇವರು ಶಿರಡಿ ಸಾಯಿಬಾಬಾರವರ ಬಗ್ಗೆ ಮತ್ತೆ ಎರಡು ಹೊಸ ಪುಸ್ತಕಗಳ ರಚನೆಯಲ್ಲಿ ತೊಡಗಿದ್ದು ಅವುಗಳು ಶೀಘ್ರದಲ್ಲೇ ಪ್ರಕಟಣೆಯಾಗಲಿವೆ.

ಇವರಿಗೆ 1998 ರಲ್ಲಿ ಶಿರಡಿ ಸಾಯಿಬಾಬಾರವರು ಸಾಕ್ಷಾತ್ಕಾರ ನೀಡಿ ಅನುಗ್ರಹಿಸಿದ್ದಾರೆ ಮತ್ತು ಈಗಲೂ ಕೂಡ ಅನುಗ್ರಹಿಸುತ್ತಿದ್ದಾರೆ. ಇವರ ಮನೆಯಾದ "ಶ್ರೀ ಸಾಯಿ ದರ್ಶನ" ದಲ್ಲಿ ಭಕ್ತರು ಇದನ್ನು ಕಣ್ಣಾರೆ ನೋಡಬಹುದು.

ಇವರು ಶ್ರೀಮತಿ.ಎನ್.ಎ.ವಿಜಯಲಕ್ಷ್ಮಿಯವರನ್ನು ವಿವಾಹವಾಗಿದ್ದಾರೆ. ಇವರಿಗೆ ಶ್ರೀ.ಎನ್.ಎ.ಶ್ರೀನಿವಾಸ, ಶ್ರೀ.ಎನ್.ಎ.ಬದರೀನಾಥ, ಶ್ರೀ.ಎನ್.ಎ.ಶ್ರೀಧರ ಮತ್ತು ಶ್ರೀ ಎನ್.ಎ.ನಾಗರಾಜ 4 ಗಂಡು ಮಕ್ಕಳು ಹಾಗೂ ಶ್ರೀಮತಿ.ಎನ್.ಎ.ಸುಧಾ ಎಂಬ ಒಬ್ಬಳು ಮಗಳಿದ್ದಾಳೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಮತ್ತು ಗಂಡು ಮಕ್ಕಳೊಂದಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  


ಶ್ರೀ.ಎನ್.ಎಸ್.ಅನಂತರಾಮು ಅವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀ ಸಾಯಿ ದರ್ಶನ, ನಂ.135, 2ನೇ ಮುಖ್ಯರಸ್ತೆ, 
ಏಜೀಸ್ ಕಾಲೋನಿ, ಆನಂದನಗರ, ಹೆಬ್ಬಾಳ,
ಬೆಂಗಳೂರು-560 024,
ಕರ್ನಾಟಕ, ಭಾರತ.

ದೂರವಾಣಿ ಸಂಖ್ಯೆಗಳು:
+91 80 2333 3835/ +91 98863 12692

ಇ-ಮೈಲ್ ವಿಳಾಸ:
saiamrith@yahoo.co.in


ಕನ್ನಡ ಅನುವಾದ: ಶ್ರೀಕಂಠ ಶರ್ಮ

ಶಿರಡಿ ಕೆ ಸಾಯಿಬಾಬಾ ಚಿತ್ರದ "ಸಾಯಿಬಾಬಾ" ಪಾತ್ರಧಾರಿ ನಟ - ಶ್ರೀ.ಸುಧೀರ್ ದಳವಿ- ಕೃಪೆ: ಸಾಯಿಅಮೃತಧಾರಾ.ಕಾಂ




ಶ್ರೀ.ಸುಧೀರ್ ದಳವಿಯವರು ಪ್ರಖ್ಯಾತ ಚಿತ್ರನಟರು ಹಾಗೂ ಶಿರಡಿ ಸಾಯಿಬಾಬಾ ಭಕ್ತರು. ದಿವಂಗತ ರಮಾನಂದ ಸಾಗರ್ ರವರ ಖ್ಯಾತ ಹಿಂದಿ ಧಾರಾವಾಹಿಯಾದ "ರಾಮಾಯಣ್" ನಲ್ಲಿ "ಗುರು ವಶಿಷ್ಟ" ರ ಪಾತ್ರ ಮಾಡುವ  ಮುಖಾಂತರ ಇವರು ಮೊದಲ ಬಾರಿಗೆ ಪ್ರಸಿದ್ಧಿಗೆ ಬಂದರಾದರೂ 1977 ರಲ್ಲಿ ಮನೋಜ್ ಕುಮಾರ್ ಗೋಸ್ವಾಮಿ ನಟಿಸಿ ನಿರ್ದೇಶಿಸಿದ "ಶಿರಡಿ ಕೆ ಸಾಯಿಬಾಬಾ" ಚಿತ್ರದ "ಸಾಯಿಬಾಬಾ" ಪಾತ್ರಧಾರಿಯಾಗಿ ಪ್ರಪಂಚದಾದ್ಯಂತ ಮನೆಮಾತಾದರು.

ಇವರು 20ನೇ ಅಕ್ಟೋಬರ್ 1939 ರಂದು ಮಹಾರಾಷ್ಟ್ರದ  ಥಾಣೆಯಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಇಂದುಪ್ರಭಾ ದಳವಿ ಮತ್ತು ತಂದೆ ದಿವಂಗತ ಪ್ರಭಾಕರ ದಳವಿ.

ಇವರು ವಾಸ್ತುಶಿಲ್ಪ ವಿಭಾಗದಲ್ಲಿ ಡಿಪ್ಲೊಮಾ ಹಾಗೂ ಪದವಿಯನ್ನು ಗಳಿಸಿ ಅನೇಕ ವರ್ಷಗಳ ಕಾಲ ಮುಂಬೈನ ಪ್ರಖ್ಯಾತ ವಾಸ್ತುಶಿಲ್ಪಿಗಳ ಹತ್ತಿರ ಆಂತರಿಕ ವಿನ್ಯಾಸಕರಾಗಿ ಕೆಲಸ ಮಾಡಿದ ನಂತರ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟರಾಗಿ ಅಭಿನಯಿಸಲು ಪ್ರಾರಂಭಿಸಿದರು. ಇವರು 1977 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.

ಇವರು ಶ್ರೀಮತಿ.ಸುಹಾಸ್ ರವರನ್ನು ಮದುವೆಯಾಗಿದ್ದು ಇವರಿಗೆ ರೋಹಿತ್ ಎಂಬ ಮಗನಿದ್ದಾನೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಮತ್ತು ಮಗನೊಂದಿಗೆ ತಮ್ಮ ಮುಂಬೈನ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  

ಶ್ರೀ ಸುಧೀರ್ ದಳವಿಯವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:

ರಂಗಭೂಮಿ:

ಹವ್ಯಾಸಿ ರಂಗಭೂಮಿ ಕಲಾವಿದರಾಗಿ 1962 ರಿಂದ 1969 ರವರೆಗೆ ಮುಂಬೈನ Theatre Unit, Indian People’s Theatre Association ಮತ್ತು ಇನ್ನು ಹಲವಾರು ಪ್ರಖ್ಯಾತ ರಂಗಭೂಮಿ ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ.

ವೃತ್ತಿಪರ ರಂಗಭೂಮಿ ಕಲಾವಿದರಾಗಿ 1970 ರಿಂದ 1979 ರವರೆಗೆ ಮುಂಬೈನ ಪ್ರಖ್ಯಾತ ರಂಗಭೂಮಿ ತಂಡಗಳೊಂದಿಗೆ ಕೆಲಸ ಮಾಡಿ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.


ಚಲನಚಿತ್ರ:

ಇವರು 1972 ರಲ್ಲಿ ಪ್ರಪ್ರಥಮ ಬಾರಿಗೆ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು ಹಾಗೂ 1976 ರಿಂದ ನಿಯಮಿತವಾಗಿ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಇವರು “27 Down Kashi Express” ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡುವ ಮುಖಾಂತರ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಇವರು 10 ಭಾರತೀಯ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮರಾಠಿ (38), ಹಿಂದಿ (200 ಕ್ಕೂ ಹೆಚ್ಚು), ಗುಜರಾತಿ (4), ಪಂಜಾಬಿ (2), ಅವಧಿ (1), ಬೆಂಗಾಳಿ (3), ಆಂಗ್ಲ (1), ಭೋಜಪುರಿ (3), ಮಾರವಾಡಿ ಹಾಗೂ ಉರ್ದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರು 1977 ರಲ್ಲಿ ಮನೋಜ್ ಕುಮಾರ್ ಗೋಸ್ವಾಮಿ ನಟಿಸಿ ನಿರ್ದೇಶಿಸಿದ "ಶಿರಡಿ ಕೆ ಸಾಯಿಬಾಬಾ" ಚಿತ್ರದ "ಸಾಯಿಬಾಬಾ" ಪಾತ್ರಧಾರಿಯಾಗಿ ಪ್ರಪಂಚದಾದ್ಯಂತ ಮನೆಮಾತಾದರು.ಇವರ "ಸಾಯಿಬಾಬಾ" ಪಾತ್ರದ ಅಭಿನಯ ಮಾಧ್ಯಮ ಮತ್ತು ಪ್ರೇಕ್ಷಕರ ಮೆಚ್ಚಿಗೆಯನ್ನು ಪಡೆಯಿತಷ್ಟೇ ಅಲ್ಲದೆ ಇವರಿಗೆ “Best Character Actor”  ಪ್ರಶಸ್ತಿಯನ್ನು ಕೂಡ ತಂದುಕೊಟ್ಟಿತು.



ಇವರು ನಟಿಸಿದ ಕೆಲವು ಪ್ರಮುಖ ಚಿತ್ರಗಳೆಂದರೆ: ಶಿರಡಿ ಕೆ ಸಾಯಿಬಾಬಾ, ಚಿರುತ, ಗೆಹರಾಯ್, ಪತಿತಪಾವನ್ ಮತ್ತು ಗುರು.

ಧಾರಾವಾಹಿಗಳು:
  
ಇವರು ಹಿಂದಿ, ಮರಾಠಿ, ಗುಜರಾತಿ ಮತ್ತು ಭೋಜಪುರಿ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರ ನಟನೆಯ ಧಾರಾವಾಹಿಗಳು ಎಲ್ಲಾ ಪ್ರಮುಖ ಟಿವಿ ಚಾನಲ್ ಗಳಲ್ಲೂ ಪ್ರಸಾರವಾಗುತ್ತಿವೆ.

ಇವರು ನಟಿಸಿರುವ ಕೆಲವು ಪ್ರಮುಖ ಧಾರಾವಾಹಿಗಳೆಂದರೆ: ದಿವಂಗತ ರಮಾನಂದ್ ಸಾಗರ್ ನಿರ್ದೇಶನದ “Ramayana”, ಶ್ಯಾಮ್ ಬೆನಗಲ್ ನಿರ್ದೇಶನದ “Bharat Ek Khoj”, ಪಂಡಿತ್ ಜವಾಹರ್ ಲಾಲ್ ನೆಹರು ರವರ “Discovery of India” ಆಧಾರಿತ ಹಾಗೂ ಪ್ರಖ್ಯಾತ ಉರ್ದು ಕವಿಯ ಜೀವನ ಆಧಾರಿತ “Mirza Galib”, ರಮೇಶ್ ಸಿಪ್ಪಿ ನಿರ್ದೇಶನದ “Buniyaad”, ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ “Chanakya”, ಶ್ರೀ.ಕಿಶನ್ ಸೇಥಿ ಮತ್ತು ರಮೇಶ್ ಮೆಹ್ತಾ ನಿರ್ದೇಶನದ “Junoon”,  ಶ್ರೀ.ಕಿಶನ್ ಸೇಥಿ ನಿರ್ದೇಶನದ “Ghutan”, ಟಿ-ಸೀರಿಸ್ ನಿರ್ಮಿಸಿ ಬಾಬುಭಾಯ್ ಮಿಸ್ತ್ರಿ ನಿರ್ದೇಶನ ಮಾಡಿದ “Shiv Mahapuran”, ಧೀರಜ್ ಕುಮಾರ್ ನಿರ್ದೇಶನದ “Om Namah Shivay” , ಶ್ರೀ ರವಿ ಚೋಪ್ರಾ ನಿರ್ದೇಶನದ “Vishnu Puran”, ಸೋನಿ ಅಗ್ನಿಹೋತ್ರಿ ನಿರ್ದೇಶನದ “Yug” , ಸಂತೋಷ್ ಬೆಹಲ್ ನಿರ್ದೇಶನದ “Kyonki Saas Bhi Kabhi Bahu Thi” ಮತ್ತು ಶ್ರೀ.ಪವನ್ ಸಾಹು ಮತ್ತು ರವಿರಾಜ್ ನಿರ್ದೇಶನದ “Shraddha”.

ಟೆಲಿಚಿತ್ರಗಳು:

ಇವರು 4 ಟೆಲಿಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜಾಹೀರಾತುಗಳು:

ಇವರು ವಿವಿಧ ಸಂಸ್ಥೆಗಳ ಉತ್ಪನ್ನಗಳ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.

ದೃಶ್ಯಶ್ರವ್ಯಗಳು:

ಇವರು ಸುಮಾರು 5 ದೃಶ್ಯಶ್ರವ್ಯಗಳಲ್ಲಿ ಅಭಿನಯಿಸಿದ್ದಾರೆ.

ಸಾಕ್ಷ್ಯಚಿತ್ರಗಳು:

ಇವರು ಅನೇಕ ಹಿಂದಿ ಮತ್ತು ಮರಾಠಿ ಸಾಕ್ಷ್ಯಚಿತ್ರಗಳಿಗೆ ವೀಕ್ಷಕ ವಿವರಣೆಯನ್ನು ನೀಡಿದ್ದಾರೆ.

ಪ್ರಶಸ್ತಿ / ಪುರಸ್ಕಾರಗಳು:

 1977 ರಲ್ಲಿ ಮನೋಜ್ ಕುಮಾರ್ ಗೋಸ್ವಾಮಿ ನಟಿಸಿ ನಿರ್ದೇಶಿಸಿದ "ಶಿರಡಿ ಕೆ ಸಾಯಿಬಾಬಾ" ಚಿತ್ರದ "ಸಾಯಿಬಾಬಾ" ಪಾತ್ರಕ್ಕಾಗಿ ಇವರಿಗೆ “Film World” ಪತ್ರಿಕೆಯ ವತಿಯಿಂದ “Best Character Actor”  ಪ್ರಶಸ್ತಿ ಲಭಿಸಿದೆ. 


ಶ್ರೀ.ಸುಧೀರ್ ದಳವಿಯವರ  ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:
C-703, ಗೋಕುಲ್ ರಿಜೆನ್ಸಿ II, ಠಾಕೂರ್ ಸಂಕೀರ್ಣ
ಕಂಡೀವಾಲಿ (ಪೂರ್ವ), ಮುಂಬೈ-400 101,  
ಮಹಾರಾಷ್ಟ್ರ, ಭಾರತ.

ದೂರವಾಣಿ ಸಂಖ್ಯೆಗಳು:
+91 22 2854 1484/ +91 98200 53301


ಅಭಿನಯದ ವೀಡಿಯೋಗಳು: 




ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, July 20, 2012

ಶಿರಡಿ ಸಾಯಿಬಾಬಾ ಆರತಿಯ ಹರಿಕಾರ ಮತ್ತು  ಬಹುಮುಖ ಪ್ರತಿಭೆಯ ಸಾಯಿಬಂಧು - ಶ್ರೀ.ಪ್ರಮೋದ್ ಮೇಧಿ- ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಪ್ರಮೋದ್ ಮೇಧಿ ಬಹುಮುಖ ಪ್ರತಿಭೆಯ ಸಾಯಿಬಂಧು. ಇವರು ಪ್ರಪಂಚದಾದ್ಯಂತ ಇರುವ ಶಿರಡಿ ಸಾಯಿಬಾಬಾ ಭಕ್ತವೃಂದಕ್ಕೆ ಚಿರಪರಿಚಿತರು. ಪ್ರಪಂಚದಾದ್ಯಂತ ಇರುವ ಸಾಯಿಭಕ್ತರು ಪ್ರತಿದಿನ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ಇವರು ಹಾಡಿರುವ "ಆರತಿ" ಯ ಧ್ವನಿಸುರುಳಿಯನ್ನು ಹಾಕುವ ಪರಿಪಾಠವನ್ನು ಇಟ್ಟುಕೊಂಡಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.  ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಪುರೋಹಿತರಾಗಿ, ಬೋಧಕರಾಗಿ ಹಾಗೂ ಪ್ರಖ್ಯಾತ ಸಾಯಿಭಜನ ಗಾಯಕರಾಗಿ ಪ್ರಪಂಚದಾದ್ಯಂತ ಮನೆ ಮಾತಾಗಿದ್ದಾರೆ.

ಇವರು 15ನೇ ಅಕ್ಟೋಬರ್ 1960 ರ ಪವಿತ್ರ ವಿಜಯದಶಮಿಯ ದಿನ ಮಧ್ಯಾನ್ಹ 2:45 ಕ್ಕೆ ಮಹಾರಾಷ್ಟ್ರದ  ಪುಣೆ ಜಿಲ್ಲೆಯ ನಂಗಾವ್ ನಲ್ಲಿ ಜನಿಸಿದರು. ಇವರು ಜನಿಸಿದ ದಿನ, ತಿಂಗಳು, ಮತ್ತು ಸಮಯವು ಶಿರಡಿ ಸಾಯಿಬಾಬಾರವರ ಮಹಾಸಮಾಧಿಯ ದಿನಕ್ಕೆ ತಾಳೆಯಾಗುವುದು ಒಂದು ವಿಶೇಷವೇ ಸರಿ! 

ಇವರ ತಾಯಿ ಶ್ರೀಮತಿ.ಮಂಜುಳ ಮತ್ತು ತಂದೆ ಶ್ರೀ.ರಂಗನಾಥ್.  ಇವರು ಪುಣೆಯ ಗಂಧರ್ವ ಮಹಾವಿದ್ಯಾಲಯದಿಂದ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಮಾಡಿದ್ದಾರೆ.ಇವರ ಧ್ವನಿಯು ಅತ್ಯಂತ ವಿಶಿಷ್ಟವಾಗಿದ್ದು ಭಜನ ಗಾಯನಕ್ಕೆ ಸರಿಹೊಂದುತ್ತದೆ.

ಇವರು 7ನೇ ಅಕ್ಟೋಬರ್ 1985 ರಂದು ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು. ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಪುರೋಹಿತರಾಗಿ ಅನೇಕ ವರ್ಷಗಳ ಕಾಲ ಪ್ರತಿದಿನ ಬೆಳಗಿನ ಕಾಕಡಾ ಆರತಿ ಹಾಗೂ ನಂತರದ ಭಜನೆಯನ್ನು ಹಾಡಿದ್ದಾರೆ. ಪ್ರಪಂಚದಾದ್ಯಂತ ಸಂಚರಿಸಿ ಅನೇಕ ಶಿರಡಿ ಸಾಯಿಬಾಬಾ ದೇವಾಲಯಗಳ ಉದ್ಘಾಟನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದ್ದಾರೆ. ಅನೇಕ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾವಿರಾರು ಭಕ್ತರಿಗೆ ಮಾರ್ಗದರ್ಶಕರಾಗಿ ವಿಧ್ಯುಕ್ತವಾಗಿ ಸಾಯಿಬಾಬಾರವರಿಗೆ ಅಭಿಷೇಕ, ಪೂಜೆ, ಅಷ್ಟೋತ್ತರ ಹಾಗೂ ಆರತಿಗಳನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ಸಾಯಿಬಾಬಾರವರ ಮತ್ತು ಸಾಯಿತತ್ವಗಳ ಬಗ್ಗೆ ಅನೇಕ ಪ್ರವಚನಗಳನ್ನು ಪ್ರಪಂಚದಾದ್ಯಂತ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಸಂಚರಿಸಿ ಹಲವಾರು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಸಾಯಿ ಭಜನೆಗಳ ಮುಖಾಂತರ ಭಕ್ತರನ್ನು ರಂಜಿಸಿದ್ದಾರೆ.

ಪ್ರಖ್ಯಾತ ಆಡಿಯೋ ಸಂಸ್ಥೆಗಳಾದ T-Series, Venus, Wings, Time Music, HMV ಮತ್ತು Saisha Music Company (ಇವರ ಸ್ವಂತ ಆಡಿಯೋ ಸಂಸ್ಥೆ) ಗಳಿಗೆ ಸಾಯಿ ಭಜನೆಗಳನ್ನು ಹಾಡಿದ್ದಾರೆ. 

ಇವರು ಶ್ರೀಮತಿ.ಜಯಶ್ರೀಯವರನ್ನು ವಿವಾಹವಾಗಿದ್ದಾರೆ ಮತ್ತು ಇವರಿಗೆ ಸಾಯೀಶಾ ಎಂಬ ಒಬ್ಬಳು ಮಗಳಿದ್ದಾಳೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಮತ್ತು ಮಗಳೊಂದಿಗೆ ತಮ್ಮ ಶಿರಡಿಯ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  


ಪ್ರಶಸ್ತಿಗಳು / ಸನ್ಮಾನಗಳು:

ಇವರಿಗೆ ಪ್ರಪಂಚದ ಎಲ್ಲಾ ಕಡೆಗಳಿಂದ ಹಾಗೂ ಸಾಯಿ ಮಂದಿರಗಳಿಂದ ಸಾವಿರಾರು ಪ್ರಶಸ್ತಿಗಳು ಬಂದಿರುತ್ತವೆ.

ಶ್ರೀ.ಪ್ರಮೋದ್ ಮೇಧಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:
ಸಾಯಿ ಸ್ವರ್ಗ, ಅಹಮದ್ ನಗರ - ಮನಮಾಡ ರಸ್ತೆ,
ಸಾಯಿಬಾಬಾ ನಗರ, ರೈಲು ನಿಲ್ದಾಣದ ಹತ್ತಿರ,  
ಲಕ್ಷ್ಮೀವಾಡಿ ಅಂಚೆ, ನೀಮಗಾವ್,
ಶಿರಡಿ - 423 109,
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.


ದೂರವಾಣಿ ಸಂಖ್ಯೆಗಳು:
+91 99758  86067/ +91 88888 88907 / +91 91588 52299

ಇ-ಮೈಲ್ ವಿಳಾಸ:
Pramod.medhi@gmail.com


ಫೇಸ್ ಬುಕ್ ಜೋಡಣೆ:

Pt.Pramod Medhi

ಆಲ್ಬಮ್ ಗಳು:
Sai Meri Raksha Karna, Shirdi Ke Saibaba Mandir Ki Aartiyan (ACD ಮತ್ತು VCD), Mera Sainath Tripurari, Thoda Dhyan Laga, Tu Do Kadam Bado, Aartiyan, Sai Teri Krupa Se, Om Sai Ram ಮತ್ತು ಇನ್ನು ಹಲವಾರು ಆಲ್ಬಮ್ ಗಳು. 

ಭಜನೆಯ ವೀಡಿಯೋಗಳು: 







 ಕನ್ನಡ ಅನುವಾದ ಶ್ರೀಕಂಠ ಶರ್ಮ  

Saturday, July 14, 2012

ಬಹುಮುಖ ಪ್ರತಿಭೆಯ ಸಾಯಿ ಭಜನ ಗಾಯಕ - ಶ್ರೀ.ಆರ್.ಕೆ.ಸಕ್ಸೇನಾ  - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ.ಆರ್.ಕೆ.ಸಕ್ಸೇನಾ ಬಹುಮುಖ ಪ್ರತಿಭೆಯ ಸಾಯಿ ಭಜನ ಗಾಯಕರು. ಇವರು ಒಬ್ಬ ಅತ್ಯುತ್ತಮ ಸಾಯಿ ಭಜನ ಗಾಯಕರು, ಗೀತ ರಚನಕಾರರು, ಕಾರ್ಯಕ್ರಮ ನಿರೂಪಕರು, ನಾಟಕಕಾರರು ಹಾಗೂ ನಿರ್ದೇಶಕರು.  ಇವರು 5ನೇ ಏಪ್ರಿಲ್ 1951 ರಂದು ಉತ್ತರಪ್ರದೇಶದ ರಾಮಪುರದಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಶ್ರೀಮತಿ.ಚಂದಾ ದೇವಿ ಮತ್ತು ತಂದೆ ದಿವಂಗತ ಶ್ರೀ.ಕಿಷನ್ ಸ್ವರೂಪ ಸಕ್ಸೇನಾ. ಇವರು ವಿಜ್ಞಾನದಲ್ಲಿ ಪದವಿಯನ್ನು ಹಾಗೂ ಭಾರತೀಯ ನಾಗರಿಕ ಸೇವಾ ಖಾತೆಯಲ್ಲಿ ಪದವಿಯನ್ನು ಗಳಿಸಿದ್ದಾರೆ. ಇವರು 1998 ರಲ್ಲಿ ಶಿರಡಿ ಸಾಯಿಬಾಬಾರವರ ಭಕ್ತರಾದರು. ಇವರ ಧ್ವನಿಯು ಅತ್ಯಂತ ಮಧುರ ಹಾಗೂ ಹೃದಯಸ್ಪರ್ಶಿಯಾಗಿದ್ದು ಯಾವುದೇ ಪ್ರಕಾರದ ಗಾಯನಕ್ಕೂ ಸರಿಹೊಂದುತ್ತದೆ. ಇವರು ದೆಹಲಿಯ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಕಲಾವಿದರು.

ಇವರು ಶ್ರೀಮತಿ.ಹಿಮಾಚಲ ಸಕ್ಸೇನಾರವರನ್ನು ವಿವಾಹವಾಗಿದ್ದಾರೆ ಮತ್ತು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ನಾಲ್ವರು ಮೊಮ್ಮಕ್ಕಳೊಂದಿಗೆ ತಮ್ಮ ನವದೆಹಲಿಯ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  

ಇವರ ಸಾಧನೆಯ ಹೆಜ್ಜೆಗುರುತುಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ಇವರು ದೆಹಲಿಯ ಕರೋಲ್ ಬಾಗ್ ನ ಅಪ್ಸರಾ ಜಾಹೀರಾತು ಸಂಸ್ಥೆಯವರು ಏರ್ಪಡಿಸಿದ್ದ ಫ್ಯಾಷನ್ ಶೋ ನ ನಿರ್ವಹಣೆಯನ್ನು ಮಾಡಿದ್ದಾರೆ. 

ಇವರು ಹಲವಾರು ಸುಪ್ರಸಿದ್ಧ ಕಾರ್ಯಕ್ರಮಗಳ ಆಯೋಜನೆ ಮತ್ತು ನಿರ್ವಹಣೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: Aao Mil Sur Deep Jalay, Kala Aur Kalakar, Gunjan Musical Evening, Lataji Ki Sur Latayen, Geet, Ghazal Aur Nriteya. ಈ ಕಾರ್ಯಕ್ರಮಗಳಲ್ಲಿ ಸುಪ್ರಸಿದ್ಧ ಗಾಯಕ/ಗಾಯಕಿಯರು, ಟಿವಿ ಕಲಾವಿದರು, ಗಜಲ್ ಗಾಯಕರು, ಕಥಕ್ ನೃತ್ಯಪಟುಗಳು ಭಾಗವಹಿಸಿದ್ದಾರೆ. ಅವರಲ್ಲಿ ಪ್ರಮುಖರಾದವರು: ನರೇಂದ್ರ ಚಂಚಲ್, ವಿನೋದ್ ರಾಥೋಡ್, ನಿಹಾರಿಕಾ, ಉರ್ಮಿಳಾ ನಗರ್, ಜೀತ ಸಿಂಗ್, ಶೋಭನಾ ನಾರಾಯಣ, ಭಾರತಿ ಗುಪ್ತಾ ಮತ್ತಿತರರು. ಈ ಕಾರ್ಯಕ್ರಮಗಳನ್ನು ಹೆಸರಾಂತ ಸಂಸ್ಥೆಗಳಾದ  ARTISTS FORUM, CREATIVE ART SOCIETY, AKANKSHA CULTURAL  SOCIETY, SUR-ARADHNA, SHAMA Groups ನವರು ಆಯೋಜಿಸಿದ್ದಾರೆ.

ಇವರು ಹಲವಾರು ವರ್ಷಗಳ ಕಾಲ ದೆಹಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಜನಪ್ರಿಯ ಚಲನಚಿತ್ರ ಗೀತೆಗಳ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.

ಇವರು ಭಾರತದ ಹಲವಾರು ರಾಜ್ಯಗಳಲ್ಲಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ, ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ದುಬೈ, ಮಲೇಶಿಯಾ, ಸ್ವೀಡನ್ ಮತ್ತು ಸಿಂಗಪೂರ್  ಗಳಲ್ಲಿ ತಮ್ಮ ಸಾಯಿಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಸಾಯಿಭಜನೆಗಳ ರಚನೆ ಹಾಗೂ ಸಂಗೀತ ಸಂಯೋಜನೆಯಲ್ಲಿ ಸಿದ್ಧಹಸ್ತರು.

ಇವರು ಶಾಬಾದ್ ಆಡಿಯೋ ಕ್ಯಾಸೆಟ್ ನ ವತಿಯಿಂದ ರಿಂಕಲ್ ಫಿಲಂಸ್ ನವರು ನಿರ್ಮಾಣ ಮಾಡಿ ಜಗಜಿತ್ ಸಿಂಗ್ ರವರು ಸಂಗೀತ ಸಂಯೋಜನೆ ಮಾಡಿರುವ  “BHAKTA KI TEK TOON” ಕ್ಯಾಸೆಟ್ ಗೆ ವ್ಯಾಖ್ಯಾನವನ್ನು ಮಾಡಿದ್ದಾರೆ.

ಆಲ್ ಇಂಡಿಯಾ ರೇಡಿಯೋ ದೆಹಲಿ-ಎ ನಲ್ಲಿ ಪ್ರಸಾರವಾದ “Ajkar Kare Na Chakri”  ಎಂಬ ರೇಡಿಯೋ ನಾಟಕದಲ್ಲಿ ಅಭಿನಯಿಸಿದ್ದಾರೆ.

ಇವರು ದೆಹಲಿಯ ಮಂಡಿ ಹೌಸ್ ನ ಅನೇಕ ಆಡಿಟೋರಿಯಂ ಗಳಲ್ಲಿ ನಡೆದ ಹಲವಾರು ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ಅವುಗಳಲ್ಲಿ ಪ್ರಮುಖವಾದವು ಹೀಗಿವೆ: ಶ್ರೀ.ಕೆ.ಎಂ.ಗೋವಿಲ್ ರವರ ನಿರ್ಮಾಣ ಮತ್ತು ನಿರ್ದೇಶನದ Jab Hum Na Honge, ದೆಹಲಿ ದೂರದರ್ಶನಕ್ಕಾಗಿ ಶ್ರೀ.ರಾಜೇಶ್ ದುವಾರವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ Aina, Yogi, ಮತ್ತು Beauty Contest, ಶ್ರೀ.ಪವನ್ ದುವೇದಿಯವರ Marni Jugni, ಶ್ರೀ.ಧರ್ಮವೀರರವರ ಸಹಯೋಗದಲ್ಲಿ ನಿರ್ಮಿಸಿದ Sanjog,  ಇವರ ರಚನೆ, ನಿರ್ಮಾಣ ಮತ್ತು ನಿರ್ದೇಶನದ Maan Gaye Ustad, Tees Saal Baad, Ek Vradh Ka Nirnay ಮತ್ತು Mere Bad Tumhara Kya Hoga.

ಇವರು ಪ್ರತಿ ತಿಂಗಳು ಬಿಡುಗಡೆಯಾಗುವ “Indradhanush” ವೀಡಿಯೋ ಮ್ಯಾಗಜೈನ್ ನ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಇವರು ಬ್ರಿಟಿಷ್ ಏರ್ ವೇಸ್ ನ ಮಾಡೆಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇವರು ಖ್ಯಾತ ನಿರ್ದೇಶಕರಾದ ಕೇತನ್ ಮೆಹತಾ ರವರ “Sardar Patel” ಚಿತ್ರದಲ್ಲಿ ನಟಿಸಿದ್ದಾರೆ.

ಇವರು 4 ನಾಟಕಗಳ ನಿರ್ಮಾಣ ಹಾಗೂ ನಿರ್ದೇಶವನ್ನು ಮಾಡಿದ್ದಾರೆ. ಅವುಗಳೆಂದರೆ: Maan Gaye Ustad, Yeh Kya Musibat Hai, Yahi TO Mera Kamaal Hai ಮತ್ತು Nehla Pe Dehla.

ಇವರು ಹಲವಾರು ಟೆಲಿಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: ಮುಂಬೈನ ಸತ್ಯಭಾನು ಸಿನ್ಹಾ ನಿರ್ದೇಶನದ BIKTA HUA ADMI, ನವದೆಹಲಿಯ ಪೈಗಾಮ್ ಸಂಸ್ಧೆ ನಿರ್ಮಾಣದ PANCH FAISLA, ದೆಹಲಿ ದೂರದರ್ಶನ ಕೇಂದ್ರಕ್ಕಾಗಿ ರಾಜೇಶ್ ದುವಾರವರು ನಿರ್ದೇಶಿಸಿದ DARD ಮತ್ತು AINA, ಎನ್.ಕೆ.ಮಾಥುರ್ ನಿರ್ಮಾಣ ಮತ್ತು ನಿರ್ದೇಶನದ QATIL KAUN, ಮುಂಬೈನ ರತನ್ ಸಿಂಗ್ ನಿರ್ದೇಶನದ KSHITIJ KE US PAAR, ದೆಹಲಿ ದೂರದರ್ಶನ ಕೇಂದ್ರಕ್ಕಾಗಿ ಪರ್ವೀಜ್ ರವರು ರಚಿಸಿ ಅಶೋಕ್ ಗಂಗವಾನಿಯವರು ನಿರ್ದೇಶನ ಮಾಡಿದ LAATHI.

ಇವರು ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: ಅಶೋಕ್ ನಿಷೇಧ್ ನಿರ್ದೇಶನದ AUR KISAAN JAAG UTHA, ಲಕ್ಷ್ಯ ರಾಜ್ ಫಿಲಂಸ್ ನಿರ್ಮಿಸಿ ಆರ್.ಕೆ.ರಾಜ ನಿರ್ದೇಶನ ಮಾಡಿದ JAZWAT, ದೂರದರ್ಶನಕ್ಕಾಗಿ ಚಂದ್ರ ಚೋಪ್ರಾರವರು ನಿರ್ದೇಶನ ಮಾಡಿದ 52 ಕಂತುಗಳ ಧಾರಾವಾಹಿ COUNSEL KAMAL, ಸುಮನ್ ಗಂಗೂಲಿ ನಿರ್ದೇಶನದ KHILAADI, ಅಮರ್ ಜಿತ್ ನಿರ್ದೇಶನದ POLICE TIME ಮತ್ತು ಆರ್.ಡಿ.ಶರ್ಮ ನಿರ್ದೇಶನದ DHRAMRIT.

ಇವರು ಹಲವಾರು ಟಿವಿ ಧಾರಾವಾಹಿಗಳನ್ನು ಹಾಗೂ ಟೆಲಿಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ: ಯೆಸ್ ವಾಹಿನಿಗಾಗಿ ನಿರ್ಮಾಣ ಮಾಡಿದ ಧಾರಾವಾಹಿ “Jazwat” , ಸತೀಶ್ ದೇ ರಚಿಸಿ   Banwari Jhol, Naresh Chowdhary, Monica Patel ಮತ್ತು Vinod Kumar ನಟಿಸಿದ ಟೆಲಿಚಿತ್ರ “Daon-Painch”.

ಇವರು ಆಲ್ ಇಂಡಿಯಾ ರೇಡಿಯೋಗಾಗಿ ನಿರ್ಮಾಣ ಮಾಡಿದ 3 ಧಾರಾವಾಹಿಗಳ ಮತ್ತು 9 ನಾಟಕಗಳ ಸ್ಕ್ರಿಪ್ಟ್ ನ   ರಚನೆಯನ್ನು ಮಾಡಿದ್ದಾರೆ.

ಇವರು 1 ವೀಡಿಯೋ ಸಿಡಿ ಹಾಗೂ 6 ಆಡಿಯೋ ಸಿಡಿಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: Sai Karange Bera Paar, Maine Pahen Liya Sai Chole, Sai Mera Tan Man Dhan, Sai Baba Aa Jao  ಮತ್ತು Saiji Tumhein Yaad Karein.

ಇವರು ನವದೆಹಲಿಯ ಓಂ ಸಾಯಿನಾಥ್ ಪಬ್ಲಿಕೇಷನ್ ಗ್ರೂಪ್ ಹಾಗೂ ಕಾನ್ಪುರದ ಶ್ರೀ ಸಾಯಿ ಮಂಡಳದ ವತಿಯಿಂದ  ನೀಡಿದ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. 

ಶ್ರೀ.ಆರ್.ಕೆ.ಸಕ್ಸೇನಾರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಫ್ಲಾಟ್ ಸಂಖ್ಯೆ: 355, 2ನೇ ಮಹಡಿ, ಡಿಡಿಎ,
ಎಸ್.ಎಫ್.ಎಸ್., 
ದ್ವಾರಕಾ, ಸೆಕ್ಟರ್-9,
ನವದೆಹಲಿ-110  075, ಭಾರತ.

ದೂರವಾಣಿ ಸಂಖ್ಯೆಗಳು:
+91 11 2808 2449 / +91 98111 26436 / +91 98113 13451

ಇ-ಮೈಲ್ ವಿಳಾಸ:
rajensai_saxena99@yahoo.co.in


ಫೇಸ್ ಬುಕ್ ಜೋಡಣೆ:
RK.SaxenaSaiBhajan SingerNewdelhi


ಅಂತರ್ಜಾಲ ತಾಣ:
http://www.rksaxena.com

ಭಜನೆಯ ವೀಡಿಯೋಗಳು:





ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, July 12, 2012

ಶಿರಡಿಯ ಸುತ್ತ ಮುತ್ತ ನೋಡಬೇಕಾದ ಸ್ಥಳ:    ಕೋಪರಗಾವ್ ನ ಶ್ರೀ ಸಾಯಿಧಾಮ್ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ 



ಶ್ರೀ ಸಾಯಿಧಾಮ್ ಮಂದಿರವು ಕೋಪರಗಾವ್ - ಮನಮಾಡ ಹೆದ್ದಾರಿಯಲ್ಲಿದೆ. ಇದು ಕೋಪರಗಾವ್ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿದೆ. ಈ ದೇವಾಲಯವನ್ನು 16ನೇ ಜೂನ್ 1999 ರಂದು ದಿವಂಗತ ಶ್ರೀ.ದೋಂಡಿರಾಮ್ ಬಾಬಾ ಚವಾಣ್ ರವರು ದೇವಾಲಯದ ಟ್ರಸ್ಟಿಗಳು ಹಾಗೂ ಹಲವಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಪ್ರಾರಂಭಿಸಿದರು.




ದೇವಾಲಯದ ಹೊರ ಆವರಣದ ದ್ವಾರದಲ್ಲಿ ಪವಿತ್ರ ಬೇವಿನ ಮರವಿರುತ್ತದೆ.  ಈ ಬೇವಿನ ಮರಕ್ಕೆ "ಮನೋಕಾಮನಾ ವೃಕ್ಷ" ಎಂದು ಕರೆಯುತ್ತಾರೆ. ಈ ಬೇವಿನ ಮರಕ್ಕೆ ಪ್ರತಿ ಗುರುವಾರ ಸಾಯಿಭಕ್ತರು ದಾರವನ್ನು ಕಟ್ಟುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಹೀಗೆ ದಾರವನ್ನು ಕಟ್ಟಿದರೆ ತಮ್ಮ ಇಚ್ಛೆಗಳು ಪೂರ್ಣವಾಗುತ್ತವೆ ಎಂಬ ನಂಬಿಕೆ ಸಾಯಿ ಭಕ್ತರಲ್ಲಿದೆ.

ದೇವಾಲಯದ ಹೊರ ಆವರಣದ ದ್ವಾರದಲ್ಲಿರುವ ಪವಿತ್ರ ಬೇವಿನ ಮರದ ಎದುರುಗಡೆ ಇರುವಂತೆ ಪುಣೆಯ ಸುಪ್ರಸಿದ್ಧ ಸಂತರಾದ ಶಂಕರ ಮಹಾರಾಜರ ದೇವಾಲಯವನ್ನು ಸ್ಥಾಪಿಸಲಾಗಿದೆ.




ಶಂಕರ ಮಹಾರಾಜರ ದೇವಾಲಯದ ಎದುರುಗಡೆ ಇರುವಂತೆ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದೆ. ಈ ಧ್ಯಾನಮಂದಿರದ ಅಮೃತಶಿಲೆಯ ಗೋಡೆಯಲ್ಲಿ ಸಾಯಿಬಾಬಾರವರ ಚಿತ್ರವು ತನ್ನಷ್ಟಕ್ಕೆ ತಾನೇ ರೂಪುಗೊಂಡಿರುತ್ತದೆ. ಧ್ಯಾನಮಂದಿರದಲ್ಲಿ ಸಾಯಿಬಾಬಾರವರು ಭಿಕ್ಷೆಗೆ ಹೋಗುತ್ತಿರುವ ತೈಲಚಿತ್ರವನ್ನು ತೂಗುಹಾಕಲಾಗಿದೆ. ಯಾವ ಕಡೆಯಿಂದ ನೋಡಿದರೂ ನಮ್ಮನ್ನೇ ಹಿಂಬಾಲಿಸುವ ಹಾಗೆ ಈ ಚಿತ್ರವನ್ನು ರಚಿಸಲಾಗಿದೆ.




ಗುರುಸ್ಥಾನದಲ್ಲಿ ಸಾಯಿಬಾಬಾರವರ ಭಾವಚಿತ್ರವನ್ನು ಇರಿಸಲಾಗಿದ್ದು ಅನೇಕ ಭಕ್ತರಿಗೆ ಈ ಭಾವಚಿತ್ರದಲ್ಲಿ ಸಾಯಿಬಾಬಾರವರ ಸಾಕ್ಷಾತ್ಕಾರವಾಗಿದೆ ಎಂದು ಹೇಳಲಾಗುತ್ತದೆ. ಗುರುಸ್ಥಾನದ ನೆಲದಲ್ಲಿ "ಓಂ" ಮತ್ತು "ತ್ರಿಶೂಲ" ವು ತನ್ನಷ್ಟಕ್ಕೆ ತಾನೇ ರೂಪುಗೊಂಡಿರುತ್ತದೆ. ಅಲ್ಲದೆ, ಶಿವಲಿಂಗ ಮತ್ತು ನಂದಿಯ ವಿಗ್ರಹಗಳನ್ನೂ ಕೂಡ ಗುರುಸ್ಥಾನದಲ್ಲಿ ನೋಡಬಹುದಾಗಿದೆ.




ಮುಖ್ಯ ದೇವಾಲಯದಲ್ಲಿ 6 ಅಡಿ ಎತ್ತರದ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವಿದೆ.ದೇವಾಲಯದ ಹೊರ ಆವರಣದಲ್ಲಿ ಕಪ್ಪುಶಿಲೆಯ ಶಿವಲಿಂಗ ಹಾಗೂ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.






ದೇವಾಲಯದ ಬಲಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.


25ನೇ ಮೇ 2012 ರಂದು ಸಮಾಧಿಸ್ಥರಾದ ದಿವಂಗತ ಶ್ರೀ.ದೋಂಡಿರಾಮ್ ಬಾಬಾ ಚವಾಣ್ ರವರ ಸಮಾಧಿಯನ್ನು ಮಂದಿರದ ಹೊರ ಆವರಣದಲ್ಲಿರುವ ಸುಂದರ ಹೂತೋಟದಲ್ಲಿ ಮಾಡಲಾಗಿದೆ.

ದೇವಾಲಯದ ಆವರಣದಲ್ಲಿರುವ ತೆಂಗಿನಮರದಲ್ಲಿ ಕ್ಯಾಮರಾ ಕಣ್ಣುಗಳ ಮುಖಾಂತರ ನೋಡಿದಾಗ ಭಕ್ತರಿಗೆ ಸಾಯಿಬಾಬಾರವರ ದರ್ಶನವಾಗುತ್ತದೆ.



ಆರತಿಯ ಸಮಯ:

ಕಾಕಡಾ ಆರತಿ         : 6:00
ಮಧ್ಯಾನ್ಹ ಆರತಿ        :12:00
ಧೂಪಾರತಿ              : ಸೂರ್ಯಾಸ್ತ ಸಮಯಕ್ಕೆ
ಶೇಜಾರತಿ               : 9:00

ಪ್ರತಿದಿನ ಬೆಳಿಗ್ಗೆ 5:00 ಕ್ಕೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 16ನೇ ಜೂನ್.
ಗುರುಪೂರ್ಣಿಮೆ.
ವಿಜಯದಶಮಿ.
ದತ್ತ ಜಯಂತಿ.
ಶ್ರೀರಾಮನವಮಿ.
ದೀಪಾವಳಿ.
ಹನುಮಾನ್ ಜಯಂತಿ.
ಶ್ರೀ.ದೋಂಡಿರಾಮ್ ಬಾಬಾ ಚವಾಣ್ ರವರ ಸಮಾಧಿ ದಿವಸ ಪ್ರತಿ ವರ್ಷ 25ನೇ ಮೇ.

ಪ್ರತಿ ವರ್ಷ 16ನೇ ಜೂನ್ ನಂದು ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಭಜನೆ ಹಾಗೂ ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ವರ್ಷದ ದತ್ತ ಜಯಂತಿಯಂದು ಗುಜರಾತ್ ನಿಂದ ಸುಮಾರು 300 ಕ್ಕೂ ಹೆಚ್ಚು ಸಾಯಿಭಕ್ತರು ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.

ದೀಪಾವಳಿಯ ಲಕ್ಷ್ಮೀ ಪೂಜೆಯ ದಿನದಂದು ಮಂದಿರದ ಆವರಣದಲ್ಲಿ ವಿಶೇಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಶ್ರೀರಾಮನವಮಿಯ ದಿನದಿಂದ ಗುಡಿ ಪಾಡ್ವದ ವರೆವಿಗೆ ಒಂಬತ್ತು ದಿನಗಳ ಕಾಲ ಸಾಯಿ ಸಚ್ಚರಿತ್ರೆಯ ಪಾರಯಣವನ್ನು ಹಮ್ಮಿಕೊಳ್ಳಲಾಗುತ್ತದೆ.



ದೇವಾಲಯದ ಸಂಪರ್ಕದ ವಿವರಗಳು:

ಶ್ರೀ ಸಾಯಿಧಾಮ ಮಂದಿರ
ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್,
ಅಂಬಿಕಾನಗರ, ಕೋಪರಗಾವ್ - ಮನಮಾಡ ರಸ್ತೆ,
ಕೋಪರಗಾವ್ - 423 601,
ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ಸುರೇಶ ದೋಂಡಿರಾಮ ಚವಾಣ್ / ಶ್ರೀ.ಏಕನಾಥ ದೋಂಡಿರಾಮ ಚವಾಣ್ / ಶ್ರೀ.ಸಾಯಿನಾಥ್ ಚವಾಣ್
ದೂರವಾಣಿ ಸಂಖ್ಯೆಗಳು: +91 2423 224300 / 221800
ಮೊಬೈಲ್ ಸಂಖ್ಯೆಗಳು: +91 97639 18088 / +91 97304 74646 / /+91 90963 72858
ಇ-ಮೈಲ್ ವಿಳಾಸ: trust@saidhamkopargaon.com / sainath.chavan1@gmail.com
ಅಂತರ್ಜಾಲ ತಾಣ: http://www.saidhamkopargaon.com


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, July 9, 2012

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ವತಿಯಿಂದ ಗುರುಪೂರ್ಣಿಮಾ ಉತ್ಸವದ ಆಚರಣೆಯ ಒಂದು ವರದಿ -  ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ಇದೇ ತಿಂಗಳ 3ನೇ ಜುಲೈ 2012, ಮಂಗಳವಾರ ದಂದು ರಾಜಾಜಿನಗರದ 3ನೇ ಬ್ಲಾಕ್ ನಲ್ಲಿರುವ ಶ್ರೀರಾಮಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. 


ಬೆಳಗಿನ ಕಾರ್ಯಕ್ರಮಗಳನ್ನು ರಾಜಾಜಿನಗರದ ರಾಮಮಂದಿರದಲ್ಲಿ ಆಯೋಜಿಸಲಾಗಿತ್ತು. ದಿನದ ಕಾರ್ಯಕ್ರಮಗಳು ಬೆಳಗಿನ ಜಾವ 6:30 ಕ್ಕೆ ಗಣಪತಿ ಹೋಮದೊಂದಿಗೆ ಪ್ರಾರಂಭವಾದವು. ನಂತರ 8:30 ರಿಂದ 9:00 ಗಂಟೆಯವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಅದಾದ ನಂತರ 9:30 ರಿಂದ 1:30 ರವರೆಗೆ ಗಾನ ಕೋಕಿಲ ವಿದ್ವಾನ್ ಶ್ರೀ.ಎಸ್.ಆರ್.ಮಾರುತಿಪ್ರಸಾದ್ ಮತ್ತು ತಂಡದವರಿಂದ ಸುಶ್ರಾವ್ಯವಾದ ಭಜನೆ ಕಾರ್ಯಕ್ರಮ ನಡೆಯಿತು. ಬೆಳಗಿನ ಕಾರ್ಯಕ್ರಮದ ಮುಕ್ತಾಯದ ಅಂಗವಾಗಿ ಸಾಯಿಬಾಬಾರವರಿಗೆ ಮಧ್ಯಾನ್ಹದ ಆರತಿಯನ್ನು ಬೆಳಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಯಿತು. 







ಸಂಜೆಯ ಕಾರ್ಯಕ್ರಮಗಳು ಸಂಜೆ 5:30 ಕ್ಕೆ ಟ್ರಸ್ಟ್ ನಿಂದ ಪಲ್ಲಕ್ಕಿ ಉತ್ಸವದೊಂದಿಗೆ ಪ್ರಾರಂಭವಾದವು. ಪಲ್ಲಕ್ಕಿಯನ್ನು  ರಾಜಾಜಿನಗರದ ಟ್ರಸ್ಟ್ ನ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಭವ್ಯವಾದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ರಾತ್ರಿ 8:30 ಕ್ಕೆ ಪಲ್ಲಕ್ಕಿಯು ಟ್ರಸ್ಟ್ ನ ಆವರಣಕ್ಕೆ ಹಿಂತಿರುಗಿದ ನಂತರ ಸಾಯಿಬಾಬಾರವರಿಗೆ ಶೇಜಾರತಿಯನ್ನು ಬೆಳಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಯಿತು. 





ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾವಿರಾರು ಸಾಯಿ ಭಕ್ತರು ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, July 7, 2012

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರಿ.ಪೃಥ್ವಿರಾಜ್ ಚವಾಣ್ ರವರು ಇದೇ ತಿಂಗಳ 7ನೇ ಜುಲೈ 2012, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಸಚಿವರಾದ ಶ್ರಿ.ಬಾಬನ್ ರಾವ್ ಪಚ್ಪುಟೆ, ಸಹಕಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರಿ.ಹರ್ಷವರ್ಧನ ಪಾಟೀಲ್, ವ್ಯವಸಾಯ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖ್ಹೆ ಪಾಟೀಲ್, ಅಹಮದ್ ನಗರದ ಜಿಲ್ಲಾ ಕಲೆಕ್ಟರ್ ಹಾಗೂ ಶಿರಡಿ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಡಾ.ಸಂಜೀವಕುಮಾರ್ ದಯಾಳ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರಿ.ಪೃಥ್ವಿರಾಜ್ ಚವಾಣ್ ರವರನ್ನು ಅಹಮದ್ ನಗರದ ಜಿಲ್ಲಾ ಕಲೆಕ್ಟರ್ ಹಾಗೂ ಶಿರಡಿ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಸದಸ್ಯರಾದ ಡಾ.ಸಂಜೀವಕುಮಾರ್ ದಯಾಳ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಸಚಿವರಾದ ಶ್ರಿ.ಬಾಬನ್ ರಾವ್ ಪಚ್ಪುಟೆ, ಸಹಕಾರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರಿ.ಹರ್ಷವರ್ಧನ ಪಾಟೀಲ್, ವ್ಯವಸಾಯ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖ್ಹೆ ಪಾಟೀಲ್ ಮತ್ತು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು.



ಕನ್ನಡ ಅನುವಾದ: ಶ್ರೀಕಂಠ ಶರ್ಮ